ಪ್ರಮುಖ ಸುದ್ದಿ

ಪಿಎಸ್ಐ ಬರ್ತಡೆ- ಹಾಲಿನ ಅಭಿಷೇಕ- ಪೊಲೀಸರಿಗಿಲ್ಲವೇ ಲಾಕ್ ಡೌನ್ ನಿಯಮ.?

ಪಿಎಸ್ಐ ಬರ್ತಡೆ ಸಂಬಂಧ ಹಾಲಿನ ಅಭಿಷೇಕ- ಎಲ್ಲಿದೆ ಲಾಕ್ ಡೌನ್ ನಿಯಮ..?

ವಿವಿ ಡೆಸ್ಕ್ಃ ಕೊರೊನಾ ಲಾಕ್ ಡೌನ್ ನಿಯಮ ಪಾಲಿಸಲು ಕಟ್ಟೆಚ್ಚರವಹಿಸಬೇಕಿದ್ದ ಪಿಎಸ್ಐ ಓರ್ವ ತನ್ನ ಜನುಮ ದಿನ ಅಂಗವಾಗಿ ಆತ್ಮೀಯರಿಂದ, ಹಿತೈಷಿಗಳಿಂದ ಭರ್ಜರಿ ಬರ್ತಡೆ ಮಾಡಿಕೊಂಡಿದ್ದು ಅಲ್ಲದೆ ಹಾಲಿನಿಂದ ಅಭಿಷೇಕ ಮಾಡಿಕೊಂಡ ಘಟನೆ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ನಡೆದಿದೆ.

ಪಿಎಸ್ ಮಲಗೋಡ ಎಂಬಾತನೇ ಲಾಕ್ ಡೌನ್ ನಿಯಮ ಮೀರಿ, ಯಾವುದೆ ಅಂತರವಿಲ್ಲದೆ ಸನ್ಮಾನ, ಹಾಲಿನ ಅಭಿಷೇಕ ಕೇಕೆ, ಚಪ್ಪಾಳೆ ಮಧ್ಯೆ ಬರ್ತಡೆ ದಿನ ಆಚರಿಸಿಕೊಂಡಿರುವದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೊರೊನಾ ಹಾವಳಿ‌ ಇದ್ದ ಪರಿಣಾಮ ಜನರಿಗೆ ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಕುರಿತು ಪರಿಶೀಲಿಸಿ ಜನರಿಗೆ ಬೆತ್ತದ ರುಚಿ ತೋರಿಸುವ ಪೊಲೀಸಪ್ಪ ಖುದ್ದಾಗಿ ತಾನೇ ಕಾನೂ‌ನು ನಿಯಮ ಮೀರಿ ಬರ್ತಡೇ ಮಾಡಿಕೊಂಡಿರುವದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಬೇಲಿಯೇ ಎದ್ದು ಹೊಲ‌ ಮೇಯ್ದಂತ ಕೆಲಸ ಮಾಡಿದ ಪಿಎಸ್ಐ ಎಂ.ಮಲಗೊಂಡ ವಿರುದ್ಧ ಸೂಕ್ತ ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button