ಕಥೆ

ಗಣಪತಿಯೊಂದಿಗೆ ಮೊಬೈಲು ವಿಸರ್ಜನೆ..!

ಗಣಪತಿಯೊಂದಿಗೆ ಮೊಬೈಲು ಬಾವಿಗೆ..!

ಅದೊಂದು ದಿನ ಗಣೇಶ ಚತುರ್ಥಿಯಂದು ಸ್ನೇಹಿತರೆಲ್ಲರೂ ಸೇರಿ ಸಾಯಿ ಗಣೇಶ ಮಂಡಳಿ ಎಂದು ಹೆಸರಿಟ್ಕೊಂಡು ಪ್ರತಿ ವರ್ಷ ಗಣೇಶನ ಹಬ್ಬಕ್ಕೆ ಗಣೇಶನ ಮೂರ್ತಿ ಪ್ರತಿಷ್ಟಾಪಿಸಿ ಸಾಗರ ಸಂಭ್ರಮದೊಂದಿಗೆ ಆಚರಣೆ ಮಾಡುತಿದ್ದೇವು.
ಬಿಸಿ ರಕ್ತ ಎಲ್ಲಾ ವಾರಿಗೆಯವರು ಸೇರಿ ಆಚರಿಸುವ ಈ ಗಣೇಶ ಹಬ್ಬ ಬಂದರೆ ಸಾಕು ಎಲ್ಲಿಲ್ಲದ ಖುಷಿ.
ಆದರೆ ನಮ್ಮ ಮಂಡಳಿ ಸ್ವಾಭಿಮಾನದ್ದಾಗಿತ್ತು. ಯಾರತ್ರನೂ ಗಣೇಶ ಪಟ್ಟಿ ಕೀಳುವುದಾಗಲಿ. ಒತ್ತಡ ಬೆದರಿಕೆ ಯಾವತ್ತು ಮಾಡಿದವರಲ್ಲ.
ಸ್ನೇಹಿತರೆಲ್ಲರೂ ಸೇರಿಕೊಂಡು ಪ್ರತಿಯೊಬ್ಬರಿಗೂ ಇಂತಿಷ್ಟು ದುಡ್ಡು ಹಾಕಬೇಕು ಎಂದು.ನಾವೇ ನಿಯಮ ರೂಪಿಸಿಕೊಳ್ತಿದ್ವಿ.
ಅಲ್ಲದೆ ಸಾರ್ವಜನಿಕವಾಗಿ ಹಬ್ಬ ಆಚರಿಸುತ್ತಿರುವದರಿಂದ ನಿಯಮಿತವಾಗಿ ಬಡಾವಣೆ ಎಲ್ಲರು ಹತ್ರನೂ ಪಟ್ಟಿ ಕೇಳುತಿದ್ದೀವಿ. ಅವರೆಷ್ಟು ಕೊಟ್ಟರೂ ತೆಗೆದುಕೊಂಡು ಉಳಿದದ್ದು, ನಮ್ಮ ತಂಡ ದುಡ್ಡು ಹಾಕ್ಕೊಂಡು ಖರ್ಚು ಮಾಡುತ್ತಿದ್ವಿ.
ಅಲ್ಲದೆ ಶಹಾಪುರ ನಗರದ ಮಾರ್ಕೇಟ್ ಲೈನ್ ನಲ್ಲಿ ಬಸ್ ನಿಲ್ದಾಣ ಹತ್ತಿರ ನಾವು ಗಣಪತಿ ಸ್ಥಾಪನೆ ಮಾಡುತ್ತಿರುವುದರಿಂದ ಆ ಪ್ರದೇಶದ ಅಂತರದಲ್ಲಿ ಬರುವ ಎಲ್ಲಾ ಬಾರ್ ಆ್ಯಡ್ ರೆಸ್ಟೊರೆಂಟ್ ಗಳಿಂದ ಪಟ್ಟಿ ಅಂದರೆ ದೇಣಿಗೆ ಪ್ರೀತಿಯಿಂದಲೇ ಪಡೆತಿದ್ವಿ. ಅದು ಖುಷಿಯಿಂದಲೆ ಜಬರದಸ್ತಿ ಯಾರಿಗೂ ಬೇಡಿಲ್ಲ. ನಾವು ಅಚ್ಚು ಕಟ್ಟಾಗಿ ಗಣಪತಿ ಹಬ್ಬವನ್ನ ಆಚರಿಸುತ್ತಿರುವದರಿಂದ ಪ್ರತಿಯೊಬ್ಬರು ದೇಣಿಗೆಯನ್ನು ನೀಡುತಿದ್ದರು. ಅಲ್ಲದೆ ಯಾರಿಗೂ ನಾವು ಒತ್ತಡ ಹಾಕುತಿರಲಿಲ್ಲ.
ನಗರದಲ್ಲಿ ಕೆಲವೇ ಕೆಲವು ವಿಜೃಂಬಣೆಯಿಂದ ಜರುಗುವ ಗಣೇಶೋತ್ಸವ ಗಳಲ್ಲಿ ನಮ್ಮದು ಒಂದಾಗಿತ್ತು.
ಐದನೇ ದಿನಕ್ಕೆ ಗಣೇಶ ವಿಸರ್ಜನೆಗೆ ತುಂಬ ಸಂಭ್ರಮವಿರುತಿತ್ತು.
ಎಲ್ಲರೂ ತಮ್ಮ ಇಷ್ಟದ ಹೊಸ ಬಟ್ಟೆ ತೊಟ್ಟು ಮೆರವಣಿಗೆಯಲ್ಲಿ. ನಮ್ಮ ಸ್ನೇಹಿತರ ತಂಡಗಳಲ್ಲಿ ಎರಡು ಗುಂಪು ದೊಡ್ಡವರ ನನ್ನ ವಾರಿಗೆಯವರದು ಒಂದು ಗುಂಪು ಇನ್ನೊಂದು ನಮ್ಮ ತಮ್ಮಂದಿರ ಗುಂಪು ಅವರ ಗುಂಪಿಗೆ ಜ್ಯುನಿಯರ್ ಗುಂಪೆಂದು ಕರೆಯುತ್ತಿದ್ದೇವು.
ಗಣೇಶ ವಿಸರ್ಜನೆ ದಿನ, ಕಲಬುರ್ಗಿ, ಬಾಗಲಕೋಟ, ಇಲಕಲ್, ಹುಬ್ಬಳ್ಳಿ, ಬದಾಮಿಯಿಂದ ಡೊಳ್ಳು ಕುಣಿತ, ಬ್ಯಾಂಜೋ, ಡಾಲ್ಬಿ, ಹೀಗೆ.ಇತರಡೆಯಿಂದ ಮ್ಯುಸಿಕ್ ಸಿಸ್ಟಮ್ ದವರನ್ನು ಕರೆಸುತ್ತಿದ್ದೇವು.
ಅದೊಂದು ದಿನ ಸಂಭ್ರಮದಿಂದ ಮೆರವಣಿಗೆ ಸ್ನೇಹಿತರೆಲ್ಲರು ಸಂಗೀತ ವಾದ್ಯಕ್ಕೆ ಮನಸೋತು ಕುಣಿತದಲ್ಲಿ ತಲ್ಲೀನರಾಗಿದ್ದರು.
ನಾನು ವಿಡಿಯೋ ಮಾಡುತ್ತಿದ್ದ, ಆ ರಾತ್ರಿ ಸಾಲಾಗಿ ನಗರದ ಪ್ರಮುಖ ರಸ್ತೆ ಮೇಲೆ ಆಯಾ ಗಣೇಶ ಮಂಡಳಿಗಳ ಗಣಪತಿ ಮೂರ್ತಿ ಹೊತ್ತು ಮೆರವಣಿಗೆಯಲ್ಲಿದ್ರು, ಅಂದು ಮಳೆಯೋ ಮಳೆ ಬಂದ ನಗರದ ರಸ್ತೆ ತುಂಬೆಲ್ಲ ಮೊಳಕಾಲಿನಮಟ್ಟ ನೀರು.ಎಲ್ಲೆಂದರಲ್ಲಿ ನೀರು, ಮಳೆಯಲ್ಲಿ ನೆನೆದ ಸಾವಿರಾರು ಜನ ಮನೆಗೆ ಹೊರಟು ಹೋದರು.
ನಮ್ಮ ಗಣಪತಿ ಮುಂದೆ ಕೇವಲ ನಮ್ಮ ಸ್ನೇಹಿತರ ಗುಂಪಿನ ಐವತ್ತು ರಿಂದ 60 ಜನ ಮಾತ್ರ ಉಳಿದುಕೊಂಡಿದ್ದೆವು. ಅಂದು ಜೋಶ್ ನಲದ್ದ ನನ್ನೆಲ್ಲ ಸ್ನೇಹಿತರ ಮೈಮರೆತು ಕುಣಿತದಲ್ಲಿ ತಲ್ಲೀನರಾಗಿದ್ದರು. ಮಳೆ ಅಬ್ಬರ ಜಾಸ್ತಿಯಾಗಿದ್ದರಿಂದ ಎಲ್ಲರ ಮೊಬೈಲ್ ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕ್ಕೊಂಡು ನಮ್ಮ ಸಹೋದರನ ಒಬ್ಬರ ಕೈಯಲ್ಲಿ ಕೊಟ್ಟಿದ್ದೆ. ಹೀಗಾಗಿ ಮೊಬೈಲ್ ಮಳೆಗೆ ಆಹುತಿಯಾಗುವದನ್ನು ತಡೆಲೆತ್ನಿಸಿದ ಪ್ರಯತ್ನ ಅದಾಗಿತ್ತು.

ಅಲ್ಲದೆ ಅಂದು ಮಳೆಗೆ ಭಯಗೊಂಡು ಕೆಲವರು ಗಣಪತಿಗಳನ್ನು ವಿಸರ್ಜನೆ ಮಾಡದಾಗದೆ ನಡುಬೀದಿಯಲ್ಲಿ ಬಿಟ್ಟು ಬೆರಳಣಿಕೆಯಷ್ಟು ಜನ ಹೆಣಗಾಡುತ್ತಿದ್ದರು. ಅವನೆಲ್ಲ ಪೊಲೀಸರೆ ಮುಂದೆ ನಿಂತು ವಿಸರ್ಜನೆ ವ್ಯವಸ್ಥೆ ಮಾಡುತಿದ್ದರು.
ನಮ್ಮ ಗಣಪತಿ ಮಾತ್ರ ವ್ಯವಸ್ಥಿತವಾಗಿ ಮೈತೊಯಿಸಿಕೊಂಡರು ಹಿಗ್ಹಿನಿಂದಲೇ ಕೂಗುತ್ತಾ ಹೊರಟಿದ್ದೇವು. ದಾರಿಯುದ್ದಕ್ಕೂ ಜನರು ಮನೆಯಲ್ಲಿ ಕುಡಿಸಿದ್ದ ಚಿಕ್ಕ ಚಿಕ್ಕ ಗಣಪತಿಗಳನ್ನು ನಮ್ಮ ಮೆರವಣಿಗೆಯಲ್ಲಿಯೇ ನೀವೆ ವಿಸರ್ಜನೆ ಮಾಡಿ ಎಂದು ತಾಯಂದಿರು ತಂದು ಇಟ್ಟಿದ್ದರು. ಸಣ್ಣ ಗಣಪತಿಗಳೇ ಕನಿಷ್ಟವೆಂದರೂ 50 ಸನಿಹವಾಗಿದ್ದವು. ಅವೆಲ್ಲವನ್ನು ಪೂಜಿಸುವಷ್ಟರಲ್ಲಿ ಬೆಳಗಿನ ಜಾವ ನಾಲ್ಕುವರೆ ಗಂಟೆಯಾಗಿತ್ತು. ಕೆಲವು ದೊಡ್ಡ ಗಣೇಶ ಮೂರ್ತಿಗಳನ್ನು ಚರಬಸವೇಶ್ವರ ಗದ್ದುಗೆಯ ಆವರಣದಲ್ಲಿ ಇಟ್ಟೇವು. ಇನ್ನುಳಿದ ಸಣ್ಣ ಸಣ್ಣ ಗಣಪತಿಗಳು ದಾರಿಯುದ್ದಕ್ಕು ತಾಯಂದಿರು ತಮ್ಮ ತಮ್ಮ ಮನೆಯಲ್ಲಿ ಕೂಡಿಸಿದ್ದ ಗಣೇಶನನ್ನು ವಿಸರ್ಜನೆಗಾಗಿ ಮೆರವಣಿಗೆ ಸಂದರ್ಭದಲ್ಲಿ ನಮ್ಮ ಟ್ರಾಕ್ಟರ್ ನಲ್ಲಿಟ್ಟಿದ್ದರು. ಕನಿಷ್ಟ ವೆಂದರೂ 50 ಸನಿಹ ಗಣೇಶ ಮೂರ್ತಿಗಳಿಗೆ ಸಾಮೂಹಿಕ ಪೂಜೆ ಸಲ್ಲಿಸಿ ಬಾವಿಯೊಳಗೆ ಹಾಕಲು ಮುಂದಾದೆವು.
ಆಗಲೇ ಎಲ್ಲರೂ ಕುಣಿದು ಕುಣಿದು ಸುಸ್ತಾಗಿದ್ದರು. ಅಷ್ಟರಲ್ಲಿ ಮಳೆ ನಿಂತಾಗಿತ್ತು.
ಎಲ್ಲರ ಮೊಬೈಲ್ ಗಳನ್ನು ತೆಗೆದ ಸಹೋದರ ಶಶಿ, ಎಲ್ಲರಿಗೂ ಅವರವರ ಮೊಬೈಲ್ ಗಳನ್ನು ನಿಡುತ್ತಿದ್ದ, ಎಲ್ಲರೂ ಮೊಬೈಲ್ ರಕ್ಷಣೆ ಮಾಡಿದ್ದಕ್ಕೆ ತ್ಯಾಂಗ್ಸ್ ಹೇಳುತಿದ್ದರು.,
ಖುಷಿಯಲ್ಲಿ ನಗ್ತಾ ಇದ್ದರು ಪರಸ್ಪರು ತಮ್ಮ ಮುಖ ನೋಡಿಕೊಳ್ಳುತ್ತಾ, ದಣಿವನಲ್ಲು ಮುಗಳ್ನಗೆ ಬೀರಿದ್ದರು.
ಆಗ ನಾನು ನನ್ನ ಸ್ನೇಹಿತ ಡಾ.ಆನಂದ, ಉಮೇಶ ಬಾಗೇವಾಡಿ, ಮಲ್ಲಿಕಾರ್ಜುನ ಬಾಗಲಿ, ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಒಂದೊಂದಾಗಿ ಬಾವಿಯೊಳಗಡೆ ಹಾಕುತ್ತಿದ್ದೇವು. ಆಗ ನಮ್ಮ ಜೊತೆಯಲ್ಲಿಯೇ ಇದ್ದ ಇನ್ನೊಬ್ಬ ಸ್ನೇಹಿತ ಗೌಡ ಎಂಬಾತನು ಗಣೇಶ ಪ್ರತಿಮೆಗಳನ್ನು ಬಾವಿಯೊಳಗಡೆ ಹಾಕುತ್ತಿದ್ದ ಅಷ್ಟರಲ್ಲಿ ಶಶಿ ಆತನಿಗೆ ಗೌಡಪ್ಪ ಅಣ್ಣ ನಿನ್ನ ಮೊಬೈಲ್ ತಗೋ ಎಂದ, ನಗುತ್ತಲೇ ಮೊಬೈಲ್ ಪಡೆದ ಆತ ಟ್ರಾಕ್ಟರನಿಂದ ಒಂದೊಂದು ಗಣೇಶನನ್ನು ತಂದು ಜೈಗಣೇಶ ಎಂದು ಬಾವಿಯೊಳಗಡೆ ಹಾಕ್ತಾ ಇದ್ದಾಗ..ಅಷ್ಟರಲ್ಲಿ ಆತ ತನ್ನ ಮೊಬೈಲ್ ಆನ್ ಮಾಡಿ ಜೇಬಿನಲ್ಲಿ ಇಟ್ಟುಕೊಂಡಿದ್ದ ಎನಿಸುತ್ತೆ, ಆತನ ಮೊಬೈಲ್ ಗೆ ಪಿಕ್ಚರ್ ಮೆಸೆಜ್ವೊಂದು ಬಂದಿತ್ತು. ಅದರಲ್ಲಿ ಗಣೇಶನ ಚಿತ್ರವಿದ್ದ ಜೈಗಣೇಶ ಎಂದು ಬರೆದಿರುವದು, ಮೊದಲೇ ಗಣೇಶ ಮೂರ್ತಿಗಳನ್ನು ಬಾವಿಯೊಳಗಡೆ ಹಾಕುವ ತರಾತುರಿಯಲ್ಲಿದ್ದ ಆತ ಮೊಬೈಲ್ ನಲ್ಲಿ ಗಣೇಶ ಚಿತ್ರ ನೋಡಿ ಜೈಗಣೇಶ ಎಂದು ಮೊಬೈಲ್ ಸಹ ಬಾವಿಯಲ್ಲಿ ಹಾಕಿದ್ದ.
ನಂತರ ಎಚ್ಚರಗೊಳ್ಳುತಿದ್ದಂತೆ ಎಲ್ಲರೂ ನಕ್ಕೋನಕ್ಕು ದಣಿವು ಮಾಯವಾಗಿತ್ತು. ಮೊಬೈಲ್ ಎಸೆದ ಗೌಡಪ್ಪನ ಮುಖದಲ್ಲಿ ಮಂದಹಾಸ ಮೂಡಿತ್ತು. ಆಗ ಆ ಮೊಬೈಲ್ ಮೊತ್ತ ೫ ಸಾವಿರದ್ದಾಗಿತ್ತು.ಕಲರ್ ಮೊಬೈಲ್ ನೋಕಿಯಾದ್ದು, ಈ ಘಟನೆ ಪ್ರತಿ ಗಣೇಶನ ಹಬ್ಬಕ್ಕೆ ನೆನೆದು ನೆನೆದು ನಗುಬರುತ್ತದೆ.
ಜೈಗಣೇಶ..ಜೈಜೈ ಗಣೇಶ..

ಮಲ್ಲಿಕಾರ್ಜುನ ಮುದನೂರ.

Related Articles

Leave a Reply

Your email address will not be published. Required fields are marked *

Back to top button