ಪ್ರಮುಖ ಸುದ್ದಿ
ಹೌದು ಹುಲಿಯಾ..ಹೆಸರಿನಲ್ಲಿ ತಲೆ ಎತ್ತಿದೆ ಹೊಟೇಲ್..!
ಹೌದು ಹುಲಿಯಾ..ಹೆಸರಿನಲ್ಲಿ ತಲೆ ಎತ್ತಿದೆ ಹೊಟೇಲ್..!
ಬಾಗಲಕೋಟ್ಃ ಮೊನ್ನೆ ನಡೆದ ಉಪ ಚುನಾವಣೆ ಸಂದರ್ಭ ಮಾಜಿ ಸಿಎಂ ಸಿದ್ರಾಮಯ್ಯ ಪ್ರಚಾರ ಸಭೆಯೊಂದರಲ್ಲಿ ಮಾತನಾಡುವಾಗ ಅವರ ಅಭಿಮಾನಿ ಫಕೀರಪ್ಪ ಸಿದ್ರಾಮಯ್ಯನವರ ಭಾಷಣಕ್ಕೆ ಹೌದು ಹುಲಿಯಾ ಎಂದಿದ್ದ, ಈ ನುಡಿ ಸಖತ್ ವೈರಲ್ ಆಗಿದ್ದು, ನಾಡಿನಾದ್ಯಂತ ಸದ್ದುಮಾಡಿದೆ.
ಇದೀಗ ಹೌದು ಹುಲಿಯಾ ಹವಾ ಎಷ್ಟಿದೆ ಅಂದರೆ ಹೌದು ಹುಲಿಯಾ ಹೆಸರಿನಲ್ಲಿ ಹೊಟೇಲ್ ಒಂದು ತಲೆ ಎತ್ತಿದೆ.
ಬೀಳಗಿ ಪಟ್ಟಣದಲ್ಲಿ ಹೌದು ಹುಲಿಯಾ..ಎಂಬ ಹೆಸರಿನ ಫಾಸ್ಟ್ ಫುಡ್ ಹೊಟೇಲ್ ತಲೆ ಎತ್ತಿದ್ದು ಮತ್ತಷ್ಟು ಆ ಡೈಲಾಗ್ ಗೆ ರಂಗು ಮೂಡಿಸಿದೆ.
ಬೀಳಗಿ ಪಟ್ಟಣದಲ್ಲಿ ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಸಮಯದಲ್ಲಿ ಜಾತ್ರೆಯಲ್ಲಿ ಈ ಹೆಸರಿನ ಹೊಟೇಲ್ ತಲೆ ಎತ್ತಿದೆ.ಜಾತ್ರೆಯ ಫೆಬ್ರವರಿ 15 ರವರೆಗೆ ನಡೆಯಲಿದೆ ಅಲ್ಲಿವರೆಗೂ ಜಾತ್ರೆಗೆ ಆಗಮಿಸಿದ ಜನರ ಗಮನವನ್ನು ಈ ಹೌದು ಹುಲಿಯಾ ಹೊಟೇಲ್ ಸೆಳೆಯುವದಂತು ಗ್ಯಾರಂಟಿ.