ರಡ್ಡಿಯವರ ಏರುದನಿ – ಸಭೆಗೆ ಬ್ರೇಕ್ ಕೊಟ್ಟ ಸಿಎಂ BSY
ಏರುದನಿಯಲ್ಲಿ ಮಾತನಾಡಿದ ಕರುಣಾಕರ ರಡ್ಡಿ- ಬಳ್ಳಾರಿ ವಿಭಜನೆಗೆ ಸದ್ಯ ಬ್ರೇಕ್
ಬೆಂಗಳೂರಃ ಇಂದು ಬಳ್ಳಾರಿ ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರು ಕರೆದಿದ್ದ ಸಭೆಯಲ್ಲಿ ಹಲವಾರು ಹಲವು ಮಾತುಗಳನ್ನು ಆಡಿದ್ದು, ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ದಾವಣಗೇರಿ,ಬಳ್ಳಾರಿ, ಕೊಪ್ಪಳ ಜಿಲ್ಲೆಗಳು ಶಾಸಕರು, ಸಂಸದರು ಮತ್ತು ಎಂಎಲ್ಸಿ ಗಳು ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬಳ್ಳಾರಿಯ ಹೆಸರನ್ನೇ ಬದಲಾಯಿಸಲಿ ವಿಜಯನಗರ ಜಿಲ್ಲೆಯೆಂದು ಮರುನಾಮಕರಣ ಮಾಡಲಿ ಎಂದು ಬಳ್ಳಾರಿ ಶಾಸಕ ಸೋಮಶೇಖರ ರಡ್ಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಭೀಮಾನಾಯ್ಕ ಅವರು, ಹಗರಿಬಮ್ಮನಹಳ್ಳಿ ಕೇಂದ್ರಸ್ಥಳವಾಗಿದ್ದು, ಹಗರಿಬಮ್ಮನಳ್ಳಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಸಿಎಂ ಅವರಿಗೆ ಮನವಿ ಮಾಡಿದರು.
ಮತ್ತು ಬಳ್ಳಾರಿ ವಿಭಜನೆ ಮಾಡಿವಿಜಯನಗರ ಜಿಲ್ಲೆ ರಚಿಸಬೇಕು ಇದರಿಂದ ಅಭಿವೃದ್ಧಿ ಗೆ ಅನುಕೂಲವೆಂಬ ಮಾತುಗಳು ಕೇಳಿ ಬಂದವು ಎನ್ನಲಾಗಿದೆ.
ಈ ಸಂದರ್ಭ ಶಾಸಕ ಕರುಣಾಕರ ರಡ್ಡಿ ಏರು ದನಿಯಲ್ಲಿ ಮಾತನಾಡುವ ಮೂಲಕ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಬೇಡಿ ಇದ್ಯಾವ ಕಾರಣಕ್ಕೆ ಜನರ ಭಾವನೆ ಜೊತೆ ಆಟವಾಡಬೇಡಿ ಎಂದು ಮಾತನಾಡುತ್ತಿದ್ದಂತೆ, ಹಿರಿಯ ನಾಯಕರು ಬೇಡ್ವೇ ಬೇಡ ಸದ್ಯಕ್ಕೆ ಜಿಲ್ಲಾ ವಿಭಜನೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಪ ಚುನಾವಣೆ ನಂತರ ಮತ್ತೊಮ್ಮೆ ಸಭೆ ಕರೆದು ತೀರ್ಮಾನಕ್ಕೆ ಬರೋದು ಎಂದು ನಿರ್ಧರಿಸಿ ತಕ್ಷಣ ಸಭೆ ಮುಗಿಸಲಾಯಿತು ಎಂದು ಹೇಳಲಾಗುತ್ತಿದೆ.