ಕಥೆ
ಹೈಕಮಾಂಡ್ ನಿರ್ಧಾರವೇ ಅಂತಿಮ – ನಿನ್ನೆ ಹೇಳಿಕೆಗೆ ಸಮಜಾಯಿಷಿ ನೀಡಿದ ಬಿಎಸ್ ವೈ
ಹೈಕಮಾಂಡ್ ನಿರ್ಧಾರವೇ ಅಂತಿಮ – ನಿನ್ನೆ ಹೇಳಿಕೆಗೆ ಸಮಜಾಯಿಷಿ ನೀಡಿದ ಬಿಎಸ್ ವೈ
ಕಾರ್ಯಕರ್ತರ ಒತ್ತಾಯಕ್ಕೆ ನಿನ್ನೆ ವಿಜಯೇಂದ್ರನ ಹೆಸರೇಳಿದ್ದೆ – BSY
ವಿವಿ ಡೆಸ್ಕ್ಃ ಶಿಕಾರಿಪುರ ಕ್ಷೇತ್ರಕ್ಕೆ ಮಗ ವಿಜಯೇಂದ್ರ ಮುಂದೆ ಚುನಾವಣೆಗೆ ನಿಲ್ಲಲಿದ್ದು, ನಾನು ಚುನಾವಣೆ ಕಣದಿಂದ ಹಿಂದೆ ಸರಿಯುವದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು.
ಆದರೆ ಇಂದ ಸಮಜಾಯಿಷಿ ನೀಡಿದ ಅವರು, ಮಗ ವಿಜಯೇಂದ್ರ ಯಾವ ಕ್ಷೇತ್ರದಲ್ಲೂ ನಿಂತರೂ ಗೆಲುವು ಸಾಧಿಸಲಿದ್ದಾರೆ. ನಿನ್ನೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಶಿಕಾರಿಪುರ ಕ್ಷೇತ್ರದಿಂದಲೇ ಮಗ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದೆ,
ವಿಜಯೇಂದ್ರ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೂ ಗೆಲ್ಲುವ ಸಾಮರ್ಥ್ಯ ಹೊಂದಿದ್ದು, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ನಡ್ಡಾ ಅವರ ಸಲಹೆ ಸೂಚನೆ ಜೊತೆಗೆ ನಿರ್ದೇಶನ ನೀಡಲಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಲಿದೆ ಎಂದಿದ್ದಾರೆ