ಪೊಲೀಸ್ ಸೇವೆಗೆ ಸೆಲ್ಯುಟ್ಃ ಬಾಳೆಹಣ್ಣು ವಿತರಿಸಿದ ಯುವಕರು
ಶಹಾಪುರಃ ಕೊರೊನಾ ವೈರಸ್ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆ ಇಡಿ ದೇಶ 21 ದಿನ ಲಾಕ್ ಡೌನ್ ಆಗಿದ್ದು, ಸಮರ್ಪಕ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದ ಪೊಲೀಸರಿಗೆ ನಗರದ ಯುವಕರು ಮಂಗಳವಾರ ಬಾಳೆಹಣ್ಣು ವಿತರಿಸಿ ಪೊಲೀಸರ ಸೇವೆಗೆ ಸೆಲ್ಯೂಟ್ ಹೊಡೆದರು.
ಈ ಸಂದರ್ಭ ಯುವ ಮುಖಂಡ ಅರವಿಂದ ಉಪ್ಪಿನ್ ವಿನಯವಾಣಿಯೊಂದಿಗೆ ಮಾತನಾಡಿ, ಯುಗಾದಿ ಹಬ್ಬ ಇದ್ದರೂ ಅದನ್ನೆಲ್ಲ ಮರೆತು, ಹಗಲು ರಾತ್ರಿ ಎನ್ನದೆ ದೇಶ ಸೇವೆಯಲ್ಲಿ ತೊಡಗಿಸಿಕೊಂಡ ಪೊಲೀಸರಿಗೆ ಕೈಲಾದ ಸೇವೆ ಮಾಡಬೇಕೆನಿಸಿತು. ಆ ಕಾರಣಕ್ಕೆ ಬಾಳೆಹಣ್ಣು, ನೀರು ವಿತರಿಸುವ ಮೂಲಕ ಅವರ ಕರ್ತವ್ಯಕ್ಕೆ ಗೌರವ ವ್ಯಕ್ತಪಡಿಸಿದರು.
ಮಹಾಮಾರಿ ಕೊರೊನಾ ರೋಗ ಜನರಿಂದ ಜನಕ್ಕೆ ಹಬ್ಬುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಪೊಲೀಸರು, ವೈದ್ಯರು ನಮಗಾಗಿ ಅವರ ಜೀವದ ಹಂಗು ತೊರೆದು ಹೋರಾಟ ನಡೆಸುತ್ತಿದ್ದಾರೆ. ಆದರೆ ಜನಕ್ಕೆ ಇನ್ನು ಬುದ್ಧ ಬಂದಿಲ್ಲ. ಪೊಲೀಸರ ಲಾಠಿ ಏಟು ತಿಂದ ಮೇಲೆಯೇ ಅರ್ಥವಾಗುತ್ತಿದೆ.
ನಾವೇನು ನಮ್ಮ ಕುಟುಂಬದ ಜೊತೆ ಆರಾಮವಾಗಿ ಮನೆಯಲ್ಲಿರಬಹದು, ಆದರೆ ಪೊಲಿಸರು, ವೈದ್ಯರು ತಮ್ಮ ಕುಟುಂಬ ಬಿಟ್ಟು ಜನತೆಯ ಉಳಿವಿಗಾಗಿ ಬಡಿದಾಡುತ್ತಿದ್ದಾರೆ. ಅವರ ಸೇವೆ ನಿಜಕ್ಕೂ ನಾವೇನು ನೀಡಿದರು ಕಡಿಮೆ. ಹೀಗಾಗಿ ಯುವಕರ ಪಡೆಯು ಅಗತ್ಯ ಬಿದ್ದಲ್ಲಿ ಸೇವೆಗೆ ಮುಂದಾಗಬೇಕು. ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.