“ಮಿದುಳಿಲ್ಲದ ಕತ್ತೆ” ನರಿ ತೋರಿತು ತನ್ನ ಬುದ್ಧಿ
ಮಿದುಳಿಲ್ಲದ ಕತ್ತೆ
ಒಂದು ಕಾಡಿನಲ್ಲಿ ಮುದಿ ಸಿಂಹವಿತ್ತು. ಪ್ರಾಣಿಗಳನ್ನು ಉಪಾಯ ಹೂಡಿತು. ನರಿಯನ್ನು ಬಳಿ ಕರೆದು “ನರಿರಾಯಾ, ಬೇಟೆ ಆಡಲು ನನಗೆ ಶಕ್ತಿ ಸಾಲಾದಾದಾಗ ಅದೊಂದು ನೀನೇ ಈಗ ಮುಖ್ಯಮಂತ್ರಿಯಾಗಿರುವಿ. ನಾನಿನ್ನು ಬೇಟೆಗೆ ಹೋಗೋದು ಚೆನ್ನಾಗಿ ಕಾಣಿಸೋಲ್ಲ.
ಆದ್ದರಿಂದ ಮಂತ್ರಿಯಾದ ನೀನೇ ನನಗೆ ದಿನಾಲೂ ಒಂದು ಪ್ರಾಣಿಯನ್ನು ತಂದು ಕೊಡಬೇಕು” ಎಂದಿತು. ನರಿಯು ಸಿಂಹಕ್ಕೆಂದು ಆಹಾರ ಹುಡುಕಿಕೊಂಡು ಕಾಡಿನೊಳಗೆ ಹೋಯಿತು. ಸ್ವಲ್ಪದೂರ ಹೋಗುವುದರೊಳಗೆ ಕೊಬ್ಬಿದ ಕತ್ತೆ ಸಿಕ್ಕಿತು. ಅದನ್ನು ಗಾಳ ಹಾಕಿ ಸಿಂಹದ ಬಳಿ ಕರೆತರಲು ಬಹಳ ಯತ್ನಿಸಿತು. ಆದರೆ ಸಿಂಹದ ಬಳಿಗೆ ಬರುತ್ತಲೇ ಹೆದರಿ ಓಡಿತು. ಆಗ ಸಿಂಹಕ್ಕೆ ವಿಪರೀತ ಸಿಟ್ಟು ಬಂತು.
ನರಿಯು ನಿಧಾನವಾಗಿ “ನೀನು ಅವಸರಿಸಬಾರದಾಗಿತ್ತು. ಖಂಡಿತ ಕತ್ತೇನ ನಿನ್ನ ಬಳಿ ತರುವೆ” ಎನ್ನುತ್ತಲೇ ಪುನಃ ಕತ್ತೆಯ ಬೇಟೆಗೆಂದು ಹೋಯಿತು.
ಅದು ಕಾಣಿಸಿತು. ಈ ಬಾರಿ ಕತ್ತೆಯನ್ನು ಪ್ರೀತಿಯಿಂದಲೇ ಕರೆ ತಂದಿತು. ಕತ್ತೆ ಧೈರ್ಯ ಮಾಡಿ ಸಿಂಹದ ಬಳಿ ಬಂದು ನಿಂತಿತು. ಸಿಂಹ ಚಂಗನೆ ಹಾರಿ ಅದರ ಕೊರಳನ್ನು ಕಚ್ಚಿ ಸಾಯಿಸಿತು. ಸಿಂಹಕ್ಕೆ ತುಂಬಾ ಹಸಿವಾಗಿದ್ದುದರಿಂದ ಕತ್ತೆಯನ್ನು ತಿನ್ನಲು ಸಿದ್ಧವಾಗುತ್ತಿದ್ದ ಹಾಗೇನೇ ನರಿ ನೆನಪಿಸಿತು “ರಾಜರು ಊಟಕ್ಕೆ ಮುಂಚೆ ಸ್ನಾನ ಮಾಡುವುದಿಲ್ಲವೇ?” ಕ್ಷಣ ಕಾಯುತ್ತಿರು ಎನ್ನುತ್ತಲೇ ಸಿಂಹ ಸ್ನಾನಕ್ಕೆಂದು ನದಿಗೆ ಹೋಯಿತು.
ಇತ್ತ ನರಿ ಕತ್ತೆಯ ಮಿದುಳನ್ನು ಬಗೆದು, ಅದು ತುಂಬಾ ರುಚಿಯಾದುದರಿಂದ ಚಪ್ಪರಿಸಿಕೊಂಡು ತಿಂದಿತು. ಸ್ನಾನ ಮುಗಿಸಿ ಬಂದ ಸಿಂಹವು ಕತ್ತೆಯ ಮಿದುಳನ್ನು ತಿನ್ನಲು ಅದರ ತಲೆ ಬಗೆದಾಗ ಆ ಜಾಗ ಖಾಲಿಯಾಗಿತ್ತು.
ತಕ್ಷಣ ಸಿಟ್ಟಿನಿಂದಲೇ ಅಬ್ಬರಿಸಿತು “ಯಾರು ಈ ಮಿದುಳನ್ನು ತಿಂದರು?” ಎಂಬುದಾಗಿ ನರಿ ಅತಿ ವಿನಮ್ರತೆಯಿಂದಲೇ – “ಈ ಕತ್ತೆಗೆ ಮಿದುಳಿಲ್ಲ ಎಂಬುದು ರಾಜನಿಗೆ ತಿಳಿದಿಲ್ಲವೇ ? ಅದು ಮಿದುಳಿದ್ದುದೇ ಹೌದಾದರೆ ಎರಡನೇ ಬಾರಿ ಬರುತ್ತಿತ್ತೇ ನಿಮ್ಮ ಬಳಿ?” ಎಂಬುದಾಗಿ ಹೇಳಿತು. ತಕ್ಷಣವೇ ಸಿಂಹ “ನಿಜ , ನೀನಂತೂ ಸದಾ ಸತ್ಯವಂತನೇ” ಎನ್ನುತ್ತಲೇ ಕತ್ತೆಯ ಮಾಂಸವನ್ನೆಲ್ಲ ಹಿಗ್ಗಿನಿಂದಲೇ ಖಾಲಿ ಮಾಡಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.