ಮರೆತೆಯಾ ನನ್ನ
ಮರೆತೆಯಾ ನನ್ನ…
ಮರೆತೆಯಾ ನನ್ನ…
ಹೃದಯದ ಹೂ ಪೊಟ್ಟರೆನ
ಮರೆತೆಯಾ ಅಪ್ಪ ನನ್ನ
ಮರೆತು ಹೋಗಿರುವೆ ನನ್ನ
ಈ ಹಸುಳೆಯ ಕಂದನನ್ನ
ಕಾಣದಂತ ಕಡಲಿನಲ್ಲಿ
ಬಚ್ಚಿಟ್ಟುಕೊಂಡಿರುವೆ ನೀ ಅಲ್ಲಿ
ನೀ ಇಲ್ಲದ ಈ ಜೀವನ
ಬರೀ ನರಕದ ಯಾತನ
ದೇವರೇ ನೀ ಇನ್ನ
ಕೈ ಚಾಚಿದರೆ ಚೆನ್ನ
ನೀ ಇಲ್ಲದ ಕ್ಷಣವನು
ನಾ ಯಾರಿಗೆ ಹೇಳಲಿ ಇನ್ನು
ಕಣ್ಣೀರಿಗೆ ಧರೆ ಕೆಂಪಾಗಿತು
ಸುಳ್ಳು ನಗುವಿಗೆ ಬಾನು ಕಂಬನಿ ಮಿಡಿಯಿತು
ತೀರವಿಲ್ಲದ ತೀರ್ಥಗೆ
ತೀರಿಕೊಂಡವು ಹೂಗಳು
ತೀರದ ದಾಹಕ್ಕೆನೀನೇನಾ ಸಂತೃಪ್ತಿ?
ನೀ ಇಲ್ಲದೆ ಹೇಗೆ ಇರುವೇನಾ
ಹೇಳು ಬಾ ನೀ ಕಾರಣ
ನಿನ್ನಯ ಆಗಮನಕ್ಕೆ
ಮಿಡಿತದ ನಾಡಿಗಳೆ ನಿನಗೆ ಹಾಜರಿ ಅಪ್ಪ!
–ಅಕ್ಕಮಹಾದೇವಿ ಎಸ್. ಚಿಗರಿ.