ನಿಮಗೆ ಹಣದ ಧ್ವನಿ ಕೇಳುತ್ತದಯೇ.? ಈ ಅದ್ಭುತ ಕಥೆ ಓದಿ
ದಿನಕ್ಕೊಂದು ಕಥೆ
ಇಬ್ಬರು ಬಾಲ್ಯಸ್ನೇಹಿತರು.. ಒಟ್ಟಿಗೆ ಓದಿದವರು , ಒಟ್ಟಿಗೆ ಬೆಳೆದವರು.. ಒಬ್ಬ ಧನಿಕ , ಇನ್ನೊಬ್ಬ ಬಡವ..ಬಹಳ ಕಾಲದ ನಂತರ ಭೇಟಿಯಾಗುತ್ತಾರೆ.. ಕಷ್ಟ – ಸುಖ ಮಾತನಾಡುತ್ತ ದಾರಿಯಲ್ಲಿ ಸಾಗುತ್ತಿರುತ್ತಾರೆ..
ಧನಿಕ ಗೆಳೆಯ – “ಜೀವನದಲ್ಲಿ ನೀನೇನೂ ಬದಲಾಗಲೇ ಇಲ್ಲವಲ್ಲ ಗೆಳೆಯ.. ಅದೇ ತೆಳ್ಳಗಿನ ದೇಹ , ಅದೇ ನಗು , ಅದೇ ಬಡತನ.. ನನ್ನನ್ನು ನೋಡು.. ಎಷ್ಟು ಬದಲಾಗಿದ್ದೇನೆ.. ಜೀವನದಲ್ಲಿ ಎಲ್ಲವನ್ನೂ ಗಳಿಸಿದ್ದೇನೆ.. ಮನೆ , ಕಾರು , ಸಂಪತ್ತು ಎಲ್ಲ ನನ್ನ ಬಳಿ ಇವೆ.. ನಿನ್ನ ಜೀವನವೇಕೆ ಹೀಗಾಯ್ತು…?
ಬಡವ ಗೆಳೆಯ ಹಠಾತ್ತಾಗಿ ನಿಂತ..
ಧನಿಕ ಗೆಳೆಯ – “ಏನಾಯ್ತು?”
ಬಡವ ಗೆಳೆಯ – “ಏನೋ ಶಬ್ದ ಕೇಳಿಸಿತಲ್ಲ..?”
ಧನಿಕ ಗೆಳೆಯ – ” ಓ ಅದಾ…? ನನ್ನ ಜೇಬಿನಿಂದ ನಾಣ್ಯ ಬಿದ್ದಿರಬಹುದು”
ಹುಡುಕಿದ.. ಐದು ರೂಪಾಯಿಯ ನಾಣ್ಯ ಕೆಳಗೆ ಬಿದ್ದಿತ್ತು. ಜೇಬಿಗೆ ಸೇರಿಸಿದ..
ಬಡವ ಗೆಳೆಯ ಅಲ್ಲಿಂದ ದೂರ ಹೋದ..ಏನನ್ನೋ ಹುಡುಕಿದ.. ದೊಡ್ಡ ಜೇಡದ ಬಲೆಯಲ್ಲೊಂದು ಹಕ್ಕಿಮರಿ ಸಿಕ್ಕಿ ಒದ್ದಾಡುತ್ತಿತ್ತು.. ಆತ ನಿಧಾನವಾಗಿ ಬಲೆಯಿಂದ ಬಿಡಿಸಿ , ಆಕಾಶಕ್ಕೆ ಹಾರಿಸಿದ..
ಧನಿಕಗೆಳೆಯ ಆಶ್ಚರ್ಯದಿಂದ “ಹಕ್ಕಿಯ ಧ್ವನಿ ನಿನಗೆ ಹೇಗೆ ಕೇಳಿಸಿತು..?”
ಬಡವ ಗೆಳೆಯ ಮುಗುಳ್ನಗುತ್ತಾ – ” ಗೆಳೆಯ…ಇದೇ ನಮ್ಮಿಬ್ಬರ ನಡುವೆ ಇರುವ ಅಂತರ.. ನಿನಗೆ ಹಣದ ಧ್ವನಿ ಕೇಳಿಸಿತು.. ನನಗೆ ಮನದ ಧ್ವನಿ ಕೇಳಿಸಿತು.. ನಿನ್ನ ಮನ ಹಣದಾಸೆಯ ಬಲೆಯಲ್ಲಿ ಸಿಲುಕಿಕೊಂಡಿದೆ , ನನ್ನ ಮನ ಸ್ವತಂತ್ರ್ಯವಾಗಿ ಸಂತೋಷದಿಂದ ವಿಹರಿಸುತ್ತಿದೆ.. ನೀನು ಹಣದಾಸೆಯಲ್ಲಿ ಮಾನವೀಯತೆಯನ್ನೇ ಮರೆತಿದ್ದೀಯಾ.. ನಾನು ಮನದಲ್ಲಿ ಈಗಲೂ ಮಾನವೀಯತೆಯನ್ನು ಹೊಂದಿದ್ದೇನೆ.. ಮನದಲ್ಲಿ ಹಾಗೂ ಮಾನವೀಯತೆಯಲ್ಲಿರುವ ಸಂತೋಷವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವೇ..? ಈಗ ಹೇಳು ಗೆಳೆಯ..
ಯಾರು ಶ್ರೀಮಂತರು?”
ಧನಿಕಗೆಳೆಯ ಏನನ್ನೂ ಉತ್ತರಿಸಲಾಗದೇ ಸುಮ್ಮನಾದ…
ಹಣಗಳಿಕೆಯನ್ನೇ ಜೀವನದ ಪರಮಗುರಿಯನ್ನಾಗಿಸಿಕೊಂಡು , ಮಾನವೀಯತೆಯನ್ನು ಮರೆತಿರುವ ಮನುಕುಲಕ್ಕೆ ಈ ಕಥೆ ಮುಡಿಪು…
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882