ಕ್ಯಾಂಪಸ್ ಕಲರವಸಂಸ್ಕೃತಿ

ಕೃಷಿ ಮಹಾವಿದ್ಯಾಲಯಗಳ ಯುವಜನೋತ್ಸವ 2018-19

ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ-ಡಾ.ಮಂಜುನಾಥ

ವಿದ್ಯಾರ್ಥಿಗಳಿಂದ ಸಂಭ್ರಮದ ಸಾಂಸ್ಕೃತಿಕ ಕಲರವ

ಯಾದಗಿರಿ, ಶಹಾಪುರಃ ಪ್ರಸ್ತುತ ಯುವಶಕ್ತಿ ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಶ್ರಧ್ಧೆ, ಕಾಯಕ ನಿಷ್ಠೆಯಿಂದ ಕೆಲಸ ಮಾಡಿ ಸಮಾಜಕ್ಕೆ ತನ್ನದೆಯಾದ ಕೊಡುಗೆ ಸಲ್ಲಿಸಬೇಕು ಹಾಗೂ ಯುವಜನೋತ್ಸವದಂತಹ ಕ್ರೀಯಾಶೀಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕೆಂದು ಈಸ್ಟ್ ಏಷಿಯಾ ಶುಗರ್ ಗ್ರೂಪ್ ಪ್ರಧಾನ ವ್ಯವಸ್ಥಾಪಕ ಜೈನ್ ಡಾ.ಮಂಜುನಾಥ ಎಸ್.ರಾವ್ ಯುವ ಸಮೂಹಕ್ಕೆ ಕರೆ ಕೊಟ್ಟರು.

ಸಮೀಪದ ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿಯಲ್ಲಿ ಆಯೋಜಿಸಿರುವ ದಶಮಾನ ಅಂತರ ಮಹಾವಿದ್ಯಾಲಯಗಳ ಯುವಜನೋತ್ಸವ 2018-19ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವ ಸಮೂಹ ನೂತನ ಚಿಂತನೆಗೆ ಸಮಯ ನೀಡಿ. ಹೊಸ ಆಯಾಮಗಳ ಮೂಲಕ ಹೊಸತನ್ನು ಕಂಡು ಹಿಡಿಯಿರಿ.

ಸರಳ ಮತ್ತು ಆರ್ಥಿಕ ಸದೃಢತೆಗೆ ಬೇಕಾದ ವಿವೇಚನೆ ಮೂಲಕ ಹೆಜ್ಜ ಹಾಕಿರಿ. ಸಾಧನೆಗೆ ನಿರಂತರ ಶ್ರಮ ಅಗತ್ಯ. ಹಿರಿಯರ ಗುರುಗಳ ಮಾರ್ಗದರ್ಶನದಲ್ಲಿ ಮುನ್ನುಗ್ಗಿ. ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕಾದಲ್ಲಿ ನೀಡಿದ ಕೆಲಸಕ್ಕೆ ಸೀಮಿತವಾಗಿ ಕೆಲಸ ಮಾಡದೇ ಅದರಲ್ಲಿಯೂ ಹೊಸತನ್ನು ಹುಡುಕಿ. ಹೆಚ್ಚಿನ ಲಾಭ ಭದ್ರತೆ ಕುರಿತು ಯೋಚಿಸಿ ಆ ಕುರಿತು ಕ್ರಮಕ್ಕೆ ಮುಂದಾಗಿ ಎಂದು ಕರೆ ನೀಡಿದರು.

ಉದಯೋನ್ಮುಖ ಬರಹಗಾರ ಮಹಾಂತೇಶ ನವಲಕಲ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬಂದಂತಹ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ತಮ್ಮ ಕಾರ್ಯದಲ್ಲಿ ಪರಿಣಿತಿಯನ್ನು ಹೊಂದಬೇಕು.
ಕೇವಲ ಅಂಕಗಳನ್ನು ಗಳಿಸಿದರೇ ಸಾಲದು ಸಮಾಜದಲ್ಲಿ ಹೇಗೆ ಬದುಕಬೇಕು. ಅದರ ಜೊತೆಗೆ ಉತ್ತಮ ನಾಗರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯುವಜನೋತ್ಸವಗಳಂತಹ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸಮಾಜದ ಏಳಿಗೆಗಾಗಿ ತನ್ನದೇ ಆದ ಕೊಡುಗೆಯನ್ನು ನೀಡಬೇಕೆಂದು ಕಿವಿಮಾತು ಹೇಳಿದರು.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಅಮರೇಶ ಬಲ್ಲಿದ್ ಮಾತನಾಡಿ, ವಿದ್ಯಾರ್ಥಿಗಳ ಸಾರ್ಥಕ ಬದುಕಿಗೆ ನಿರಂತರ ಶ್ರಮ ಅಗತ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಂದಿಲ್ಲೊಂದು ವಿದ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯೆಯನ್ನು ಗಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರುಗಳಾದ ಡಾ.ಎಂ.ಶೇಖರಗೌಡ, ಸಿದ್ದಪ್ಪ ಭಂಡಾರಿ ಸೇರಿದಂತೆÉ ಡಾ.ಐ.ಶಂಕರೇಗೌಡ, ಡೀನ್ (ಸ್ನಾತಕೋತ್ತರ), ಡಾ. ಎಂ. ಭೀಮಣ್ಣ ಡೀನ್ (ವಿದ್ಯಾರ್ಥಿ ಕ್ಷೇಮಾಭಿವೃದ್ಧಿ), ಡಾ.ಸುರೇಶ ಎಸ್.ಪಾಟೀಲ್ ಡೀನ್ (ಕೃಷಿ), ಡಾ. ಡಿ.ಎಮ್. ಚಂದರಗಿ ಡೀನ್ (ಕೃಷಿ), ಡಾ. ಎಂ. ವೀರನಗೌಡ ಡೀನ್ (ಕೃ.ತಾಂ.)ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲನೆ ದಿನದಂದು ರಸಪ್ರಶ್ನೆ (ಲಿಖಿತ) ರಂಗಸ್ವರ್ಧೆಗಳಾದ ಮೂಕಾಭಿನಯ, ಏಕಾಭಿನಯ, ಪ್ರಹಸನ, ಸ್ಥಳದಲ್ಲಿಯೇ ಚಿತ್ತ ಬಿಡಿಸುವ ಸ್ವರ್ಧೆ, ಭಿತ್ತಿ ಚಿತ್ರ ರಚನೆ ಸ್ವರ್ಧೆ, ಏಕಾಂತ ನಾಟಕಗಳು ಮತ್ತು ಸಮೂಹಗಾಯನಗಳು ಆಯೋಜಿಸಲಾಗಿತ್ತು.

ಪ್ರಾಧ್ಯಪಕರಾದ ಡಾ.ಯಂಜೇರಪ್ಪ, ಅಮರ ಹಮ್ಮಾ ನಿರೂಪಿಸಿದರು. ಡಾ.ಕೆ.ಎ.ಹಿರೇಮಠ ವಂದಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನಸೆಳೆದವು.

Related Articles

Leave a Reply

Your email address will not be published. Required fields are marked *

Back to top button