ಪ್ರಮುಖ ಸುದ್ದಿ
ಕಾಂಗ್ರೆಸ್ ನೆಲಕಚ್ಚಲು ಒಡೆದು ಹಾಳುವ ನೀತಿಯೆ ಕಾರಣ- ಮುನಿರತ್ನ ವಾಗ್ದಾಳಿ
ಬೆಂಗಳೂರಃ ಕಾಂಗ್ರೆಸ್ ಒಡೆದು ಹಾಳುವ ನೀತಿಯಿಂದಲೇ ಇಂದು ಹೀನಾಯ ಸ್ಥಿತಿ ತಲುಪಿದೆ. ಲಿಂಗಾಯತರನ್ನು ಒಡೆದದ್ದಾಯ್ತು, ಟಿಪ್ಪು ಸುಲ್ತಾನ ಜಯಂತಿ ಆಚರಣೆಗೆ ತಂದು ಸಮಾಜ ಹಾಳು ಮಾಡಿದ್ದಾಯ್ತು ಇದೀಗ ಒಕ್ಕಲಿಗರನ್ನು ಒಕ್ಕೆಲ್ಲೆಬ್ಬಿಸಲು ಹೊರಟಿದೆ ಎಂದು ರಾಜರಾಜೇಶ್ವರಿ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಿಡಿಕಾರಿದರು.
ಕಾಂಗ್ರೆಸ್ ಒಂದೇ ದೇಶ ಎಲ್ಲರೂ ಒಂದೇ ಎಂಬ ಭಾವನೆ ಇಲ್ಲ ಅದು ಒಡೆದು ಹಾಳುವ ನೀತಿ ಅನುಸರಿಸುತ್ತಾ ಬಂದಿದ್ದು, ಪ್ರಸ್ತುತ ಹಿನಾಯ ಸ್ಥಿತಿಗೆ ತಲುಪಿದೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿ ಅಖಂಡ ಭಾರತ ಇಲ್ಲಿ ವಾಸಿಸುವ ನಾವೆಲ್ಲ ಒಂದೇ ಎಂಬ ತತ್ವದಡಿ ದೇಶದ ಅಭೂತಪೂರ್ವ ಬೆಳವಣಿಗೆಗೆ ಶ್ರಮಿಸುತ್ತಿದೆ ಹೀಗಾಗಿ ದೇಶಕಾಯುವ ಪಕ್ಷಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.