ಮಹಾನಾಯಕನ ಧಾರವಾಹಿ ಸರ್ವರೂ ನೋಡಲಿ- ಬಡಿಗೇರ
ಮಹಾನಾಯಕನ ಧಾರವಾಹಿ ಸರ್ವರೂ ನೋಡಲಿ- ಬಡಿಗೇರ
ಶಹಾಪುರಃ ಖಾಸಗಿ ವಾಹಿನಿವೊಂದರಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಚರಿತ್ರೆ ಕುರಿತು ಧಾರವಾಹಿ ರೂಪದಲ್ಲಿ ಅದ್ಭುತವಾಗಿ ಪ್ರಸಾರ ಮಾಡುತ್ತಿದ್ದು, ಸರ್ವ ಜನಾಂಗದವರು ನೋಡಬೇಕಿದೆ. ಇದರಿಂದ ಮಹಾನಾಯಕನ ಶ್ರೇಷ್ಠತೆ ಏನು ಎಂಬುದನ್ನು ತಿಳಿಯಲಿದೆ ಎಂದು ದಲಿತ ಮುಖಂಡ ನೀಲಕಂಠ ಬಡಿಗೇರ ತಿಳಿಸಿದರು.
ನಗರದ ದಿಗ್ಗಿಬೇಸ್ ಹತ್ತಿರ ಮಹಾನಾಯಕ ದೊಡ್ಡ ಕಟೌಟ್ ಹಾಕಿ ಸರ್ವರು ಮಹಾನಾಯಕನ ಧಾರವಾಗಿ ನೋಡಲು ಪ್ರರೇಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾನ್ ಚೇತನ ಡಾ.ಬಾಬಾ ಸಾಹೇಬ ಅಂಬೇಡ್ಕರರ ಅವರ ಬಾಲ್ಯದಿಂದ ಅನುಭವಿಸಿದ ಸಮಸ್ಯೆಗಳೇನು. ಮುಂದೆ ಆತ ಬೆಳೆದ ಪರಿ, ಓದಿ ಅಪಾರ ಜ್ಞಾನ ಸಂಪಾದಿಸಿರುವದು ಅದಕ್ಕೊಡ್ಡಿದ ತೊಡಕುಗಳೇನು ಎಲ್ಲವೂ ಎಳೆ ಎಳೆಯಾಗಿ ಧಾರವಾಗಿಯಲ್ಲಿ ಕಣ್ಮುಂದೆ ಬಂದಜ ನಿಲ್ಲುವಂತೆ ಅಭಿನಯಿಸಿದ್ದಾರೆ. ಕಾರಣ ಎಲ್ಲರೂ ಅದನ್ನಜು ನೋಡಿ ಮಹಾನ್ ಚೇತನದ ಚರಿತೆ ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು. ಡಾ.ಅಂಬೇಡ್ಕರರ ಕುರಿತು ಧಾರವಾಹಿ ಮಾಡಿ ಪ್ರಸಾರ ಮಾಡಿ ಅವರ ಚರಿತೆಯನ್ನು ಎಲ್ಲಡೆ ಪಸರಿಸುತ್ತಿರುವ ಖಾಸಗಿ ವಾಹಿನಿ ನಿರ್ಮಾಪಕರಿಗೂ ಹಾಗೂ ಧಾರವಾಹಿ ಪ್ರಸಾರಕ್ಕೆ ಕಾರಣೀಭೂತರಾದ ನಿರ್ಮಾಪಕ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಬುದ್ಧವಿಹಾರದ ಭಂತೆಜೀ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಭೀಮರಾಯ ಹೊಸ್ಮನಿ, ನಾಗಣ್ಣ ಬಡಿಗೇರ, ಬಸವರಾಜ ತಳವಾರ, ಶಿವಪುತ್ರ ಜವಳಿ, ಶಿವಕುಮಾರ ತಳವಾರ, ರಾಯಪ್ಪ ಸಾಲಿಮನಿ ಹಾರಣಗೇರಾ, ಸುಭಾಸ ತಳವಾರ, ಅಶೋಕ ತಳವಾರ, ಶಿವಶರಣ ತಳವಾರ, ಮರೆಪ್ಪ ಜಾಲಿಮಂಚಿ, ಈಶ್ವರ ತಳವಾರ, ಕುಮಾರ ಮುದನೂರ, ನಾಗು ಬೊಮ್ಮನಳ್ಳಿ ಸಂತೋಷ, ಕಾಮಣ್ಣ ವಿಭೂತಿಹಳ್ಳಿ, ಮಾರ್ಖಂಡ, ಜೈನಾಪುರ ಇತರರಿದ್ದರು.