ಮಿಥುನವ ರಾಶಿಗೆ ಮಧುರ ಕ್ಷಣ ವೃಷಭ ರಾಶಿಗೆ.?
ಶ್ರೀ ಬನಶಂಕರಿ ದೇವಿಯ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಉತ್ತರಾಷಾಡ
ಋತು : ವರ್ಷ
ರಾಹುಕಾಲ 15:41 – 17:16
ಗುಳಿಕ ಕಾಲ 12:33 – 14:07
ಸೂರ್ಯೋದಯ 06:15:14
ಸೂರ್ಯಾಸ್ತ 18:49:53
ತಿಥಿ : ತ್ರಯೋದಶಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಮನಸ್ಥಿತಿಯು ಸಂತೋಷಕರವಾಗಿದ್ದು ಹಲವು ಸಾಧನೆ ಮಾಡುವ ಬಯಕೆ ಮೂಡಲಿದೆ. ಆರ್ಥಿಕವಾಗಿ ಮುಂದುವರೆಯುವ ಕೆಲವು ಯೋಜನೆಗಳನ್ನು ಮಾಡುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳುವಿರಿ. ಉಳಿತಾಯ ಮಾಡುವ ವ್ಯವಸ್ಥೆಯನ್ನು ರೂಡಿಸಿಕೊಳ್ಳಿ. ಪ್ರೀತಿಪಾತ್ರರನ್ನು ನೀವು ಆದಷ್ಟು ಕಾಳಜಿಯಿಂದ ಮಾತನಾಡುವುದು ಮುಖ್ಯವಾಗಿದೆ. ಕೆಲವು ವಿವಾದಾಸ್ಪದವಾದ ಚರ್ಚೆಗಳು ನಡೆಯಬಹುದು ಆದಷ್ಟು ತಾಳ್ಮೆ ಇರಲಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ಕೆಲಸದಿಂದ ಒತ್ತಡ ಹೆಚ್ಚಾಗಬಹುದು. ಪ್ರೇಮಿಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಲಿದೆ. ಸಂಗಾತಿಯನ್ನು ಆದಷ್ಟು ಮುತುವರ್ಜಿಯಿಂದ ಮಾತನಾಡಿ ಅವರಿಗೆ ನಿಮ್ಮ ಸಮಯ ಮೀಸಲಿಡುವುದು ಉತ್ತಮ. ಮಕ್ಕಳ ಜೊತೆಗೆ ಈ ದಿನದ ನಿರ್ವಹಣೆ ಉತ್ತಮವಾಗಿ ಕಂಡುಬರುತ್ತದೆ. ಯೋಜನೆಗಳಲ್ಲಿ ಜಾಗೃತಿ ಅವಶ್ಯಕವಾಗಿ ಇರಲಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುವುದು. ನಿಮ್ಮ ಆತ್ಮೀಯರ ಜೊತೆಗೆ ಉತ್ತಮ ಬಾಂಧವ್ಯ ರೂಡಿಸಿಕೊಳ್ಳಿ. ಕೆಲಸದಲ್ಲಿನ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಹುಡುಕಿ. ಸಂಗಾತಿಯೊಡನೆ ಈದಿನ ಮಧುರ ಬಾಂಧವ್ಯದ ಕ್ಷಣಗಳು ಪ್ರಾಪ್ತಿಯಾಗಲಿದೆ. ಕೆಲವರು ವಿನಾಕಾರಣ ನಿಮ್ಮ ವಿಚಾರಗಳಲ್ಲಿ ಅಡೆತಡೆ ತರಬಹುದು ಇದು ನಿಮಗೆ ತೀವ್ರತರನಾದ ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಆನಂದದಾಯಕ ಕ್ಷಣಗಳು ಕಂಡುಬರಲಿದೆ. ಮಾನಸಿಕ ಸ್ಥಿತಿಯು ಪ್ರಫುಲ್ಲತೆಯಿಂದ ಕೂಡಿರಲಿದೆ. ಬರುವ ಯೋಜನೆಯ ಬಗ್ಗೆ ಆದಷ್ಟು ಪೂರ್ವಾಪರವನ್ನು ಸಮೀಕ್ಷೆ ಮಾಡಿ. ನಿಮ್ಮ ಕೆಲಸದಿಂದ ಆತ್ಮೀಯರ ಬಳಿ ಪ್ರಶಂಸೆ ಪಡೆಯಲಿದ್ದೀರಿ. ವೈಯಕ್ತಿಕ ವಿಚಾರಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳಿ. ಬಾಕಿ ಕೆಲಸವು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಿಮ್ಮ ಕೆಲವು ನಿರ್ಧಾರಗಳು ಯೋಚನೆ ಮಾಡಿ ಮಾಡುವುದು ಸೂಕ್ತ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಸಿಂಹ ರಾಶಿ
ಕುತೂಹಲಕಾರಿ ವಿಚಾರಗಳು ಈ ದಿನ ಹೆಚ್ಚಾಗಿ ಕಂಡುಬರುತ್ತದೆ. ಬಹು ಉದ್ದೇಶಿತ ಕಾರ್ಯ ಸಫಲವಾಗುವ ನಿರೀಕ್ಷೆ ಇದೆ. ಆರ್ಥಿಕವಾಗಿ ಸದೃಢರಾಗುವ ಸಾಧ್ಯತೆ ಕಾಣಬಹುದು. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಲಿದೆ. ಅನಗತ್ಯ ಖರ್ಚುಗಳನ್ನು ಆದಷ್ಟು ತೆಗೆದುಹಾಕಿ. ಸಹೋದರರೊಡನೆ ವಿನಾಕಾರಣ ಸಮಸ್ಯೆ ಮಾಡಿಕೊಳ್ಳುವುದು ಬೇಡ. ಉದ್ಯೋಗರಂಗದಲ್ಲಿ ನಿರೀಕ್ಷಿತ ಬೆಳವಣಿಗೆ ಮತ್ತು ಶುಭಫಲಗಳು ಕಾಣಬಹುದಾಗಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಕೆಲಸದಲ್ಲಿ ಸುಧಾರಣೆಗೆ ಆದ್ಯತೆ ನೀಡಿ. ನಿಮ್ಮ ಆರೋಗ್ಯವನ್ನು ಆದಷ್ಟು ಕಾಪಾಡಿಕೊಳ್ಳುವುದು ಮುಖ್ಯ. ಹೊಸ ಆಲೋಚನೆಗಳಿಂದ ಧನ ಸಂಪಾದನೆ ಆಗಲಿದೆ. ಕೆಲಸದ ವಿಚಾರಗಳು ಕಾರ್ಯರೂಪಕ್ಕೆ ಬರುವುದು ಅವಶ್ಯಕವಾಗಿದೆ. ಸಂಗಾತಿಯೊಡನೆ ರೋಮಾಂಚನ ಭರಿತವಾದ ಕ್ಷಣಗಳನ್ನು ಅನುಭವಿಸುತ್ತೀರಿ. ಅನಿರೀಕ್ಷಿತ ಪ್ರಯಾಣ ಎದುರಾಗಬಹುದು ಆದಷ್ಟು ಪ್ರಯಾಣವನ್ನು ಮುಂದೂಡುವುದು ಒಳಿತು. ಯೋಜನೆಗಳಲ್ಲಿ ಎಚ್ಚರಿಕೆಯ ನಡೆ ಅವಶ್ಯಕವಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ತುಲಾ ರಾಶಿ
ನಿಮ್ಮ ಯೋಚನೆಗಳಿಂದ ಹಾಗೂ ಕೆಲಸದ ದೃಷ್ಟಿಕೋನದಿಂದ ಕಾರ್ಯಗಳು ಸಾಕಾರಗೊಳ್ಳಲಿದೆ. ಮನಸ್ಸಿನಲ್ಲಿ ಮೂಡಿದ ಕೆಲವು ಗೊಂದಲಗಳನ್ನು ಆದಷ್ಟು ನಿವಾರಿಸಿಕೊಳ್ಳಿ. ಆತುರದ ನಿರ್ಣಯಗಳಿಂದ ನಷ್ಟವಾಗಬಹುದು ಎಚ್ಚರವಿರಲಿ. ಕುಟುಂಬದವರ ಆರೋಗ್ಯದ ಬಗ್ಗೆ ಗಮನ ವಹಿಸುವುದು ಸೂಕ್ತ. ನಿಮ್ಮ ಕೆಲಸಗಳನ್ನು ಆದಷ್ಟು ಸಂಪೂರ್ಣ ಜ್ಞಾನ ಪಡೆದುಕೊಂಡು ಮುಂದೆ ಸಾಗಿರಿ. ಮಧ್ಯಂತರ ಜನಗಳಿಂದ ಆತ್ಮೀಯರಲ್ಲಿ ಒಡಕು ಸಂಭವಿಸಬಹುದು.
ಶುಭ ಸಂಖ್ಯೆ 6
ಗಿರಿದರ ಶರ್ಮ 9945098262
ವೃಶ್ಚಿಕ ರಾಶಿ
ಕ್ರಿಯಾಶೀಲತೆ ಮತ್ತು ಚೈತನ್ಯದಿಂದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತೀರಿ. ಆಕಸ್ಮಿಕವಾಗಿ ಆತ್ಮೀಯರು ಭೇಟಿಯಾಗಲಿದ್ದಾರೆ. ಸಂತೋಷ ನೀಡುವ ಪ್ರಸಂಗಗಳು ಕಂಡುಬರುತ್ತದೆ. ಕುಟುಂಬದೊಂದಿಗೆ ಕಾಲ ಕಳೆಯುವುದರಿಂದ ನಿಮ್ಮ ಒತ್ತಡ ಮತ್ತು ಆಯಾಸ ದೂರವಾಗಬಹುದು. ಲಾಭದ ಪ್ರಯಾಣವನ್ನು ಮಾಡುವ ಸಾಧ್ಯತೆ ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಕೆಲವರು ನಿಮ್ಮನ್ನು ನಿಮಗೆ ಇಷ್ಟವಿಲ್ಲದ ಕೆಲಸಕ್ಕೆ ಒತ್ತಾಯ ಮಾಡಬಹುದು.
ಶುಭ ಸಂಖ್ಯೆ 5
ಗಿರಿದರ ಶರ್ಮ 9945098262
ಧನಸ್ಸು ರಾಶಿ
ಅಪ್ರಸ್ತುತ ಯೋಜನೆಗಳಲ್ಲಿ ಕೈಹಾಕಿ ನಷ್ಟ ಮಾಡಿಕೊಳ್ಳಬೇಡಿ. ನಿಮ್ಮ ಕೆಲವು ಕಾರ್ಯಗಳಿಂದ ಆರ್ಥಿಕ ವ್ಯವಸ್ಥೆ ಕುಂಠಿತವಾಗಬಹುದು. ನಿಮ್ಮ ಅಭಿಪ್ರಾಯಗಳಿಗೆ ಎಲ್ಲರಿಂದಲೂ ಸೂಕ್ತ ಗೌರವ ಸಿಗುತ್ತದೆ ಆದರೆ ನಿಮ್ಮ ವಿಚಾರಗಳೇ ನಡೆಯಬೇಕೆಂಬ ಭಾವನೆ ಸಲ್ಲದು. ಉದ್ಯೋಗದಲ್ಲಿ ಎಲ್ಲರೊಂದಿಗೂ ಉತ್ತಮ ಒಡನಾಟಗಳನ್ನು ರೂಢಿಸಿಕೊಳ್ಳಿ. ನಿಮ್ಮ ಜಾಣ್ಮೆಯ ವ್ಯವಹಾರಗಳು ಈದಿನ ಅತ್ಯವಶ್ಯಕವಾಗಿದೆ. ಹೊಗಳಿಕೆ ಮಾತುಗಳಿಗೆ ಉಪ್ಪರಿಗೆ ಮೇಲೆ ಕುಳಿತುಕೊಳ್ಳುವ ನಿಮ್ಮ ಇರಾದೆ ಸರಿಯಲ್ಲ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಕೆಲಸದ ಅಧಿಕ ಹೊರೆ ಈ ದಿನ ಕಂಡುಬರುತ್ತದೆ, ಇದರಿಂದ ನಿಮ್ಮಲ್ಲಿ ವಿಶ್ರಾಂತಿ ಸಮಯ ಹೊಂದಿಸಿಕೊಳ್ಳುವುದು ಸೂಕ್ತ. ಕೆಲಸದಲ್ಲಿ ಆದಷ್ಟು ಬೆಳವಣಿಗೆಯ ಚಿಂತನೆ ಮಾಡಿ. ನಿಮ್ಮ ಪ್ರಚಾರದ ಮನಸ್ಥಿತಿಯನ್ನು ಆದಷ್ಟು ತೆಗೆದುಹಾಕಿ. ಮಕ್ಕಳ ಬೆಳವಣಿಗೆಗೆ ಪೂರಕ ವ್ಯವಸ್ಥೆ ನಿಮ್ಮಿಂದ ಸಾಧ್ಯವಾಗಲಿದೆ. ವ್ಯವಹಾರಗಳಲ್ಲಿ ಆದಷ್ಟು ಉತ್ತಮ ನಿರ್ವಹಣೆ ತೋರಿಸಿ. ಹಿರಿಯರ ವಿಚಾರಗಳನ್ನು ಪಾಲಿಸುವುದು ಕ್ಷೇಮ. ದೈವ ಸಂಕಲ್ಪದ ಮೊರೆ ಹೋಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ನಿಮ್ಮ ವೇಳಾಪಟ್ಟಿಯು ಬದಲಾಗುವ ಸಾಧ್ಯತೆಗಳಿವೆ. ಹೆಚ್ಚಿನ ಓಡಾಟದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರಬಹುದು. ಪ್ರೇಮಿಗಳಿಗೆ ಉತ್ತಮ ದಿನವಿದು. ಸಂಬಂಧಿಕರೊಡನೆ ಉತ್ತಮ ಭಾಂದವ್ಯ ಕಂಡುಬರುತ್ತದೆ. ಕೆಲಸದಲ್ಲಿ ಪ್ರಶಂಸೆ ಹಾಗೂ ಮನ್ನಣೆ ಗಳಿಸುತ್ತೀರಿ. ಆರ್ಥಿಕ ವ್ಯವಹಾರಗಳು ವಿಳಂಬವಾಗುವ ಸಾಧ್ಯತೆ ಇದೆ. ಸಾಲದ ಸಂಕೋಲೆಯಿಂದ ಹೊರ ಬರುವ ಪ್ರಯತ್ನ ಮಾಡಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮೀನ ರಾಶಿ
ಬಂಧುಗಳೊಂದಿಗೆ ಹರ್ಷದ ವಾತಾವರಣ ಇರಲಿದೆ. ವಿವಾಹದ ಯೋಗ ಕೂಡಿ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುವ ಸಾಧ್ಯತೆ ಕಾಣಬಹುದು. ಹಣಕಾಸುಗಳನ್ನು ವ್ಯವಸ್ಥಿತವಾಗಿ ಮರುಪಾವತಿ ಮಾಡಿಕೊಳ್ಳುವಿರಿ. ಮಕ್ಕಳೊಂದಿಗೆ ಜ್ಞಾನ ವಿಚಾರಧಾರೆ ಕಾರ್ಯಗಳನ್ನು ಮಾಡಲಿದ್ದೀರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262