ಅಬ್ಬೆತುಮಕೂರು ಕ್ಷೇತ್ರದಲ್ಲಿ ಇಂದಿನಿಂದ ನವರಾತ್ರಿ ಉತ್ಸವ ಆರಂಭ
ಅಬ್ಬೆತುಮಕೂರು ಕ್ಷೇತ್ರ - ನವರಾತ್ರಿ ಉತ್ಸವ ಆರಂಭ
ಅಬ್ಬೆತುಮಕೂರು ಕ್ಷೇತ್ರದಲ್ಲಿ ಇಂದಿನಿಂದ ನವರಾತ್ರಿ ಉತ್ಸವ ಆರಂಭ
ಯಾದಗಿರಿ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರಾಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಸುಕ್ಷೇತ್ರದಲ್ಲಿ ಶ್ರೀಮಠದ ಪೀಠಾಧಿಪತಿ ಡಾ. ಗಂಗಾದರ ಮಹಾಸ್ವಾಮೀಜಿಗಳವರ ಘನ ನೇತೃತ್ವದಲ್ಲಿ ನವರಾತ್ರಿಯ ಉತ್ಸವಗಳು ಇಂದಿನಿಂದ ಪ್ರಾರಂಭವಾಗಲಿವೆ ಎಂದು ಶ್ರೀಮಠದ ವಕ್ತಾರ ಡಾ. ಸುಬಾಷ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಇಂದು ಸೋಮವಾರದಿಂದ ಒಂಬತ್ತು ದಿನಗಳವರೆಗೆ ಶ್ರೀಮಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀಬಗಳಾಂಬಿಕಾ ದೇವಿಯ ಮೂರ್ತಿಗೆ ವಿಶೇಷ ಕುಂಕುಮಾರ್ಚಾನೆ, ಪ್ರಾರ್ಥನೆ ನೆರವೇರಸಲಾಗುವುದು. ನಂತರ ನವರಾತ್ರಿಯ ಪ್ರಯುಕ್ತ ಒಂಬತ್ತು ದಿನಗಳವರೆಗೆ ಶ್ರೀ ದೇವಿಯ ಪಾರಾಯಣವು ಪ್ರತಿದಿನವೂ ಜರುಗುವುದು. ತರುವಾಯ ಶ್ರೀಮಠದ ಪೀಠಾಧಿಪತಿ ಡಾ. ಗಂಗಾದರ ಮಹಾಸ್ವಾಮೀಜಿಗಳವರು ಐದು ಬಗೆಯ ಮಹಾಮಂಗಳಾರುತಿಯನ್ನು ನೆರವೇರಿಸುವರು.
ವಿವಿಧ ಕಲಾತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುವವು. ನಂತರ ಆಗಮಿಸುವ ಸಕಲ ಭಕ್ತಾಧಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಇರುವುದು. ಪ್ರಯುಕ್ತ ಭಕ್ತಾಧಿಗಳು ಈ ಧಾರ್ಮಿಕ ಪುಣ್ಯಕಾರ್ಯದಲ್ಲಿ ಒಂಬತ್ತು ದಿನಗಳ ಕಾಲ ನಿರಂತರವಾಗಿ ಪಾಲ್ಗೊಂಡು ಶ್ರೀ ಬಗಳಾಂಬಿಕಾ ದೇವಿಯ ಹಾಗೂ ವಿಶ್ವಾರಾದ್ಯರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.