ಪ್ರಮುಖ ಸುದ್ದಿ
ಕನ್ನಡ ನಾಡಲ್ಲಿ ಮತ್ತೆ ಮತ್ತೆ ಹುಟ್ಟುವಾಸೆ- ಸುಧಾಮೂರ್ತಿ
ಕೊಡಗು ಸಂತ್ರಸ್ಥರಿಗಾಗಿ ಮೆನೆಗಳ ನಿರ್ಮಾಣ ಇನ್ಫೋಸಿಸ್ ನಿಂದ 25 ಕೋಟಿ
ಮೈಸೂರಃ ವಿಶ್ವವಿಖ್ಯಾತ ದಸರಾಗೆ ತಾಯಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಇನ್ಫೋಸಿಸ್ ಅಧ್ಯಕ್ಷೆ ಸುಧಾಮುರ್ತಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು ಬಲು ಸುಂದರ. ಇಂತಹ ಸಾಂಸ್ಕೃತಿಕ ನಾಡಲ್ಲಿ ಮತ್ತೆ ಮತ್ತೆ ಹುಟ್ಟುವ ಆಸೆ ನನಗಿದೆ.
ದಸರಾ ಕಾರ್ಯಕ್ರಮ ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವದು ಪೂರ್ವಜನ್ಮದ ಪುಣ್ಯ. ಸರ್ಕಾರದ ಕೆಲಸದ ಜೊತೆ ಕೈಜೋಡಿಸುವದು ನಮ್ಮ ಕರ್ತವ್ಯ.
ಮೈಸೂರ ರಾಜರ ಕೊಡುಗೆ ಅಪಾರ. ಕೊಡಗಿನಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದೆ. ಅಲ್ಲಿ ಸುಮಾರು 25 ಕೋಟಿಯಲ್ಲಿ ಮನೆಗಳನ್ನು ನಿರ್ಮಿಸುವ ಜವಬ್ದಾರಿ ಹೊತ್ತಿದ್ದೇನೆ.
ಸಮಯ ಸಂದರ್ಭನುಸಾರ ನಾಡಿನ ಅಭಿವೃದ್ಧಿಗೆ ಪ್ರತಿಷ್ಠಾನ ಸಹಕಾರ ನೀಡುತ್ತಾ ಬಂದಿದೆ. ಅದರಂತೆ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ಮನೆ ಆಸ್ತಿ ಸಂಪತ್ತು ಕಳಕೊಂಡ ಸಂತ್ರಸ್ಥರಿಗಾಗಿ ಮನೆ ನಿರ್ಮಾಣ ಮಾಡಲಾಗುವುದು. ಕೈಲಾದ ಸಹಾಯ ಸಹಕಾರ ನೀಡುವದು ಇನ್ಫೋಸಿಸ್ ಪ್ರತಿಷ್ಠಾನದ ಉದ್ದೇಶವೆಂದು ತಿಳಿಸಿದರು.