ಪ್ರಮುಖ ಸುದ್ದಿ

ಮೋಹಿತ್ ಚವ್ಹಾಣ ಹಾಡಿಗೆ ಯುವ ಸಮೂಹ ದಿಲ್‌ ಖುಷ್

ಹಾಡಿನ ಮೋಡಿ ಮೂಲಕ ದಸರಾ ಸಂಭ್ರಮ ಹೆಚ್ಚಿಸಿದ ಕಲಾವಿದರು

ಮೈಸೂರುಃ ದಸರಾ ದಸರಾ ಮೈಸೂರ ದಸರಾ ಪ್ರಯುಕ್ತ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಯುವ ದಸರಾದ ಎರಡನೇಯ ದಿನವಾದ ಬುಧವಾರ ಬಾಲಿವುಡ್ ಗಾಯಕ ಮೋಹಿತ್ ಚವ್ಹಾಣ್ ತಮ್ಮ ಸಿರಿ ಕಂಠದ ಮೂಲಕ ಯುವ ಸಮೂಹವನ್ನು ಮೋಡಿ ಮಾಡಿದ್ದಾರೆ.

ಗಾಯಕ ಮೋಹಿತ್ ಮೆಲೋಡಿ ಸಾಂಗ್ ಮೋಡಿಗೆ ಯುವ ಜನತೆ ಹೆಚ್ಚೆದ್ದು ಕುಣಿದು ಕೇಕೆ ಹಾಕಿದರು.

ಆದರೆ ಸ್ಥಳೀಯ ಗಾಯಕರಾದ ಸಂಗೀತ ರವೀಂದ್ರನಾಥ ಅವರಿಂದ ಹಲವು ಟಪಾಂಗುಚಿ‌ ಹಾಡುಗಳ‌ ನಿರೀಕ್ಷೆಯಲ್ಲಿದ್ದ ಯುವ ಜನರಲ್ಲಿ‌ ನಿರಾಸೆ ಮೂಡಿಸಿತು ಎನ್ನಲಾಗಿದೆ.

ಅವರಿಂದ ಯಾವುದೇ ಟಪಾಂಗುಚಿ ಹಾಡು ಹೊರಹೊಮ್ಮದ ಕಾರಣ ಕೆಲವರು ನಿರಾಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಹಿಂದಿ, ಕನ್ನಡ ಹಾಡುಗಳು ಮನರಂಜನೆ‌ ನೀಡಿದವು ಎನ್ನಲಾಗಿದೆ.

ಮುಂಚಿತವಾಗಿ‌ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ತಂಡ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಮುದ ನೀಡಿತು. ಅಲ್ಲದೆ ರಷ್ಯನ್‌ ಕಲಾವಿದರು ನಡೆಸಿಕೊಟ್ಟ‌ ಜಾದೂ ನೃತ್ಯ ವೀಕ್ಷಿಸಿದ ಜನತೆ ಮೂಕ ವಿಸ್ಮಿತರಾದರು. ಮತ್ತು ಜಿಎಸ್ಎಸ್ ಕಾಲೇಜಿನ ವಿದ್ಯಾರ್ಥಿ ನಿಯರ ತಂಡ ಪ್ರಸ್ತುತ ಪಡಿಸಿದ ಮಹಷಿ ಮರ್ಧನಿ ರೂಪಕ ಪ್ರದರ್ಶನ ಗಮನ‌ ಸೆಳೆಯಿತು. ಒಟ್ಟಾರೆ ಯುವ ಸಮೂಹ ದಸರಾ ಮುಕ್ತ‌ ಮುಕ್ತ.

Related Articles

Leave a Reply

Your email address will not be published. Required fields are marked *

Back to top button