ಮಗುವಿನ ಅಳು ನಿಲ್ಲಿಸಲು ಸುಲಭವೇ.? ಈ ಕಥೆ ಓದಿ
ಮಗುವಿನ ರೋದನ
ಒಂದು ದಿನ ಅಕ್ಬರನು ಆಸ್ಥಾನಕ್ಕೆ ಬಂದಾಗ ಮಂತ್ರಿಯಾದ ಬೀರಬಲ್ಲ ಇನ್ನೂ ಬಂದಿರಲಿಲ್ಲ. ತಕ್ಷಣ ಭಟರಿಗೆ ಅವನನ್ನು ಕರೆತರುವಂತೆ ಆಜ್ಞಾಪಿಸಿದ. ಒಂದು ಗಂಟೆಯೇ ಕಳೆದರೂ ಆತ ಬರಲಿಲ್ಲ. ಪುನಃ ಭಟರನ್ನು ಕಳಿಸಿದ. “ಬರುತ್ತೇನೆ” ಎಂದೇ ಹೇಳಿ ಮತ್ತೂ ಒಂದು ಗಂಟೆಯಾದ ನಂತರವೇ ಬಂದ.
ಕೋಪದಿಂದಲೇ ಅಕ್ಬರ್ ತಡವಾದ ಬಗ್ಗೆ ವಿಚಾರಿಸಿದ. “ನನ್ನ ಮಗು ಅಳುತ್ತಿತ್ತು. ಅದು ಅಳು ನಿಲ್ಲಿಸಿ ಸುಧಾರಿಸಲು ಇಷ್ಟು ಹೊತ್ತಾಯ್ತು ದೊರೆ” ಎಂದ ನಮ್ರನಾಗಿ, “ಮಗುವನ್ನು ಸಮಾಧಾನ ಪಡಿಸುವುದು ದೊಡ್ಡ ಕೆಲಸವೇ ? ಅದೇನು ಮಹಾ ? ನಾನೇ ಆಗಿದ್ದಲ್ಲಿ ಸಮಾಧಾನಪಡಿಸುತ್ತಿದ್ದೆ. ಬೇಕಾದರೆ ಕ್ಷಣಾರ್ಧದಲ್ಲೇ ತೋರಿಸುವೆ. ನೀನೀಗ ಮಗುವಾಗಿ ವರ್ತಿಸು. ನಾನು ತಂದೆಯಾಗಿ ನಟಿಸುವೆ” ಎಂದ ಅಕ್ಬರ್.
ತಕ್ಷಣ ಬೀರಬಲ ಉರುಳಾಡಿ ಕೂಗಲಾರಂಭಿಸಿದ. “ಯಾಕೆ ಮಗು ಅಳುವಿ ? ಏನು ಬೇಕು ?” “ನನಗೆ ಕಬ್ಬು ಬೇಕು” ಕಬ್ಬು ಬಂತು. ಅಳು ನಿಲ್ಲಲೇ ಇಲ್ಲ. ಅಪ್ಪಾ , ಕಬ್ಬಿನ ಸಿಪ್ಪೆ ತೆಗೆದುಕೊಡು, ಭಟರು ಕಬ್ಬಿನ ಸಿಪ್ಪೆ ತೆಗೆದರು.
ಅಳು ನಿಲ್ಲಲೇ ಇಲ್ಲ . ಕಬ್ಬನ್ನು ತುಂಡು ಮಾಡಿ ಕೊಡಬೇಕು, ಅಳುವಿ ? ಮತ್ತೂ ಅಳು ಜೋರಾಯಿತು. ಒಂದೇಟು ಕೊಟ್ಟು ಯಾಕಿನ್ನು “ತುಂಡು ಮಾಡಿದ ಕಬ್ಬನ್ನು ಕೂಡಲೇ ಕೂಡಿಸಪ್ಪಾ !” ಅದು ಸಾಧ್ಯವಿಲ್ಲ ಮಗೂ, ಬೇಗ ಅರ್ಥಮಾಡಿಕೋ ‘ ಅಳು ನಿಲ್ಲಲೇ ಇಲ್ಲ. ಆಗ ಅಕ್ಷರನಿಗೆ ಅರ್ಥವಾಯಿತು.
ದಮ್ಮಯ್ಯ, ನಾನು ಸೋತೆ. ಅಳಬೇಡ ಕಣೋ. ನನಗೀಗ ಅರ್ಥವಾಯಿತು ನಿನ್ನ ಸಮಸ್ಯೆ. ಕ್ಷಮಿಸಿ ಬಿಡು ಎಂದ ಮಹಾರಾಜ.
ನೀತಿ :– ಮಕ್ಕಳಿಲ್ಲದಿದ್ದರೂ ಚಿಂತೆ, ಇದ್ದರೂ ಒಂದು ಚಿಂತೆ, ಲಾಲನೆ ಪಾಲನೆ ಮಾಡುವುದು ಮಗದೊಂದು ಚಿಂತೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.