ಪ್ರಮುಖ ಸುದ್ದಿ
ಪಕ್ಷ ನೀಡುವ ಜವಬ್ದಾರಿ ಹೊರಲು ಸಿದ್ಧ : ಶ್ರೀರಾಮುಲು
ಬಳ್ಳಾರಿ : ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ, ಸಚಿವ ಸ್ಥಾನ ಅಥವಾ ಯಾವ ಖಾತೆ ನೀಡುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಪಕ್ಷ ನೀಡುವ ಯಾವುದೇ ಜವಬ್ದಾರಿಯನ್ನು ನಾನು ನಿಷ್ಠೆಯಿಂದ ವಹಿಸಿಕೊಳ್ಳುತ್ತೇನೆ ಎಂದು ಮೊಳಕಾಲ್ಮೂರು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ವಹಿಸಿರುವುದನ್ನು ಸಮರ್ಥಿಸಿಕೊಂಡ ಶ್ರೀರಾಮುಲು ರಾಷ್ಟ್ರಮಟ್ಟದ ನಾಯಕರ ಫೋನ್ ಸಹ ಕದ್ದಾಲಿಕೆ ಆಗಿದೆ. ತನಿಖೆ ಮೂಲಕ ಸತ್ಯಾಂಶ ಹೊರಬರಲಿ. ಸಿಬಿಐ ಬಗ್ಗೆ ಯಾಕೆ ಅಪಸ್ವರ ಎತ್ತುತ್ತಾರೋ ಗೊತ್ತಿಲ್ಲ. ಸಿಬಿಐ ತನಿಖೆಗೆ ವಹಿಸಿದ್ದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.