ಪ್ರಮುಖ ಸುದ್ದಿ
ಗೋಡ್ಸೆ ಅನುಯಾಯಿಗಳು ನನ್ನನ್ನೂ ಕೊಲ್ಲುವ ಸಾಧ್ಯತೆಯಿದೆ -ಓವೈಸಿ
ಹೈದರಾಬಾದ್: ಗೋಡ್ಸೆ ಅನುಯಾಯಿಗಳು ನನ್ನನ್ನೂ ಸಹ ಗಾಂಧೀಜಿ ಅವರಂತೆ ಹತ್ಯೆ ಮಾಡುವ ಸಾಧ್ಯತೆ ಇದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಪ್ರಾತಿನಿಧ್ಯ 370ವಿಧಿಯನ್ನು ದುರುದ್ದೇಶದಿಂದ ಕೇಂದ್ರ ಸರ್ಕಾರ ರದ್ದು ಪಡಿಸಿದೆ. ಈ ಬಗ್ಗೆ ನಾನು ತೀವ್ರ ವಿರೋಧ ವ್ಯಕ್ತಪಡಿಸಿದ್ದೇನೆ. ದೇಶದ ವಿವಿದೆಡೆಯೂ ಅದೇ ಮಾದರಿಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಆದರೆ, ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ಮಾತ್ರ ರದ್ದು ಮಾಡಲಾಗಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ ಓವೈಸಿ ನನ್ನ ವಿರುದ್ಧವೂ ಗೋಡ್ಸೆ ಅನುಯಾಯಿಗಳು ಕೆಂಡಕಾರುತ್ತಿದ್ದಾರೆ. ನನ್ನನ್ನು ಒಂದು ದಿನ ಗಾಂಧೀಜಯವರನ್ನು ಹತ್ಯೆ ಮಾಡಿದಂತೆ ಮಾಡುತ್ತಾರೆಂದು ನನಗೆ ಅನ್ನಿಸುತ್ತಿದೆ ಎಂದು ಓವೈಸಿ ಹೇಳಿದ್ದಾರೆ.