ಅಂಗಡಿಗಳ ಮೇಲೆ ದಾಳಿ 75 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ
ನಗರಸಭೆ ಅಧಿಕಾರಿಗಳಿಂದ ದಾಳಿಃ 75 ಕೆಜಿ ಪ್ಲಾಸ್ಟಿಕ್ ವಶ
ಯಾದಗಿರಿ, ಶಹಾಪುರಃ ಶನಿವಾರ ನಗರದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು 75 ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ವಶಕ್ಕೆ ಪಡೆಯಿತು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ನಿರೀಕ್ಷಕ ಮೊಹಿನೊದ್ದೀನ್, ಪ್ಲಾಸ್ಟಿಕ್ ನಿಷೇಧಗೊಳಿಸಿ ಆದೇಶ ಹೊರಡಿಸಿದ್ದರೂ ಇದುವರೆಗೂ ಮಾರ್ಕೆಟ್‍ನಲ್ಲಿ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ.
ಸಾಕಷ್ಟು ಬಾರಿ ಈಗಾಗಲೇ ದಾಳಿ ನಡೆಸಲಾಗಿ ತಿಳಿ ಹೇಳಿದರೂ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ರಾಜಾರೋಷವಾಗಿಯೇ ನಡೆದಿದೆ. ಹೀಗಾಗಿ ದಾಳಿ ನಡೆಸಿದ್ದು, ಮತ್ತೆ 75 ಕೆಜಿಯಷ್ಟ ಪ್ಲಾಸ್ಟಿಕ್ ಬ್ಯಾಗಗಳು ದೊರೆತಿವೆ.
ಅಂಗಡಿಗಳ ಹೆಸರಿನಲ್ಲಿ ಬಟ್ಟೆ ಬ್ಯಾಗ್‍ಗಳನ್ನು ತಯಾರಿಸಿದ್ದರೂ ಅವುಗಳನ್ನು ಬಳಸುತ್ತಿಲ್ಲ. ದಾಳಿ ಮಾಡಿದಾಗ ಸಾಕಷ್ಟು ಅಂಗಡಿಗಳಲ್ಲಿ ಬಟ್ಟೆ ಬ್ಯಾಗ್ ಬಳಸುತ್ತಿರುವ ಬಗ್ಗೆ ತೋರಿಸಿದ್ದಾರೆ. ಆದರೆ ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಎಂದು ತಿಳಿಸಿದರು.
ಕೂಡಲೇ ಪ್ಲಾಸ್ಟಿಕ್ ಬಳಕೆ ನಿಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ಹಣಮಂತ ಯಾದವ್ ಸೇರಿದಂತೆ ಸಿಬ್ಬಂದಿ ಇತರರು ಇದ್ದರು.
————–
ಸಾಕಷ್ಟು ಬಾರಿ ಎಚ್ಚರಿಕೆ ನಿಡಲಾಗಿದೆ. ಆದಾಗ್ಯ ಇಲ್ಲಿನ ವಿವಿಧ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಇನ್ಮುಂದೆ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಕಾಯ್ದೆ ಅನ್ಚಯ ಕಠಿಣ ಕ್ರಮಕೈಗೊಳ್ಳಲಾಗುವುದು.
–ಮೊಹಿನುದ್ದೀನ್. ಆರೋಗ್ಯ ನಿರೀಕ್ಷಕ ನಗರಸಭೆ.