ಕಾವ್ಯ
ನೀ..ಕನ್ನಡವನ್ನುಡಿ..ಕನ್ನಡ ಹೊನ್ನುಡಿ ಬಡಿಗೇರ ರಚಿತ ಕಾವ್ಯ
ಕನ್ನಡ ಹೊನ್ನುಡಿ
ಇಗೋ ಕನ್ನಡ
ಅಗೋ ಕನ್ನಡ
ಆಗೋ ನೀ ಕನ್ನಡಿಗ
ಬಾಗೋ ನೀ ಹೊನ್ನುಡಿಗೆ
ಸೇರೋ ನೀ ಕನ್ನಡ ಬಾಳ್ಗೆ
ಸಾಗೋ ನೀ ಕನ್ನಡ ಗೆಲ್ಗೆ
ಸಿರಿ ಗನ್ನಡಂ ಗೆಲ್ಗೆ
ಸಿರಿ ಗನ್ನಡಂ ಬಾಳ್ಗೆ ||ಪ||
ಕರುನಾಡ ಕನ್ನಡಿ
ಮೇರು ನುಡಿಯ ಹೊನ್ನುಡಿ
ಕೃಷ್ಣ ಗಂಗೆ ತುಂಗೆ ಕಾವೇರಿ
ಶ್ರೇಷ್ಠ ನದಿ ಅಲೆಗಳ ಝರಿ
ಸೃಷ್ಟಿಯ ಸೋಬಾನೆಗೆ
ದೃಷ್ಟಿಯ ಸುಮಬಾನು
ಇಷ್ಟ ಕಷ್ಟಗಳ ಕರಗಿಸೋ
ಕರುಣೆಯ ಕನ್ನಡಿ ಕನ್ನಡ
|| ೧ ||
ಹಸಿರೆಲೆಗಳ ತೊರಣ
ಹೊಸ ಗೀತೆಗಳ ಔತಣ
ಹಾಡಿದರೆ ಹಾಡಾಗುವ
ಗೀಚಿದರೆ ಕಾವ್ಯವಾಗುವ
ಪಠಿಸಿದರೆ ಪಠಣವಾಗುವ
ರಸ ಋಷಿಗಳ ಋತುಮಾನ
ರಸಿಕನೆದೆಯ ರತಿಗಾನ
ರಾಗ ಲಯ ತಾಳಗಳ
ಮಧುಪಾನ ಈ ಕನ್ನಡ
|| ೨ ||
ಪುರ ಪುಣ್ಯಗಳ ತಾಣ
ವಾಗ್ದೇವಿಯ ಶರಶಯನ
ಸಂದ್ಗಿತೆಯ ಸೋಪಾನ
ಸಂಗ್ಯಾ ಬಾಳ್ಯಾರ ಜ್ವಾಪಾನ
ವಚನ ವಿವೇಚನೆಗಳ ಸ್ಥಾನ
ದಾಸ ವ್ಯಾಸರುಗಳ ಕೀರ್ತನ
ಕೈಯತ್ತಿ ನಮಿಸು ಸಂಸ್ಥಾನ
ಕರಮುಗಿದು ಕಾಪಾಡೋ
|| ೩ ||
ಈ ಆದಿಕವಿಯ ಆಸ್ಥಾನ
ಈ ಕವಿ ಶೈಲದ ಆಹ್ವಾನ
ನುಡಿ ಕನ್ನಡ
ನಡೆ ಕನ್ನಡ
ನಮ್ಮ ಕನ್ನಡನಮಗೆ ಉಸಿರು
ನಮ್ಮ ಕನ್ನಡ ನಮಗೆ ಹೆಸರು
ರಚನೆ- ಗಂಗಾಧರ.ಎಂ.ಬಡಿಗೇರ