ಶ್ರೀಗುರು ದತ್ತಾತ್ರೇಯರಿಗೆ “ದತ್ತ” ಪದನಾಮ ಬಂದದ್ಹೇಗೆ.?
ತ್ರಿಮೂರ್ತಿ ರೂಪಾವತಾರ ಶ್ರೀ”ದತ್ತ”
ತ್ರೀಮೂರ್ತಿ ರೂಪ ಅಂದ ತಕ್ಷಣವೇ ಶ್ರೀಗುರು ದತ್ತಾತ್ರೇಯರ ಹೆಸರೇಳುವದು ನೆನಪಿಗೆ ಬರುವದು ಸಹಜ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಅವತಾರವೆತ್ತ ದೇವರೆಂದೆ ಭಕ್ತ ಸಂಕುಲ ಪರಿಗಣಿಸಲ್ಪಡುತ್ತದೆ.
ಹೌದು ಆದರೆ ಈ “ದತ್ತ”ಅಂಥ ಹೆಸರೇಗೆ ಬಂತು. ಆತನ ನಾಮಕಾರಣದ ಹೆಸರಾ.? ಅಥವಾ ಪವಾಡದಿಂದ ಬಂದಿದ್ದಾ.? ಅದ್ಹೇಗೆ ಬಂದಿತು ಎಂಬುದು ಬಹುತೇಕ ಭಕ್ತರಿಗೆ ತಿಳಿಯದ ಸಂಗತಿ ಎಂದರೆ ತಪ್ಪಾಗಲಾರದು.
ಬನ್ನಿ ಆ ಕುರಿತು ಇತಿಹಾಸ ಕೆದಕಿ ನೋಡುವಾ ಪುರಾಣದಲ್ಲಿ ಉಲ್ಲೆಖಿಸಿರುವದನ್ನು ಅವಲೋಕಿಸೋಣ. “ದತ್ತ” ಎಂಬ ಶಬ್ಧದ ಅರ್ಥ ಕೊಟ್ಟಿದ್ದೆ ಈ ತ್ರಿಮೂರ್ತಿಗಳು. ತ್ರಿಮೂರ್ತಿಗಳು ತಮ್ಮನ್ನು ತಾವೇ ಋಷಿ ದಂಪತಿಗಳಾದ ಅತ್ರಿ ಮತ್ತು ಅನಸೂಯೆಯರಿಗೆ ಪುತ್ರನ ರೂಪದಲ್ಲಿ ಅರ್ಪಿಸಿದ್ದರಿಂದ “ದತ್ತ”ನೆಂದು ಕರೆಯಲ್ಪಟ್ಟನು. ಅಲ್ಲದೆ ಅತ್ರಿಯ ಪುತ್ರನಾದ್ದರಿಂದ ‘ಆತ್ರೇಯ’ ನೆಂದು ಸಹ ಗುರುತಿಸಿಕೊಂಡನು.
ದತ್ತಶ್ರೀ ಜನ್ಮ ವೃತ್ತಾಂತಃ ಅತ್ರಿಮುನಿಗಳಿಗೆ ಸಂತಾನವಿಲ್ಲದ ಕಾರಣ ಅವರು ಉಗ್ರ ತಪ್ಪಸ್ಸು ಮಾಡ ಹತ್ತಿದರು. ಮುನಿಗಳ ತಪಸ್ಸಿಗೆ ಮೆಚ್ಚಿದ ತ್ರಿಮೂರ್ತಿಗಳು ದರ್ಶನ ನೀಡಿ, ತಮ್ಮ ಒಬ್ಬೊಬ್ಬರ ಅಂಶದಿಂದಲು ಒಬ್ಬೊಬ್ಬ ಮಗ ಜನ್ಮಿಸುವನೆಂದು ವರ ನೀಡಿದರು.
ಆಗ ಬ್ರಹ್ಮನ ಅಂಶದಿಂದ ಚಂದ್ರನೂ, ವಿಷ್ಣುವಿನ ಅಂಶದಿಂದ ದತ್ತಾತ್ರೇಯನೂ ಮತ್ತು ಶಿವನ ಅಂಶದಿಂದ ದುರ್ವಾಸನೂ ಹುಟ್ಟಿದರು. ಮುಂದೆ ಈತ ಕಾರ್ತವೀರ್ಯ ಮತ್ತು ಪ್ರಹ್ಲಾದ ಮೊದಲಾದವರಿಗೆ ಜ್ಞಾನೋಪದೇಶ ಮಾಡಿದ. ಈತ ಬ್ರಹ್ಮಚಾರಿ ಯಾಗಿದ್ದ ಎಂದು ಹೇಳಲಾಗುತ್ತದೆ.
ದತ್ತಾತ್ರೇಯ ಸ್ವಾಮೀಜಿ ಕುರಿತು ಭಗವತ, ಮಾರ್ಕಂಡೇಯ ಪುರಾಗಳಲ್ಲಿ ಉಲ್ಲೇಖವಿದೆ. ಒಮ್ಮೆ ದೇವತೆಗಳು ರಾಕ್ಷಸರ ಹಿಂಸೆ ತಾಳಲಾರದೆ ದತ್ತಾತ್ರೇಯ ಆಶ್ರಮಕ್ಕೆ ಬಂದು ರಾಕ್ಷಸರ ಸಂಹಾರಕ್ಕೆ ಮೊರೆ ಇಡುತ್ತಾರೆ. ದೇವತೆಗಳಿಗೆ ಆಶ್ರಮದಲ್ಲಿ ಆಶ್ರಯ ನೀಡುತ್ತಾರೆ. ಮುಂದೆ ರಾಕ್ಷಸರು ಆಶ್ರಯಕ್ಕೆ ಲಗ್ಗೆ ಇಟ್ಟಾಗ ದತ್ತಾತ್ರೇಯರು ಅವತಾರ ತಾಳಿ ರಾಕ್ಷಸರನ್ನು ಸಂಹರಿಸುತ್ತಾರೆ ಎಂದು ಪುರಾಣದಲ್ಲಿ ಹೇಳಲಾಗಿದೆ.
–ಮಲ್ಲಿಕಾರ್ಜುನ ಮುದನೂರ.