ಭೀಕರ ಅಪಘಾತಃ ತೀವ್ರಗಾಯಗೊಂಡ ವಿದ್ಯಾರ್ಥಿಗಳ ನರಳಾಟ
ಬಸ್ ಟ್ಯಾಂಕರ್ ನಡುವೆ ಡಿಕ್ಕಿ, 20 ಕ್ಕೂ ಅಧಿಕ ಜನರಿಗೆ ಗಾಯ
ವಿಜಯಪುರಃ ಜಿಲ್ಲೆಯ ಸಿಂದಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಕರ್ನಾಟಕ ಸರ್ಕಾರ ಸಾರಿಗೆ ಬಸ್ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬಸ್ನಲ್ಲಿದ್ದ ವಿದ್ಯಾರ್ಥಿಗಳು ಸೇರಿದಂತೆ ಇತರರು ತೀವ್ರಗಾಯಗೊಂಡಿದ್ದು, 20 ಕ್ಕೂ ಹೆಚ್ಚು ಸಾವು ನೋವಿನ ಮಧ್ಯ ಹೋರಾಟ ನಡೆಸುತ್ತಿರುವ ಘಟನೆ ನಡೆದಿದೆ.
ಕಲಬುರ್ಗಿ ಜಿಲ್ಲೆಯಿಂದ ಜೇವರ್ಗಿ, ಯಡ್ರಾಮಿ ಮೂಲಕ ಸಿಂದಗಿ ಕಡೆ ಹೊರಟಿದ್ದ ಬಸ್ ಟ್ಯಾಂಕರ್ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ ಎನ್ನಲಾಗಿದೆ.
ತೀವ್ರಗಾಯಗೊಂಡವರನ್ನು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ನಲ್ಲಿ ವಿವಿಧ ಶಾಲಾ ಕಾಲೇಜುಗಳಿಗೆ ಹೊರಟಿದ್ದ ವಿದ್ಯಾರ್ಥಿಗಳು ಹೆಚ್ಚಿದ್ದರು ಎನ್ನಲಾಗಿದೆ. ಓರ್ವ ವಿದ್ಯಾರ್ಥಿ ಘಟನೆಯಲ್ಲಿ ತೀವ್ರಗಾಯಗೊಂಡು ನೆಲದ ಮೇಲೇ ಬಿದ್ದಿರುವ ಸ್ಥಿತಿ ನೋಡಿದರೆ, ಚಿಂತಾಜನಕವಿದೆ. ಅಪಘಾತದ ನಂತರ ಮಾಡಲಾದ ವಿಡಿಯೋ ತುಣುಕುಗಳ ವಾಟ್ಸಪ್ ನಲ್ಲಿ ಹರಿದಾಡುತ್ತಿವೆ. ಈ ಕುರಿತು ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.