ಪ್ರಮುಖ ಸುದ್ದಿ
ಸ್ಪೀಕರ್ ರಮೇಶ್ ಕುಮಾರ್ ಕೇಳಿದ್ದೇ ಕೇಳಿ ಸಾಯಬೇಕಾಗುತ್ತದೆ ಅಂದಿದ್ದೇಕೆ?
ಬೆಂಗಳೂರು: ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಸದನದಲ್ಲಿ ಮಾತನಾಡುವ ವೇಳೆ ಗೊಂದಲ ಸೃಷ್ಠಿಯಾದ ಹಿನ್ನೆಲೆ ಮದ್ಯ ಪ್ರವೇಶಿಸಿದ ಸ್ಪೀಕರ್ ಹೇಳಿದ್ದನ್ನೇ ಹೇಳಬೇಡಿ. ಹೊಸ ಹಾಡು ಹೇಳಿದ್ರೆ ನಾವೂ ಕೇಳಬಹುದು ಎಂದರು.
ನಿಮ್ಮಲ್ಲಿ ಯಾವ ಶಾಸಕರು ಎಷ್ಟು ಸಲ ಲೈಬ್ರರಿಗೆ ಹೋಗುತ್ತೀರಿ. ಲೈಬ್ರರಿಯಿಂದ ಹಾಜರಿ ಬುಕ್ ತರಿಸಬೇಕಾ. ಹೊಸ ವಿಷಯ, ಕಾನೂನು, ನಿಯಮಗಳನ್ನು ತಿಳಿದುಕೊಳ್ಳದೇ ಹೇಳಿದ್ದನ್ನೆ ಹೇಳಬೇಡಿ. ಹೇಳಿದ್ದನ್ನೇ ಹೇಳಿದ್ರೆ ನಾವು ಸಾಯಬೇಕಾಗುತ್ತೆ ಎಂದು ಕಿಡಿಕಾರಿದರು.