ಕಾವ್ಯ
ಯುದ್ಧ..ಯುದ್ಧ..ಮುದನೂರ ಬರೆದಿದ್ದ ಕವಿತೆ
ಯುದ್ಧ ಯುದ್ಧ ಯುದ್ಧ…
ಭಾರತದ ಗಡಿಯಲ್ಲಿ ಸುಸಜ್ಜಿತವಾದ
ಸೇನೆ ಸನ್ನದ್ಧ.
ಭಯೋತ್ಪಾದನೆ ಮೂಲೋಚ್ಛಾಟಿಸಲು
ನಮ್ಮ ಮನಸಿದ್ಧ.
ಮಿತಿ ಮೀರುತಿದೆ ನೆರೆಯ ದೇಶದ
ಬಯೋತ್ಪಾದನೆ ಮತಾಂಧ.
ಸಾಕಾಯ್ತು ಎಪ್ಪತ್ತು ವರ್ಷದಿ
ಪಠಿಸುತ್ತಿರುವ ಶಾಂತಿ ಸೌಹಾರ್ಧ.
ಈಗ ಎದುರಿಸ ಬೇಕಾಗಿದೆ
ಪರಿಸ್ಥಿತಿ ಸಂಧಿಗ್ಧ.
ಅಂತಹ ದೇಶವನ್ನು ಮಾಡಲೇಬೇಕಾಗಿದೆ
ಕೂಡಲೆ ಸಂಹಾರ್ಧ.
ಅದಕ್ಕಾಗಿ ಅನಿವಾರ್ಯವಾಗಿದೆ ಇಂದು
ಯುದ್ಧ ಯುದ್ಧ ಯುದ್ಧ…
–ಮಲ್ಲಿಕಾರ್ಜುನ ಮುದ್ನೂರ.