ಪುನೀತರ ಸಮಾಜ ಸೇವೆ ಯುವಕರಿಗೆ ಮಾದರಿ-ವಿಶ್ವರಾಧ್ಯ ಸ್ವಾಮೀಜಿ
ಬೊಂಬೆ ಹೇಳುತೈತೆ ನಿತ್ಯೋತ್ಸವ ಕಾರ್ಯಕ್ರಮ
ಪುನೀತರ ಸಮಾಜ ಸೇವೆ ಯುವಕರಿಗೆ ಮಾದರಿ-ವಿಶ್ವರಾಧ್ಯ ಸ್ವಾಮೀಜಿ
ಬೊಂಬೆ ಹೇಳುತೈತೆ ನಿನ್ನ ಹಾಡು ನಿತ್ಯೋತ್ಸವ ಕಾರ್ಯಕ್ರಮ
yadgiri, ಶಹಾಪುರಃ ಕನ್ನಡ ಚಲನ ಚಿತ್ರ ನಟ ಪುನೀತ್ ರಾಜಕುಮಾರ ಅವರ ಅಗಾಧ ಸೇವೆ ಯುವಕರಿಗೆ ಮಾದರಿಯಾಗಿದೆ. ಒಂದು ಕೈಯಿಂದ ಕೊಟ್ಟಿದ್ದು ಮತ್ತೊಂದು ಕೈಗೆ ಗೊತ್ತಾಗಬಾರದೆಂಬಂತೆ ಅವರ ಸೇವೆ ಅಪಾರ. ಅವರು ಅಗಲಿದ ನಂತರ ಸಹಾಯ ಪಡೆದಂತ ಹಲವಾರು ಜನ ಕಣ್ಣೀರಿಟ್ಟು ಮರುಗಿದಾಗಲೇ ಅವರ ವ್ಯಕ್ತಿತ್ವ ಆಲದ ಮರಕ್ಕಿಂತ ಹೆಚ್ಚು ಎಂಬುದು ತಿಳಿದು ಇಡಿ ನಾಡು ಕಣ್ಣೀರಲ್ಲಿ ಮಿಂದೇಳುವಂತಾಯಿತು ಎಂದು ಜ್ಯೋತಿರ್ಲಿಂಗ ದೇವಾಲಯದ ವಿಶ್ವರಾಧ್ಯ ಸ್ವಾಮೀಜಿ ತಿಳಿಸಿದರು.
ನಗರದ ಕಾಳಿಕಾದೇವಿ ದೇವಾಲಯದ ಸಭಾಂಗಣದಲ್ಲಿ ಶ್ರೀಗುರು ಕೃಪಾ ಸಂಗೀತ ಸಂಸ್ಕøತಿಕ ಕಲಾ ಸಂಸ್ಥೆ ಪುನೀತ್ ಜನ್ಮ ದಿನ ಅಂಗವಾಗಿ ಬೊಂಬೆ ಹೇಳುತೈತೆ ನಿನ್ನ ಹಾಡು ನಿತ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಕನ್ನಡ ನಾಡಿನ ಲಕ್ಷಾಂತರ ಅಭಿಮಾನಿಗಳ ಆರಾದ್ಯ ದೇವರಾದ ಪುನೀತರ ಜೀವನ ಪಾವನ. ಅದಕ್ಕೆ ಅವರ ಉತ್ತಮ ಸಹಾಯ ಸಹಕಾರದಂತ ಉತ್ತಮ ಗುಣಗಳೇ ಕಾರಣ. ಯಾರ ಮನಸ್ಸು ನೋಯಿಸದ, ಚಿತ್ರ ನಟರಲ್ಲಿ ಕಷ್ಟವೆಂದು ಬಂದಂತವರಿಗೆ ಕೈಮುಚ್ಚಿ ಸಹಾಯ ಹಸ್ತ ನೀರಿದ ವೀರ ಕನ್ನಡಿಗ ಪುನೀತ್ ಅವರು, ಅಂತವರ ಜನ್ಮ ದಿನಾಚರಣೆ ಸ್ಮರಣೋತ್ಸವ ಮುಂದಿನ ನಟ, ನಟಿಯರಿಗೆ ಅಲ್ಲದೆ ಯುವಕರಿಗೆ ಪ್ರೇರಣೆ, ಸ್ಪೂರ್ತಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಅಡಿವೆಪ್ಪ ಜಾಕಾ ಉದ್ಘಾಟಿಸಿದರು. ಲೋಕಾಪುರ ಮಹಾಂತ ದೇವರು, ಶಂಕರ ಗುರ್ತಿಗಿ, ಹೊನ್ನಪ್ಪ, ಅಶೋಕ ಇಟಗಿ ಮತ್ತು ಸಂಸ್ಥೆಯ ಅಧ್ಯಕ್ಷ ಮಲ್ಲಯ್ಯ ಹಿರೇಮಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಾವಿದರಾದ ಬೂದಯ್ಯ ಹಿರೇಮಠ, ಗಣೇಶ ಪತ್ತಾರ, ಕಲ್ಲಯ್ಯಸ್ವಾಮಿ, ಗಣೇಶ ಪೊಲೀಸ್, ಬಸವರಾಜ, ಮಹೇಶ ಶಿರವಾಳ ಇವರಿಂದ ಪುನೀತ್ ಚಿತ್ರದ ಹಲವು ಹಾಡುಗಳನ್ನು ಹಾಡಿದರು.