ಪ್ರಮುಖ ಸುದ್ದಿ
ಜಿಪಂ ಹಂಗಾಮಿ ಅಧ್ಯಕ್ಷರಾಗಿ ಗಿರೀಜಮ್ಮ ಪಾಟೀಲ್ ಅಧಿಕಾರ ಸ್ವೀಕಾರ
ಯಾದಗಿರಿ: ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಪಾಟೀಲ್ ವಜ್ಜಲ ಅವರು ರಾಜಿನಾಮೆ ನೀಡಿದ ಪರಿಣಾಮ ಅಧ್ಯಕ್ಷಸ್ಥಾನ ತೆರವಾಗಿರುವುದರಿಂದ ಜಿ.ಪಂ ಉಪಾಧ್ಯಕ್ಷ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ ಅವರು ಸೋಮವಾರ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಯೋಜನ ಅಧಿಕಾರಿ ಸುನೀಲ್ ಬಿಸ್ಕಾಸ್, ಯೋಜನಾ ನಿರ್ದೇಶಕ ಗುರುನಾಥ, ಪಿ. ಮಲ್ಲಿಕಾರ್ಜುನ, ಭೀಮಣ್ಣಗೌಡ ಕ್ಯಾತನಾಳ, ಸದಾಶಿವಪ್ಪಗೌಡ ಪಾಟೀಲ್ ರೋಟ್ನಡಗಿ, ಮಲ್ಲು ಶಿವಪೂರ ಇತರರು ಇದ್ದರು.