ಶಹಾಪುರ ವಿಶ್ವರಾಧ್ಯರ ರಥೋತ್ಸವ ಸಂಪನ್ನ
ಯಾದಗಿರಿ, ಶಹಾಪುರಃ ತಾಲೂಕಿನ ಅಪ್ಪನ ಶಖಾಪುರ ಗ್ರಾಮದ ವಿಶ್ವರಾಧ್ಯರ ಜಾತ್ರಮಹೋತ್ಸವ ಅಂಗವಾಗಿ ಶನಿವಾರ ಮಹಾ ರಥೋತ್ಸವ ಸಂಭ್ರಮದಿಂದ ಜರುಗಿತು.
17 ವರ್ಷದ ಜಾತ್ರಾ ಮಹೋತಸವ ಇದಾಗಿದ್ದು, ರಥೋತ್ಸವದ ನೇತೃತ್ವವಹಿಸಿದ್ದ ಅಬ್ಬೆ ತುಮಕೂರಿನ ವಿಶ್ವರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಶಿವಾಚಾರ್ಯರು ಚಾಲನೆ ನೀಡಿದರು.
ಸುತ್ತಲಿನ ಗ್ರಾಮಸ್ಥರು ಭಕ್ತಾಧಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶ್ರೀಗ್ರಾಮದ ಭಕ್ತಾಧಿಗಳು ಜಾತ್ರಾ ಅಂಗವಾಗಿ ಬೆಳಗ್ಗೆಯಿಂದ ನೈವೇದ್ಯ, ಕಾಯಿ ಕರ್ಪೂರ ಹೂಗಳನ್ನು ಅರ್ಪಿಸಿ ಶ್ರೀದೇವರ ದರ್ಶನ ಪಡೆದರು.
ರಥೋತ್ಸವದಲ್ಲಿ ನಾಗರಿಕರು ಭಕ್ತಾಧಿಗಳು ಉತ್ತುತ್ತಿ, ಕಲ್ಲುಸಕ್ಕರೆ ಮತ್ತು ಬಾಳೆಹಣ್ಣು ಎಸೆದು ಇಷ್ಠಾರ್ಥಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಮುಂಚಿತವಾಗಿ ವಿಶ್ವರಾಧ್ಯರ ಮಹಾದ್ವಾರದಿಂದ ಶ್ರೀವಿಶ್ವರಾಧ್ಯರ ಪಾದುಕೆಗಳನ್ನು ಹೊತ್ತ ಪಲ್ಲಕ್ಕಿ ದೇವಸ್ಥಾನದವರೆಗೆ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನ ಮಂಡಳಿ ಅಧ್ಯಕ್ಷ ಚಂದ್ರಶೇಖರ ಆರಬೋಳ, ಮಲ್ಲರಡ್ಡೆಪ್ಪ ಹೋತಪೇಠ. ಮಹಾಂತಪ್ಪ ಶರಣರು ಸೇರಿದಂತೆ ಗ್ರಾಮದ ಮುಖಂಡರು ಇತರರು ಇದ್ದರು.