ಪ್ರಮುಖ ಸುದ್ದಿ
ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಪುತ್ರನ ಬರ್ಬರ ಹತ್ಯೆ
ಹತ್ತಿಕುಣಿ ಗ್ರಾಮದ ಬಳಿ ಜೋಡಿ ಕೊಲೆ
ಯಾದಗಿರಿಃ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಅವರ ಪುತ್ರ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರ ಸಮೀಪದ ಹತ್ತಿಕುಣಿ ಭಾಗ್ ತೋಟಗಾರಿಕೆ ಪ್ರದೇಶ ಬಳಿ ನಡೆದಿದೆ.
ಕಾಂಗ್ರೆಸ್ ಪಕ್ಷದ ಮುಖಂಡ, ಹತ್ತಿಕುಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶರಣಪ್ಪ ಗಡ್ಡಿಮನಿ ಪೂಜಾರಿ (55), ಪುತ್ರ ಮಹಾದೇವಪ್ಪ (29) ಎಂಬುವರೇ ಕೊಲೆಯಾಗಿದ್ದಾರೆ ಎನ್ನಲಾಗಿದೆ.
ಸರಕಾರಿ ತೋಟಗಾರಿಕೆ ಪ್ರದೇಶ ಹಾಗೂ ರಕ್ಷಿತ ಅರಣ್ಯ ಪ್ರದೇಶ ಬಳಿ ಈ ಜೋಡು ಕೊಲೆ ನಡೆದಿದ್ದು, ಆಸ್ತಿ ವಿಚಾರಕ್ಕಾಗಿ ಕೊಲೆ ನಡೆದಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆಯಾದ ಶರಣಪ್ಪಗೆ ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಪೊಲೀಸ್ ಮೂಲಗಳು ತಿಳಿಸಿವೆ.