Homeಪ್ರಮುಖ ಸುದ್ದಿ
ಚೀನದಿಂದ 800 ನೌಕರರ ವರ್ಗಾವಣೆಗೆ ಮುಂದಾದ ಮೈಕ್ರೊಸಾಫ್ಟ್ ಕಂಪೆನಿ
ವಾಷಿಂಗ್ಟನ್: ಅಮೆರಿಕ ಹಾಗೂ ಚೀನಾ ನಡುವೆ ವ್ಯಾಪಾರ ಸಂಬಂಧ ಹದಗೆಟ್ಟಿದೆ. ಹೀಗಾಗಿ ಮೈಕ್ರೊಸಾಫ್ಟ್ ಕಂಪೆನಿ ಚೀನದಲ್ಲಿನ ತನ್ನ ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 800 ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಯೋಚಿಸಿದೆ.
800 ಸಿಬ್ಬಂದಿಗಳ ಪೈಕಿ ಚೀನಾ ನಾಗರಿಕರೇ ಹೆಚ್ಚಿದ್ದಾರೆ. ಸಿಬ್ಬಂದಿಗೆ ಅಮೆರಿಕ, ಐರ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾಗಳಿಗೆ ವರ್ಗಾವಣೆಗೊಳ್ಳಲು ಅವಕಾಶ ನೀಡಲಾಗಿದೆ.
ಇನ್ನು ಇತ್ತೀಚೆಗಷ್ಟೇ ಚೀನದಿಂದ ಅಮೇರಿಕಾಗೆ ಆಮದಾಗುತ್ತಿದ್ದ ಇ-ವಾಹನ, ಬ್ಯಾಟರಿ, ಕಂಪ್ಯೂಟರ್ ಚಿಪ್, ವೈದ್ಯಕೀಯ ಉತ್ಪನ್ನಗಳನ್ನು ಅಮೆರಿಕ ಅಧ್ಯಕ್ಷ ಬೈಡೆನ್ ಅವರು ಕಡಿತಗೊಳಿಸಿದ್ದರು.