ಪ್ರಮುಖ ಸುದ್ದಿಸಂಸ್ಕೃತಿ

ನಾಡಿಗೆ ಸಂತರ, ಶರಣರ ಕೊಡುಗೆ ಅಪಾರ- ಶಿವಲಿಂಗ ಶ್ರೀ

ದೋರನಹಳ್ಳಿಯಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ

ಯಾದಗಿರಿ, ಶಹಾಪುರಃ ಭಾರತ ಹತ್ತು ಹಲವು ವೈವಿಧ್ಯಮಯ ಸಂಸ್ಕøತಿ ಹೊಂದಿದ ದೇಶವಾಗಿದೆ. ಭರತ ಭೂಮಿಯಲ್ಲಿ ಶರಣರು ಸಂತರು ಸೇರಿದಂತೆ ಶಿವ ಶರಣಿಯರು ತಮ್ಮದೇ ಆದ ಅನುಭಾವವನ್ನು ನೀಡಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು ತಿಳಿಸಿದರು.

ತಾಲೂಕಿನ ದೋರನಹಳ್ಳಿಯ ಚಿಕ್ಕಮಠದಲ್ಲಿ ದಸರಾ ಉತ್ಸವ ಅಂಗವಾಗಿ ಆಯೋಜಿಸಿದ್ದ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶರಣ ಶರಣೆಯರು ಸಾಮಾನ್ಯವಾಗಿ ಜೀವಿಸಿ, ಜೀವನ ಬದುಕಿನತ್ತ ಅಸಾಮಾನ್ಯವಾಗಿ ಬೆಳೆದು ನಿಂತು ಜಗತ್ತಿನ ಉದ್ದಗಲಕ್ಕೂ ಜನಮಾನಸದಲ್ಲಿ ಹೆಸರು ಮಾಡಿದರು. ಅವರು ನಡೆಯಲ್ಲಿ ನುಡಿಯಲ್ಲಿ ಶಿವನ ನಾಮಸ್ಮರಣೆ ಬಿತ್ತರಿಸಿದರು. ಜಗತ್ತಿಗೆ ಶಾಂತಿ ದ್ಯೂತಕರಾಗಿ ಸಮೃದ್ಧಿಗೆ ಕಾರಣರಾದರು.

ಶರಣರ ಮತ್ತು ಸಂತರ ತತ್ವಾದರ್ಶಗಳನ್ನು ಸರ್ವರು ಜೀವನದಲ್ಲಿ ಅಳವಡಿಸಿಕೊಂಡು ನಡೆದಲ್ಲಿ ಬದುಕು ಸಾರ್ಥಕವಾಗಲಿದೆ. ತತ್ವ ಸಿದ್ಧಾಂತ ಎಂದಿಗೂ ಅಜರಾಮರವಾಗಲಿ ಉಳಿಯಲಿವೆ. ಎಂದರು.

ಅಲ್ಲದೆ ನವರಾತ್ರಿ ಅಂಗವಾಗಿ ಇಂದಿನಿಂದ ನಡೆಯುವ ನಿತ್ಯ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಚರಿತ್ರೆಯನ್ನು ಅರಿಯಬೇಕು. ಶರಣೆ ಅಕ್ಕಮಹಾದೇವಿಯವರ ಕುರಿತು ಪ್ರವಚನ ನಡೆಯಲಿದೆ. ಎಲ್ಲರೂ ಭಾಗವಹಿಸಿ ಆಲಿಸಬೇಕು. ಪ್ರವಚನ ಆಲಿಸುವದರಿಂದ ಮನಸ್ಸಿನ ಜಿಡ್ಡುತನ ಹೋಗಲಿದೆ. ಧಾರ್ಮಿಕವಾಗಿ ನಂಬಿಕೆ ಹುಟ್ಟಿ ಮನಸ್ಸು ಸಂತುಷ್ಟಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಮಹಾಂತೇಶ್ವರ ಸಂಸ್ಥಾನ ಮಠದ ವೀರಮಹಾಂತ ಶಿವಾಚಾರ್ಯರು, ಕನ್ಯಾಕೋಳೂರದ ಚನ್ನವೀರ ಶಿವಾಚಾರ್ಯರು, ಸ್ಥಳೀಯ ಸಿದ್ಧಾರೂಢ ಆಶ್ರಮದ ರಮಾನಂದ ಅವಧೂತರು ಮತ್ತು ಪಂಡಿತ ಅನ್ನದಾನಿ ಶಾಸ್ತ್ರಿಗಳು, ಕಲ್ಲಯ್ಯ ಗವಾಯಿಗಳು, ಶ್ರೀಧರ ಆಚಾರ್ಯರು ಅಳ್ಳಳ್ಳಿ, ಜಿಪಂ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿನೋದ ಪಾಟೀಲ್, ಮಹಮ್ಮದ ಅಲಿ ಮಸಬಾಯಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ತಾಯಮ್ಮ ಪೂಜಾರಿ, ಅಂಬಲಮ್ಮ ಪೂಜಾರಿ, ಮಲ್ಲಮ್ಮ ಶರಣಪ್ಪ ಸೇರಿದಂತೆ ನಾಡಿನ ಶರಣರು ಸಂತರು ಗ್ರಾಮದ ಹಿರಿಯ ಮುಖಂಡರು ವಿವಿಧ ಸಂಘ ಸಂಸ್ಥೆಗಳ ಗಣ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button