ಕ್ವಾರಂಟೈನ್‍ನಲ್ಲಿರುವ ಪ್ರತಿಯೊಬ್ಬರಿಗೂ ಮಾಸ್ಕ್ ವಿತರಣೆಗೆ ಕ್ರಮ-DC ಕೂರ್ಮರಾವ್
ಬೇವಿನಹಳ್ಳಿ ಮುರಾರ್ಜಿ ಕ್ವಾರಂಟೈನ್ ಕೇಂದ್ರಕ್ಕೆ ಡಿಸಿ ಭೇಟಿ
ಶಹಾಪುರಃ ಯಾದಗಿರಿ ಜಿಲ್ಲೆಯಾದ್ಯಂತ ಹೊರ ರಾಜ್ಯ ಜಿಲ್ಲೆಗಳಿಂದ 6 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರು ಆಗಮಿಸಿದ್ದು, ಅವರಿಗೆ ಜಿಲ್ಲೆಯ ವಸತಿ ಹಾಗೂ ಇತರೆ ಸೌಕರ್ಯಗಳ ಸ್ಥಳಗಳಲ್ಲಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ತಿಳಿಸಿದರು.
ತಾಲೂಕಿನ ಬೇವಿನಹಳ್ಳಿ ಮುರಾರ್ಜಿ ವಸತಿ ಶಾಲೆಯಲ್ಲಿ ಸ್ಥಾಪಿಸಲಾದ ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ವಲಸಿಗರ ಆರೋಗ್ಯ ಮತ್ತು ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು.
ಕ್ವಾರಂಟೈನ್‍ನಲ್ಲಿರುವ ಪ್ರತಿಯೊಬ್ಬರ ಆರೋಗ್ಯ ರಕ್ಷಣೆಗೆ ಸುಕ್ತ ನಿಗಾವಹಿಸಲಾಗುತ್ತಿದೆ. ಅಲ್ಲದೆ ಪ್ರತಿ ಕ್ವಾರಂಟೈನರಿಗೂ ಮಾಸ್ಕ್ ವಿತರಿಸಲು ಸೂಚಿಸಿದ್ದೇನೆ. ಶುದ್ಧ ಕುಡಿಯುವ ನೀರು ಊಟದ ವ್ಯವಸ್ಥೆಗೆ ಸುಕ್ತ ಕ್ರಮಕೈಗೊಳ್ಳಲು ನಿರ್ದೇಶನ ನೀಡಿದ್ದೇನೆ ಎಂದು ಅವರು ವಿವರಿಸಿದರು.
ಮುರಾರ್ಜಿ ವಸತಿಯ ಶಾಲೆಯ ವಿವಿಧ ಕಟ್ಟಡಗಳಲ್ಲಿ ಒಟ್ಟು 524 ಜನರನ್ನು ಇರಿಸಲಾಗಿದ್ದು, ಗರಿಷ್ಠತೆಯನ್ನು ಮೀರಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ನಿಗದಿತ ಜನರಿಗಿಂತ ಹೆಚ್ಚು ಜನ ವಲಸೆ ಕಾರ್ಮಿಕರನ್ನು ಇಡಲಾಗಿದೆ. ಇದರಲ್ಲಿ ನಿಗದಿತ ಜನರನ್ನು ಇರುವ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಇದರಲ್ಲಿ ಕೆಲವರನ್ನು ಮುರಾರ್ಜಿ ಹೊಸ ಕಟ್ಟಡಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಅಲ್ಲದೆ ಕೆಲವರು ಬೆಳಗ್ಗೆ ಚಹಾ ನೀಡಲು ಮನವಿ ಮಾಡಿದ್ದಾರೆ. ಹೀಗಾಗಿ ಬೆಳಗ್ಗೆ ಚಹಾ ಮತ್ತು ಸಣ್ಣ ಮಕ್ಕಳಿಗೆ ಸಮರ್ಪಕವಾಗಿ ಹಾಲು ವಿತರಿಸಲು ಹೇಳಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲ ತಹಶೀಲ್ದಾರ ಜಗನ್ನಾಥರಡ್ಡಿ ಮತ್ತು ವಸತಿ ನಿಲಯದ ಪ್ರಾಂಶುಪಾಲ ಬಿ.ಎಸ್.ಪಾಟೀಲ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.