ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆಃ ಶಹಾಪುರದಲ್ಲಿ ಕಾರ್ಯಕರ್ತರ ಸಂಭ್ರಮ
ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ
ಯುಪಿ ಮತ್ತೊಮ್ಮೆ ಅಧಿಕಾರಕ್ಕೆ ಬಿಜೆಪಿ ಪಟಾಕಿ ಸಿಡಿಸಿ ಸಂಭ್ರಮ
yadgiri, ಶಹಾಪುರಃ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳಿಗೆ ದೇಶದಲ್ಲಿ ಅಭೂತಪೂರ್ವ ಮನ್ನಣೆ ದೊರೆತಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿಯಲಿರುವ ಈ ಶುಭ ಸಂದರ್ಭದಲ್ಲಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಪ್ರಾಧಿಕಾರಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ, ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಸತತವಾಗಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಐತಿಹಾಸಿಕ ದಾಖಲೆ ಮೆರೆದಿದೆ. ಅದೇ ರೀತಿ ಗೋವಾದಲ್ಲೂ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಉತ್ತರಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ. ಇದು ಪ್ರಧಾನಿ ಮೋದಿ ಹಾಗೂ ಯೋಗಿ ಅವರ ಜೋಡಿಗೆ ಜನ ಮನ್ನಣೆ ನೀಡಿರುವದು ಕಂಡು ಬರುತ್ತಿದೆ. ಅವರು ಜಾರಿಗೊಳಿಸಿದ ಜನಪರ ಯೋಜನೆಗಳು ಅಭಿವೃದ್ಧಿ ಮಂತ್ರಗಳೇ ಗೆಲುವಿಗೆ ಸೋಪಾನವಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಪರ, ಮೋದಿ ಮತ್ತು ಯೋಗಿ ಜೋಡಿಗೆ ಜಯ ಘೋಷಣೆಗಳು ಮೊಳಗಿದವು.
ಈ ಸಂದರ್ಭದಲ್ಲಿ ಡಾ.ಚಂದ್ರಶೇಖರ ಸುಬೇದಾರ, ನಗರ ಘಟಕ ಅಧ್ಯಕ್ಷ ದೇವು ಕೋನೇರ, ಚಂದ್ರು ಯಾಳಗಿ, ಭೀಮಾಶಂಕರ ಕಟ್ಟಿಮನಿ, ರಾಘವೇಂದ್ರ ಯಕ್ಷಿಂತಿ, ಕರಿಬಸವ ಅಣಬಿ, ಅಬ್ದುಲ್ ಹಾದಿಮನಿ, ರಾಜೂ ಬಾಣತಿಹಾಳ, ಸುಭಾಷ ತಳವಾರ ಸೇರಿದಂತೆ ಇತರರಿದ್ದರು.