ಅಂಕಣ

ಬದಲಾಗಲಿದೆ WhatsApp ಮತ್ತು Instragram App ಹೆಸರು!

Whatsapp ಮತ್ತು Instragram ಆ್ಯಪ್​ಗಳ ಹೆಸರು ಇಷ್ಟರಲ್ಲೇ ಬದಲಾವಣೆ ಆಗಲಿದೆ. Whatsappಗೆ Whatsapp from Facebook  ಹಾಗೂ Instragramಗೆ Instragram from Facebook  ಎಂದು​ ಮರುನಾಮಕರಣ ಮಾಡಲು ಫೇಸ್​ಬುಕ್ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

2012ರಲ್ಲಿ ಫೋಟೋ ಹಾಗೂ ವಿಡಿಯೋ ಶೇರಿಂಗ್ ಆ್ಯಪ್​ನ್ನು ​ Instragram ಹಾಗೂ 2014ರಲ್ಲಿ  Whatsapp ನ್ನು Facebook​ ಸಂಸ್ಥೆ ತನ್ನದಾಗಿಸಿಕೊಂಡಿತ್ತು. ಬಳಿಕ ಇವೆರೆಡು ಆ್ಯಪ್​​ಗಳನ್ನ ಹೊಸ ಹೊಸ ಫೀಚರ್ಸ್​ಗಳೊಂದಿಗೆ ಜನಮಾನಸದಲ್ಲಿ ಬೆರೆಯುವುಂತಾಗುವಲ್ಲಿ  Facebook​ ಸಂಸ್ಥೆ ಶ್ರಮಿಸಿದೆ. ಆದರೆ, ಎಷ್ಟೋ ಜನರಿಗೆ ಈ ಆ್ಯಪ್ ಗಳಿಗೆ ಫೇಸ್​ಬುಕ್​ ಸಂಸ್ಥೆಯೇ ಯಜಮಾನ ಎಂಬುದು ತಿಳಿದಿಲ್ಲ. ಹೀಗಾಗಿ, ಈ ಎರಡೂ ಆ್ಯಪ್ ಗಳ ಹೆಸರಿನ ಜತೆ Facebook ಹೆಸರು ಸೇರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button