ಕೃಷಿ ವಿದ್ಯಾರ್ಥಿಗಳಿಂದ ಕೃಷಿ ಕಾರ್ಯಾನುಭವ ಶಿಬಿರ
ತೊಗರಿ ಬೆಳೆ ಕುಡಿ ಚಿವುಟುವಿಕೆಯಿಂದ ಫಲ ವೃದ್ಧಿ
ತೊಗರಿ ಬೆಳೆಯ ಕುಡಿ ಚಿವುಟುವಿಕೆಃ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಅಧ್ಯಯನ
yadgiri, ಶಹಾಪುರಃ ಸಮೀಪದ ಭೀಮರಾಯನಗುಡಿಯ ಕೃಷಿ ಮಹಾವಿದ್ಯಾಲಯದ ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವದ ಶಿಬಿರದ ಅಂಗವಾಗಿ ತೊಗರಿ ಬೆಳೆಯಲ್ಲಿ ಕುಡಿ ಚಿವುಟುವಿಕೆ ಕುರಿತ ಕಾರ್ಯಕ್ರಮವನ್ನು ಸಮೀಪದ ಜೇವರ್ಗಿ ತಾಲೂಕಿನ ಸುಂಬಡ ಗ್ರಾಮದಲ್ಲಿ ಆಯೋಜಿಸಿದ್ದರು.
ಶಿಬಿರದ ಸಂಯೋಜಕ ಡಾ.ಎಚ್.ಡಿ.ರುದ್ರಮೂರ್ತಿ ಮತ್ತು ಡಾ.ಪಾಲಯ್ಯ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಅಧ್ಯಯನ ಮಾಡಿದರು.
ವಿದ್ಯಾರ್ಥಿಗಳಾದ ಸಚಿನ್ ಮತ್ತು ಶರಣಮ್ಮ ಅವರು ಕುಡಿ ಚಿವುಟುವಿಕೆಯ ವಿಧಾನವನ್ನು ರೈತರಿಗೆ ತೋರಿಸಿಕೊಟ್ಟರು. ಕುಡಿ ಚಿವುಟುವಿಕೆಯನ್ನು ಕೈಗಳಿಂದ ಹಾಗೂ ಕತ್ತರಿ ಮತ್ತು ಯಂತ್ರೋಪಕರಣಗಳ ಸಹಾಯದಿಂದ ಮಾಡಬಹುದು.
ಬೆಳೆಯುತ್ತಿರುವ ಗಿಡಗಳು 40-50 ದಿನ ಇರುವಾಗ ತುದಿಯನ್ನು 4-6 ಸೆಂ.ಮೀ. ಕತ್ತರಿಸಬೇಕು. ಒಂದು ಎಕರೆ ಪ್ರದೇಶಕ್ಕೆ 6 ರಿಂದ 7 ಜನ ಕೆಲಸಗಾರರು ಬೇಕಾಗುವ ಸಮಯದಲ್ಲಿ ಕುಡಿ ಚಿವುಟುವ ಯಂತ್ರಗಳ ಸಹಾಯದಿಂದ ಪ್ರತಿ ಎರಡು ಎಕರೆ ಪ್ರದೇಶದಲ್ಲಿ ಸರಳವಾಗಿ ಕಾರ್ಯಸಾಧನೆ ಮಾಡಬಹುದು.
ಕುಡಿ ಚಿವುಟಿಕೆಯಿಂದ ಗಿಡದಲ್ಲಿ ಕವಲುಗಳ ಸಂಖ್ಯೆ ಹೆಚ್ಚಾಗಿ ಹೂ, ಕಾಯಿಗಳ ಸಂಖ್ಯೆ ವೃದ್ಧಿಸುತ್ತವೆ. ಮತ್ತು ರೋಗ ಮತ್ತು ಕೀಟಬಾಧೆಯನ್ನು ಸಹ ಕಡಿಮೆ ಮಾಡಬಹುದು. ಕುಡಿ ಕತ್ತರಿಸುವದರಿಂದ ಶೇಕಡಾ 15 ರಿಂದ 20 ರಷ್ಟು ಇಳುವರಿ ಹೆಚ್ಚಳವಾಗುದೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಕೃಷಿ ವಿದ್ಯಾರ್ಥಿಗಳು ರೈತರಿಗೆ ತಿಳಿಸಿಕೊಟ್ಟರು.