ಪ್ರಮುಖ ಸುದ್ದಿ

ಧನಾತ್ಮಕ ವಿಚಾರ ಉತ್ತಮ ವ್ಯಕ್ತಿತ್ವಕ್ಕೆ ಸಾಕಾರಃ ಭುಜಬಲಿ ಬೋಗಾರ

 

ಋಣಾತ್ಮಕ ಆಲೋಚನೆಯಿಂದ ದೂರವಿರಿ

ಕಲಬುರ್ಗಿಃ ನಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಭಾವನಾತ್ಮಕವಾಗಿ ಏರುಪೇರಾಗಲು, ಅನಾವಶ್ಯಕ ಕೋಪ ಹೆಚ್ಚಾಗಲು ಮತ್ತು ದೈಹಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೆ ನಾನಾ ರೀತಿಯ ಒತ್ತಡಗಳೇ ಕಾರಣವಾಗಿವೆ ಎಂದು ಬೆಂಗಳೂರಿನ ಹ್ಯಾಪಿನೆಸ್ ಇಂಜಿನಿಯರ್ ತರಬೇತುದಾರ ಭುಜಬಲಿ ಬೋಗಾರ ಹೇಳಿದರು.

ನಗರದ ಭೂಮಿ ಯೋಗ ಫೌಂಡೇಶನ್ ಟ್ರಸ್ಟನ ಸಂಪನ್ಮೂಲ ವ್ಯಕ್ತಿಗಳಿಂದ 28ನೇ ಜುಲೈ 2018 ರಂದು ಇಲ್ಲಿನ  ಪೊಲೀಸ್ ಭವನದಲ್ಲಿ, ಕಾರ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗಾಗಿ ಆಯೋಜಿಸಿದ್ದ “ಆರೋಗ್ಯಕರ ಸಮಾಜಕ್ಕಾಗಿ ಆರೋಗ್ಯವಂತ ಆರಕ್ಷಕರು” ಆರೋಗ್ಯ ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ  ಮಾತನಾಡಿದರು.

ನಮ್ಮ ಋಣಾತ್ಮಕ ಆಲೋಚನೆಗಳಿಂದ ಮತ್ತು ನಮಗಿರುವ ಕೀಳರಿಮೆ ಭಾವನೆಯಿಂದಾಗಿ ಮೆದುಳಿಗೆ ನಮ್ಮ ಮನಸ್ಸನ್ನು ದುರ್ಬಲಗೊಳಿಸುವ ರಸಾಯನಿಕ ಉತ್ಪತ್ತಿಯನ್ನು ಬಿಡುಗಡೆಗೊಳಿಸಲು ಉತ್ತೇಜಿಸಿದಂತಾಗುತ್ತದೆ. ಆದ್ದರಿಂದ, ನಮ್ಮ ಧನಾತ್ಮಕ ವಿಚಾರಗಳು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ.

ಆದ್ದರಿಂದ ನಾವು ಸದಾ ಧನಾತ್ಮಕವಾದ ವಿಚಾರಗಳು ಹಾಗೂ ಕೆಲಸಗಳನ್ನು ರೂಢಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡದರು.

ವ್ಯಕ್ತಿಯ ಗುಣಾತ್ಮಕ ಆಲೋಚನೆಗಳು ಹಾಗೂ ಭಾವನೆಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಬಲ್ಲವು ಮತ್ತು ಮನಸ್ಸನ್ನು ಕಷ್ಟದಲ್ಲಿಯೂ ತಾಳ್ಮೆಯಿಂದ ತನ್ನ ಗುರಿಯನ್ನು ಸಾಧಿಸಲು ಪ್ರೇರೆಪಿಸುತ್ತದೆ. ಒತ್ತಡದಿಂದ ಮುಕ್ತಿ ಹೊಂದಲು ದಿನದ ಆರಂಭದಲ್ಲಿ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳಿ, ನಮ್ಮಲ್ಲಿರುವ ಉತ್ತಮ ಗುಣ – ಕೌಶಲ್ಯಗಳ ಬಗ್ಗೆ ಹೆಮ್ಮೆಯಿಂದಿರಿ, ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಹಾಗೂ ನಿಮ್ಮನ್ನು ನೀವು ಪ್ರೀತಿಸಿ ಮತ್ತು ಗೌರವಿಸುವುದರ ಮೂಲಕ ಸೂಕ್ತ ಗುರುಗಳ ಮಾರ್ಗದರ್ಶನದೊಂದಿಗೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾಧಕರಾಗಬಹುದು ಎಂದು ಸಲಹೆ ನೀಡಿದರು.

ಈ ಕಾರ್ಯಗಾರದಲ್ಲಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ, ಎನ್. ಶಶಿಕುಮಾರ, ಸಂಪನ್ಮೂಲ ವ್ಯಕ್ತಿಗಳಾಗಿ, ಭುಜಬಲಿ ಬೋಗಾರ, ಭೂಮಿ ಯೋಗ ಫೌಡೇಶನ್ ಟ್ರಸ್ಟ್ ಯೋಗ ಶಿಕ್ಷಕ ನಾಗರಾಜ ಸಾಲೋಳ್ಳಿ, ಶ್ರಾವಣಯೋಗಿ ಹಿರೇಮಠ, ಶಿವಕುಮಾರ ಹಿರೇಮಠ, ಆರ್.ಪಿ.ಐ. ಶರಣಪ್ಪಾ ಹೆಚ್. ಎಸ್. ಹಾಗೂ ಅಧಿಕಾರಿಗಳು, ಸಿಬ್ಬಂದಿಯವರು ಪಾಲ್ಗೊಂಡಿದರು.

 

Related Articles

Leave a Reply

Your email address will not be published. Required fields are marked *

Back to top button