ವೈಷ್ಣವಿ ಹೊಟೇಲ್ ಸರ್ವರ್ ಮೋಜುಗೆ ರಾಖಿ ಬಂಧನ
ಕೋಲ್ಕತ್ತಾದ ಅಣ್ಣನಿಗೆ ಶಹಾಪುರದ ಸಹೋದರಿಯಿಂದ ರಾಖಿ
ವೈಷ್ಣವಿ ಹೊಟೇಲ್ ಸರ್ವರ್ ಮೋಜುಗೆ ರಾಖಿ ಬಂಧನ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದ ವೈಷ್ಣವಿ ಹೊಟೇಲ್ ನಲ್ಲಿ ಸರ್ವರ್ ಆಗಿ ಕೆಲಸ ಮಾಡುತ್ತಿದ್ದ ಕೋಲ್ಕತ್ತಾದ ಮೋಜು ಎಂಬಾತನಿಗೆ ಸಹೋದರಿಿ ರಾಖಿ ಕಟ್ಟಿದಳು.
ಉಪಹಾರಕ್ಕಾಗಿ ಹೊಟೇಲ್ ಗೆ ಬಂದಿದ್ದ ಶಹಾಪುರದ ಸಹೋದರಿಯೊಬ್ಬಳು ರಕ್ಷಾ ಬಂಧನ ಹಿನ್ನೆಲೆ ಸರ್ವರ್ ಕೈಗೆ ಪ್ರೀತಿಯಿಂದ ರಾಖಿ ಕಟ್ಟಿ ಸ್ವೀಟ್ ಜಾಮೂನು ತಿನ್ನಿಸುವ ಮೂಲಕ ಎಲ್ಲೋ ದೂರದಿಂದ ಹೊಟ್ಟೆಪಾಡಿಗೆ ಬಂದಿದ್ದ ಆತನಲ್ಲಿ ಸಹೋದರಿಯ ಪ್ರೀತಿ ವಾತ್ಸಲ್ಯ ತೋರಿದಳು. ಈ ಬಾಂಧವ್ಯ ಕ್ಷಣಕಾಲ ಆತನನ್ನು ಮೂಕ ವಿಸ್ಮಿತನನ್ನಾಗಿ ಮಾಡಿತು.
ಆತ ಖುಷಿಯಿಂದಲೇ ರಾಖಿ ಕಟ್ಟಿಕೊಂಡು ಸಹೋದರಿಯರಿಗೆ ಸ್ವೀಟ್ ತಿನಿಸಿ ಬೀಳ್ಕೊಟ್ಟ. ಆತನ ಮೊಗದಲ್ಲಿ ದೂರದ ಕೋಲ್ಕತ್ತಾದಲ್ಕಿದ್ದ ಆತನ ಪರಿವಾರ ನೆನಪಾಗಿ, ಶಹಾಪುರದಲ್ಲಿ ಸಹೋದರಿಯರು ಈ ಪ್ರೀತಿ ವಿಶ್ವಾಸ ತೋರಿದ್ದಕ್ಕಾಗಿ ವಿನಯವಾಣಿ ಎದುರು ಧನ್ಯತಾಭಾವ ಸಮರ್ಪಿಸುವಾಗ ಮೋಜು ಸರ್ವರ್ ಬಾಯ್ ಕಣ್ಣಲ್ಲಿ ನೀರು ಜಿನಿಗಿತು.
ರಾಖಿ ಕಟ್ಟಿದ ಶಹಾಪುರ ಸಹೋದರಿಯರಿಗೆ ಧನ್ಯವಾದಗಳು ತಿಳಿಸಬೇಕು. ಹೊಟೆಲ್ ಒಂದರಲ್ಲಿ ಕೆಲಸ ಮಾಡುವ ಸರ್ವರ್ ಬಾಯ್ ಗೆ ಅಣ್ಣನ ಸ್ಥಾನ ನೀಡಿ ರಾಖಿ ಕಟ್ಟುವ ಮೂಲಕ ಆತನಿಗೆ ಪ್ರೀತಿ ವಾತ್ಸಲ್ಯ ತೋರಿದ್ದು ನಿಜಕ್ಕು ಮೆಚ್ಚುವಂತದ್ದು.
ಆತ ಮಾಡುವ ಕೆಲಸ ಸಣ್ಣದ್ದೋ ದೊಡ್ಡದೋ ಯಾವುದೇ ಇರಲಿ ಆತ ತನ್ನ ಪರಿವಾರದ ರಕ್ಷಣೆಗಾಗಿ, ಬದುಕಿಗಾಗಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವದನ್ನು ಕಂಡು ಆತನಿಗೆ ರಾಖಿ ಕಟ್ಟಿರುವದು ಮುಂದಿನ ಆತನ ಜೀವನ ಚನ್ನಾಗಿರಲಿ ಎಂಬ ಆಶಾ ಭಾವನೆ ಹೊಂದಿದ ಆ ಸಹೋದರಿಯರಿಂದ ಆತನಿಗೆ ಆಶೀರ್ವಾದ ದೊರೆತಿರುವದು ಒಳ್ಳೆಯ ಬೆಳವಣಿಗೆ ಸಹೋದರ ಸಹೋದರಿಯರ ಬಾಂಧವ್ಯ ಹೀಗೆ ಮುಂದುವರೆಯಲಿ.