ಪ್ರಮುಖ ಸುದ್ದಿ
30 ಕಿ.ಮೀ ಒಳನುಗ್ಗಿ ಭಾರತೀಯ ಸೇನೆ ದಾಳಿ!
(ಸಾಂದರ್ಭಿಕ ಚಿತ್ರ)
ಜಮ್ಮು ಕಾಶ್ಮೀರ : ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಮೂವತ್ತು ಕಿಲೋ ಮೀಟರ್ ಒಳಗೆ ನುಗ್ಗಿ ಭಾರತೀಯ ಸೇನೆ ದಾಳಿ ನಡೆಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಈ ವೇಳೆ ನೀಲಂ ಝೇಲಂ ಪ್ರಾಜೆಕ್ಟ್ ಗೆ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ಭಾರತ ಕಾಶ್ಮೀರದಲ್ಲಿ 38ಸಾವಿರ ಸೇನೆಯನ್ನು ನಿಯೋಜಿಸಿತ್ತು. ಭಾರೀ ಪ್ರಮಾಣದ ಸೇನೆ ನಿಯೋಜನೆ ಮಾಡಿದ್ದು ವಿಶ್ಯದಾದ್ಯಂತ ಭಾರೀ ಕುತೂಹಲ ಕೆರಳಿಸಿತ್ತು. ಇಂದು ಭಾರತೀಯ ಸೇನೆ ದಾಳಿ ಆರಂಭಿಸಿದ್ದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಟ್ಟಿದೆ ಎನ್ನಲಾಗುತ್ತಿದೆ.