
ವಾಕಿಂಗ್ ಬಳಗದಿಂದ ಯೋಗ ದಿನಾಚರಣೆ
ಪ್ರವರ್ಧನಮಾನಕ್ಕೆ ಬರುತ್ತಿರವ ಭಾರತದ ಪಾರಂಪರೆ- ರಾಚಯ್ಯ ಸ್ವಾಮಿ
yadgiri, ಶಹಾಪುರಃ ಹಲವಾರು ದೇಶಗಳ ಮೇಲೆ ಹಲವು ದಾಳಿಗಳು ನಡೆದು ಅಲ್ಲಿನ ಮನುಕುಲ ಪಾರಂಪರೆ ಹೇಳ ಹೆಸರಿಲ್ಲದಂತೆ ಹಾಳಾಗಿ ಹೋಗಿವೆ. ಆದರೆ ಭಾರತದ ಮೇಲೆ ನಿರಂತರ ದಾಳಿ ನಡೆದರೂ ಸಹ ಈ ನೆಲದ ಗುಣ ಶಕ್ತಿಯುತವಾಗಿದ್ದರಿಂದ ಇಂದಿಗೂ ಪ್ರಾಚೀನ ಚಿಂತನೆಗಳು ಮೊಳಕೆಯೊಡೆದು ಪ್ರವರ್ಧನಮಾನಕ್ಕೆ ಬರುತ್ತಿವೆ. ಉದಾಹರಣೆಗೆ ಯೋಗ ಶಾಸ್ತ್ರವೇ ನೋಡಿ ನಮ್ಮ ಸಂಸ್ಕೃತಿ, ಪಾರಂಪರೆಯಲ್ಲಿ ಒಂದಾಗಿದ್ದ ಯೋಗ ಪ್ರಸ್ತುತ ನಾಗರಿಕ ಸಮಾಜದ ಮುಂಚೂಣಿಗೆ ಬರುತ್ತಿದೆ ಎಂದು ಹಿರಿಯರಾದ ರಾಚಯ್ಯ ಸ್ವಾಮಿಗಳು ಅಭಿಪ್ರಾಯ ಪಟ್ಟರು.
ನಗರದ ಮಾದರಿ ವಿದ್ಯಾಲಯದ ಬಳಿ ಅಂತರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಶನಿವಾರ ಬೆಳಗ್ಗೆ ವಾಕಿಂಗ್ ಬಳಗದಿಂದ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯೋಗ ನಿತ್ಯ ಮಾಡುವ ಮೂಲಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬಹುದು. ದೇಶದ ಋಷಿಮುನಿಗಳು ಅದರಲ್ಲೂ ಪತಂಜಲಿ ಋಷಿಗಳು ನಮ್ಮ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಯೋಗ ಮಾಡುವದರಿಂದ ಅನಾರೋಗ್ಯ ಹತ್ತಿರಕ್ಕೂ ಸುಳಿಯುವದಿಲ್ಲ. ಅಲ್ಲದೆ ನಿತ್ಯ ಉಲ್ಲಾಸಭರಿತವಾಗಿ ಜೀವನ ಸಾಗಲಿದೆ. ಹೀಗಾಗಿ ಬಾಲ್ಯದಿಂದಲೇ ಮಕ್ಕಳಿಗೆ ಯೋಗ ಅಭ್ಯಾಸ ಮಾಡಿಸಬೇಕು. ಅದು ದಿನಚರಿಯಲ್ಲೊಂದು ಭಾಗವಾಗಿ ರೂಢಿಸಿಕೊಳ್ಳಬೇಕೆಂದ ಕರೆ ನೀಡಿದರು.
ಸುಮಾರ ೩೦ ನಿಮಿಷ ಯೋಗ ಅಭ್ಯಾಸ ಮಾಡಲಾಯಿತು. ಯೋಗ ಪಟು ಶಾಂತು ತೋಟಗೇರ ಯೋಗ ಅಭ್ಯಾಸ ಮಾಡಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳಾದ ಜಗಧೀಶ ಹೊನ್ಕಲ್, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಗಂಧದಮಠ, ಶರಣಗೌಡ ಕಟ್ಟಿಮನಿ, ಶರಣು ಪಾಲ್ಕಿ, ವಸಂತಕುಮಾರ ದಂಡು, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಪಾಶಾ ಪಟೇಲ್, ಮಲ್ಲಿಕಾರ್ಜುನ ಬುಕಿಸ್ಟಗಾರ, ಉಮೇಶ ಬಾಗೇವಾಡಿ, ಬಸವರಾಜ ಚೌದ್ರಿ ಇತರರಿದ್ದರು.