ಮಾಸ್ಕ್ ಧರಿಸದವರಿಗೆ ದಂಡಃ 39,700 ರೂ. ಹಣ ಸಂಗ್ರಹ
ಶಹಾಪುರನಲ್ಲಿ ಲಾಕ್ ಡೌನ್ಃ ರಸ್ತೆಗಿಳಿದ ನಗರಸಭೆ
ಶಹಾಪುರಃ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೆ ದಿನೇ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೊಳಿಸಿದೆ. ಜು.15 ರ ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಜಾರಿಯಾಗಿದ್ದು, ಗುರುವಾರ ನಗರಸಭೆ ರಸ್ತೆಗಿಳಿದು ಮಾಸ್ಕ್ ಧರಿಸದೆ ಓಡಾಡುವ ವಾಹನ ಸವಾರರಿಗೆ ದಂಡ ಹಾಕಿದ್ದು, ಸುಮಾರು 39,700 ರೂಪಾಯಿ ಧನ ಸಂಗ್ರಹ ಮಾಡಿದರು.
ಬೆಳಗ್ಗೆಯಿಂದಲೇ ತಹಶೀಲ್ದಾರ ಜಗನ್ನಾಥರಡ್ಡಿ, ನಗರಸಭೆ ಪೌರಾಯುಕ್ತ ರಮೇಶ ಪಟ್ಟೇದಾರ ನಗರ ಠಾಣಾ ಪಿಎಸ್ಐ ಚಂದ್ರಕಾಂತ ಮೆಕಾಲೆ ಮತ್ತು ಸಿದ್ದೇಶ, ಭೀ.ಗುಡಿ ಪಿಎಸ್ಐ ರಾಜಕುಮಾರ ಜಾಮಗೊಂಡ ನಗರದಾದ್ಯಂತ ಸಂಚರಿಸಿ ಜನರಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸದೆ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ವಾಲ್ಮೀಕ ಚೌಕ್, ಬಸವೇಶ್ವರ ವೃತ್ತ, ಮೋಚಿಗಡ್ಡ ಮತ್ತು ಭೀಮರಾಯನ ಗುಡಿ ಸೇರಿದಂತೆ ಪ್ರಮುಖ ರಸ್ತೆ ಮೇಲೆ ಸಂಚರಿಸುತ್ತಿದ್ದು, ಪ್ರಯಾಣಿಕರನ್ನು ತಡೆದು ಮಾಸ್ಕ್ ಧರಿಸದವರಿಗೆ ದಂಡ ವಸೂಲಿ ಮಾಡಿದರು. ಅಲ್ಲದೆ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲುಸುವಂತೆ ಎಚ್ಚರಿಕೆ ನೀಡಿದರು.
ಬಡವಾಣೆಗಳಲ್ಲೂ ಗುಂಪು ಗುಂಪಾಗಿ ಕೂಡಬೇಡಿ. ಅಂಗಡಿ ಮುಂಗಟ್ಟುಗಳು ಸಮಯ ಮೀರಿದ ನಂತರ ತೆರೆಯಬಾರದು. ಇಲ್ಲವಾದಲ್ಲಿ ಸಮರ್ಪಕ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಒಟ್ಟಾರೆ ಬೆಳಗ್ಗೆಯಿಂದ ಮಾಸ್ಕ್ ಧರಿಸದೆ ಓಡಾಡುತ್ತಿರುವವರನ್ನು ಗುರುತಿಸಿ ಮತ್ತು ಮಿಗದಿತ ಸಮು ಮೀರಿದ ಮೇಲೂ ಅಂಗಡಿ ಮುಂಗಟ್ಟುಗಳನ್ನು ತೆರೆದವರ ಮೇಲೆ ದಂಡ ವಿಧಿಸಲಾಯಿತು.
ಹೀಗಾಗಿ ಸಂಜೆ ವೇಳೆ ನಗರ ಯಾವುದೇ ವಾಹನ, ಬೈಕ್ ಸವಾರರಿಲ್ಲದೆ ಬಿಕೋ ಎನ್ನುವಂತಿತ್ತು. ಅಧಿಕಾರಿಗಳು ಲಾಕ್ ಡೌನ್ ಹಿನ್ನೆಲೆ ಸೂಕ್ತ ಕ್ರಮಕ್ಕೆ ಮುಂದಾಗಿರುವದು ಸಾರ್ವಜನಿಕರು ದಂಡಕ್ಕೆ ಹೆದರಿ ಮನೆ ಸೇರುವಂತಾಯಿತು.
ಕೊರೊನಾ ತಡೆ ಕುರಿತು ಜಾಗೃತಿ ಮೂಡಿಸುವ ಉದ್ದೇಶಕ್ಕೆ ಬೆಳಗ್ಗೆಯಿಂದ ಎಲ್ಲಾ ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಮತ್ತು ನಮ್ಮ ನಗರಸಭೆ ಸಿಬ್ಬಂದಿ ಸೇರಿ ಮಾಸ್ಕ್ ಧರಿಸದ ಬೈಕ್ ಸವಾರರಿಗೆ 100, ಕಾರಿನೊಳಗಡೆ ಇರುವ ಪ್ರತಿಯೊಬ್ಬರಿಗೂ ನೂರು ರುಪಾಯಿ ದಂಡ ಮತ್ತು ಲಾರಿ, ಇತರೆ ವಾಹನಗಳಿಗೂ ಸಮರ್ಪಕವಾಗಿ ದಂಡ ವಿಧಿಸಿದ್ದು, 39,700 ರೂ. ಸಂಗ್ರಹವಾಗಿದೆ. ನಾಳೆಯೂ ಈ ಕಾರ್ಯ ಮುಂದುವರೆಯಲಿದೆ.
-ರಮೇಶ ಪಟ್ಟೇದಾರ. ಪೌರಾಯುಕ್ತರು. ನಗರಸಭೆ ಶಹಾಪುರ.———————-