ವಿಶೇಷ ಸ್ಥಾನಮಾನದಿಂದ ಶೈಕ್ಷಣಿಕ ಅಭಿವೃದ್ಧಿ-ದರ್ಶನಾಪುರ
ಭೀ.ಗುಡಿ ಪಿಯು ಕಾಲೇಜು ಕಟ್ಟಡ ಲೋಕಾರ್ಪಣೆ
ಯಾದಗಿರಿ, ಶಹಾಪುರಃ ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿರುವ ಹಿನ್ನೆಲೆ ಹೈಕ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೀಸಲಿನಡಿ ಅವಕಾಶ ದೊರೆಯುತ್ತಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ತಾಲೂಕಿನ ಭೀಮರಾಯನ ಗುಡಿಯಲ್ಲಿ 2016-17 ನೇ ಸಾಳಿನ ಸಬಾರ್ಡ್ ಆರ್.ಐ.ಡಿ.ಎಫ್. 22 ಯೋಜನೆಯ ಅನುದಾನದಲ್ಲಿ ನಿರ್ಮಾಣಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜು ಎರಡು ಕೋಣೆಗಳ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
371 ವಿಶೇಷ ಸ್ಥಾನಮಾನದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಅಧಿಕ ಲಾಭವಾಗುತ್ತಿದೆ. ಹಿಂದುಳಿದ ಪ್ರದೇಶದ ಶೈಕ್ಷಣಿಕ ಅಭಿವೃದ್ಧಿಗೂ ಹೆಚ್ಚು ಸಹಕಾರವಾಗಿದೆ.
50 ಲಕ್ಷ ರೂ. ವೆಚ್ಚದಲ್ಲಿ ಕೋಣೆಗಳು ನಿರ್ಮಾಣವಾಗಿದ್ದು, ಅದರ ಶುಚಿತ್ವ ಕಾಪಾಡಿಕೊಳ್ಳಬೇಕು. ಶಾಲೆ ದೇವಾಲಯವಿದ್ದಂತೆ ಅದನ್ನು ಹಾಗೇ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು. ಶಾಲೆಯಲ್ಲಿ ದೊರೆಯುವ ಸೌಲಭ್ಯ ಬಳಸಿಕೊಂಡು ಚನ್ನಾಗಿ ಓದುವ ಮೂಲಕ ಶಾಲೆಗೆ ಮತ್ತು ಪಾಳಕರ ಕೀರ್ತಿ ಹೆಚ್ಚಿಸಬೇಕೆಂದು ಕರೆ ನೀಡಿದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಭೀ.ಗುಡಿಯಲ್ಲಿ ಅಡಿಟೋರಿಯಲ್ ನಿರ್ಮಾಣ ಮಾಡಲಾಗುತ್ತಿದೆ. ಈ ಕುರಿತು ಅನುದಾನ ಮಂಜೂರಿಗೊಳಿಸಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಯಾದಗಿರಿ ಜಿಲ್ಲಾ ಕಾಲೇಜು ಶಿಕ್ಷಣ ಉಪ ನಿರ್ದೇಶಕ ಗುರುಲಿಂಗಪ್ಪ ಮಿಣಜಿಗಿ, ಯಾದಗಿರಿ ಕಾ.ನಿ.ಅಭಿಯಂತರ ಶ್ರೀಕಾಂತ ಅಗ್ನಿಹಾಳ, ಜಿ.ಪಂ. ಎಇಇ ಶರಣಗೌಡ ಕುರಕುಂದಿ, ಜೆಇ ಸೂಗರಡ್ಡಿ ಪಾಟೀಲ್, ಬಕ್ಕಪ್ಪ ಸೇರಿದಂತೆ ಮುಖಂಡರಾದ ಶಿವಮಹಾಂತ ಚಂದಾಪುರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್, ಗುತ್ತಿಗೆದಾರರಾದ ಎನ್.ಎಸ್.ಪಾಟೀಲ್, ಮಲ್ಲಪ್ಪ ಗೋಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಉಪನ್ಯಾಸಕ ದೇವಿಂದ್ರಪ್ಪ ಮಡಿವಾಳಕರ್ ನಿರೂಪಿಸಿ ವಂದಿಸಿದರು.