ಪ್ರಮುಖ ಸುದ್ದಿ
ಶಹಾಪುರಃ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಬೈಕ್ ಸವಾರ ಸಾವು
ಟಿಪ್ಪರ್ ಡಿಕ್ಕಿ ಬೈಕ್ ಸವಾರ ಸಾವು
ಯಾದಗಿರಿಃ ಬೈಕ್ ಸವಾರನೋರ್ವನಿಗೆ ಹಿಂಬದಿಯಿಂದ ಬಂದ ಟಿಪ್ಪರವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ನಗರದ ಬಸವೇಶ್ವರ ವೃತ್ತದ ಹತ್ತಿರ ರವಿವಾರ ರಾತ್ರಿ 1ಃ45 ರ ಸಮಯದಲ್ಲಿ ಜರುಗಿದೆ.
ನಗರ ನಿವಾಸಿ ಮಹ್ಮದ್ ಮಹಿಮೂದ್(32) ಎಂಬಾತನೇ ಮೃತ ಯುವಕನಾಗಿದ್ದಾನೆ. ಈತ ರಾತ್ರಿ ಬೈಕ್ ಮೇಲೆ ಹೊರಟಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆ ನಂತರ ಟಿಪ್ಪರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ನಗರ ಠಾಣೆ ಸಿಪಿಐ ನಾಗರಾಜ ಜೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.
Thanks for vinayavani
Nice my dear friend Mallu ur Vinavani
Hello Vinayavani I am daily reader