
BIG BOSS 11 WINNER ಹಣಮಂತ
ಜಾನಪದ ಗಾರುಡಿಗನ ಕೈ ಸೇರಿದ ಬಿಗ್ ಬಾಸ್ ಗರುಡ
ವಿವಿ ಡೆಸ್ಕ್ಃ ಹಳ್ಳಿ ಹೈದ ಉತ್ತಮ ಜಾನಪದ ಗಾಯಕ ಹಣಮಂತ ಲಮಾಣಿ ಸೀಸನ್ ಬಿಗ್ ಬಾಸ್ 11 ಟ್ರೋಫಿಯನ್ನು ಹಣಮಂತ ತನ್ನದಾಗಿಸಿಕೊಂಡಿದ್ದಾನೆ.
ರನ್ನರ್ ಅಪ್ ಆಗಿ ತ್ರಿವಿಕ್ರಮ್ ಹೊರಹೊಮ್ಮಿದ್ದು, ರಜತ್ ಮತ್ತು ತ್ರಿವಿಕ್ರಮ್‌ರನ್ನು ಸೋಲಿಸಿ ಬಿಗ್ ಬಾಸ್ ವಿನ್ನರ್ ಆದ ಮುಗ್ಧ ಸ್ವಭಾವದ ಹುಡುಗ ಹಣಮಂತನ ಮುಕ್ತಕಂಠಕ್ಕೆ ಮುಗ್ಧ ಮಾತಿಗೆ ಸರಳ ಸ್ವಭಾವದ ಸುಗುಣಕ್ಕೆ ಮಾರು ಹೋಗಿ 5 ಕೋಟಿಗೂ ಅಧಿಕ ಮತಗಳನ್ನು ಪಡೆಯುವ ಮೂಲಕ ಹಣಮಂತು ಗೆಲುವು ತನ್ನದಾಗಿಸಿಕೊಂಡಿದ್ದಾನೆ.
ಹಣಮಂತನ ಗೆಲುವು ಕರ್ನಾಟಕ ಜನತೆಯ ನಿರೀಕ್ಷೆಗನುಗುಣವಾಗಿ ವಿಜಯಿಯಾಗಿದ್ದಾನೆ.