ಮಹಾತ್ಮರ ಜಯಂತಿ ಆಚರಣೆ ಸ್ವರೂಪ ಬದಲಾಗಲಿದೆಯೇ.?
ಜಯಂತಿಗಳ ಆಚರಣೆ ಸ್ವರೂಪ ಬದಲಾಗಲಿದೆ..?
ತುಮಕೂರಃ ಮಹಾತ್ಮರ ಜಯಂತಿ ಆಚರಣೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತದೆ. ಈ ವೇಳೆ ಮಹಾತ್ಮರ ಜಯಂತಿಗಳನ್ನೆ ರದ್ದು ಮಾಡಲಿದೆ ಸರ್ಕಾರವೆಂಬ ಅನುಮಾನಗಳು ಹುಟ್ಟಿಕೊಂಡಿವೆ.
ಆ ನಿಟ್ಟಿನಲ್ಲಿ ಸಚಿವ ಸಿ.ಟಿ.ರವಿ ಅವರು ಮಾಧ್ಯಮದ ಜೊತೆಗೆ ಮಾತಾಡಿದ್ದು, ಈ ಮಹಾತ್ಮರ ಜಯಂತಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಜಯಂತಿಗಳ ಸ್ವರೂಪ ಹೇಗೆ ಇರಬೇಕೆಂಬುದನ್ನು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವದು.
ಆ ನಂತರ ಅಭಿಪ್ರಾಯ ಸಂಗ್ರಹ ವರದಿ ಆಧರಿಸಿ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರಕೈಗೊಳ್ಳಲಾಗುವದು. ಜಯಂತಿ ರದ್ದಾದರೆ ಅದನ್ನು ಎತ್ತಿ ಕಟ್ಟುವ ಕೆಲಸ ಮಾಡುವವರು ಸಾಕಷ್ಟು ಜನರಿದ್ದಾರೆ.
ಕಾರಣ ಅದಕ್ಕೆ ಆಸ್ಪದ ಕೊಡದಂತೆ ಏನು ಮಾಡಬೇಕು ಅದನ್ನೇ ಮಾಡುತ್ತೇವೆ ಎಂದು ತಿಳಿಸುವ ಮೂಲಕಮುಂದೆ ಜಯಂತಿ ಗಳನ್ನು ರದ್ದು ಪಡಿಸಿ ಅವುಗಳ ಸ್ವರೂಪ ಬದಲಿಸುವದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವದು ಸತ್ಯ ಎಂಬುದನ್ನು ಮಾತ್ರ ಸ್ಪಷ್ಟ ಪಡಿಸಿದಂತಾಯಿತು.
ಮಹಾತ್ಮರ ಜಯಂತಿಗಳನ್ನು ನೂತನ ರೀತಿಯಲ್ಲಿ ಆಚರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.