ಪ್ರಮುಖ ಸುದ್ದಿ
ಇಂದಿರಾ ಕ್ಯಾಂಟೀನ್ ಬದಲು ವಾಲ್ಮೀಕಿ ಅನ್ನ ಕುಟೀರ ಹೆಸರಿಡುವಂತೆ ರಾಜೂಗೌಡ ಮನವಿ
ಇಂದಿರಾ ತೆಗೆದು ವಾಲ್ಮೀಕಿ ಅನ್ನ ಕುಟೀರ ಹೆಸರಿಡಲು ರಾಜೂಗೌಡ ಮನವಿ
ಬೆಂಗಳೂರಃ ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ಹೆಸರು ತೆಗೆದು ವಾಲ್ಮೀಕಿ ಅನ್ನ ಕುಟೀರವೆಂದು ಹೊಸ ನಾಮಕರಣ ಮಾಡಬೇಕೆಂದು ಸುರಪುರ ಶಾಸಕ, ನಾಯಕ (ST) ಜನಾಂಗದ ಮುಖಂಡ ರಾಜುಗೌಡ ಅವರು ತಮ್ನ ಪಕ್ಷದ ಮುಖಂಡರಾದ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಆರ್.ಅಶೋಕ ಅವರು,ಶಾಸಕ ರಾಜೂಗೌಡರ ಮನವಿಗೆ ಸೂಕ್ತ ಸ್ಪಂಧನೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ರಾಜುಗೌಡರು ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಸರಿಯಾಗಿಲ್ಲ. ಆಹಾರ ಪೂರಕೆಯಲ್ಲು ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿಲ್ಲ ಎಂಬ ಆರೋಪಗಳಿವೆ.
ಅಲ್ಲದೆ ಮಹರ್ಷಿ ಒಬ್ಬರ ಹೆಸರು ಅಚ್ಚ ಕನ್ನಡದಲ್ಲಿ ಅನ್ನ ಕುಟೀರವೆಂದು ಹೆಸರಿಸುವ ಮೂಲಕ ಬಡವರಿಗೆ ಅನ್ನ ದಾಸೋಹ ಮಾಡುವದರಲ್ಲಿ ಸಂತೃಪ್ತಿ ಇದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.