ವಿನಯ ವಿಶೇಷ

ಯಾವ್ಯಾವ ರಾಶಿ ಮೇಲಿದೆ ಲಕ್ಷ್ಮೀ ಕೃಪಕಟಾಕ್ಷ

ಶ್ರೀ ಮಹಾಲಕ್ಷ್ಮಿ ಅಮ್ಮನವರ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಅನುರಾಧಾ
ಋತು : ವರ್ಷ
ರಾಹುಕಾಲ 10:59 – 12:33
ಗುಳಿಕ ಕಾಲ 07:49 – 09:24
ಸೂರ್ಯೋದಯ 06:14:35
ಸೂರ್ಯಾಸ್ತ 18:51:49
ತಿಥಿ : ನವಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮ ಇಷ್ಟಾರ್ಥ ಕಾರ್ಯಗಳು ಸಿದ್ಧಿಯಾಗಲು ಶ್ರಮದ ಅವಶ್ಯಕತೆ ಇದೆ. ಬಂಧು ವರ್ಗದಿಂದ ಭೂ ಸಂಬಂಧಿತ ವ್ಯಾಜ್ಯಗಳು ಸೃಷ್ಟಿಯಾಗಬಹುದು. ನಿಮ್ಮಲ್ಲಿ ಮೂಡುವ ಋಣಾತ್ಮಕ ಯೋಚನೆಗಳನ್ನು ದೂರವಿಟ್ಟು ಯೋಜನೆಗಳಲ್ಲಿ ಪಾಲ್ಗೊಳ್ಳಿ. ಸಾಲದ ಬಾಬ್ತುಗಳು ಹೆಚ್ಚಾಗಲಿದ್ದು ಮುಂದೆ ಸಂಕಷ್ಟ ತಂದೊಡ್ಡಬಹುದು ಇಂದೇ ಎಚ್ಚರದಿಂದ ತೀರಿಸುವ ಯೋಜನೆಯನ್ನು ರೂಪಿಸಿಕೊಳ್ಳಿ. ಸಂಗಾತಿಯಿಂದ ನಿಮ್ಮ ಕಾರ್ಯಗಳಿಗೆ ಉತ್ತಮ ಸ್ಪಂದನೆ ದೊರೆಯಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಷಭ ರಾಶಿ
ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಈ ದಿನ ಸದಸ್ಯರು ಸಡಗರದಿಂದ ವರ್ತಿಸುತ್ತಾರೆ. ಬಾಕಿ ಕೆಲಸಗಳನ್ನು ಹಠಬಿಡದೆ ಪೂರ್ಣ ಮಾಡುವ ತವಕ ನಿಮ್ಮಲ್ಲಿ ಕಾಣಬಹುದು. ನೀವು ಮಾಡಿರುವ ಹೂಡಿಕೆಗಳು ಉತ್ತಮ ಫಲಿತಾಂಶ ತಂದುಕೊಡುತ್ತದೆ. ಭೋಗವಿಲಾಸ ತನವನ್ನು ವ್ಯಕ್ತಪಡಿಸುವ ಇರಾದೆಯನ್ನು ತೆಗೆದುಹಾಕಿ. ಮಕ್ಕಳ ಅಭ್ಯುದಯಕ್ಕೆ ನಿಮ್ಮ ಕೊಡುಗೆ ಅತ್ಯಮೂಲ್ಯವಾದದ್ದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಖರ್ಚುಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಸಾಲ ಮಾಡದೆ ಇರುವ ಹಾಗೆ ಆರ್ಥಿಕ ವ್ಯವಸ್ಥೆ ರೂಪಿಸಿಕೊಳ್ಳಿ. ಕೆಲಸವು ಅನಾಯಾಸವಾಗಿ ನಡೆಯಲಿದೆ. ಕೊಟ್ಟಿರುವ ಹಣಕಾಸು ಗಳನ್ನು ಮರಳಿ ಪಡೆಯುವ ಯತ್ನದಲ್ಲಿ ವಿಫಲರಾಗುವಿರಿ. ಆರೋಗ್ಯದ ಬಗ್ಗೆ ಅಗತ್ಯ ಕಾಳಜಿವಹಿಸಿ. ಆತ್ಮೀಯರ ಮನೆಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಯೋಜನೆಗಳಿಗೆ ಬಂಡವಾಳದ ಸಮಸ್ಯೆ ನಿಮಗೆ ಕಾಡಬಹುದು. ಕೆಲಸದಲ್ಲಿ ಕೆಲವು ಮಾರ್ಪಾಡುಗಳು ಅಗತ್ಯವಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಕ್ರೀಡೆಗಳಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತದೆ. ಹಣಕಾಸಿನ ವ್ಯವಹಾರಗಳನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಳ್ಳುವುದು ಒಳಿತು. ವಿಷಯದಲ್ಲಿನ ಗೊಂದಲದಿಂದ ನಿಮಗೆ ಹಿನ್ನಡೆ ಕಾಣಬಹುದು. ನಿಮ್ಮ ವೈಯಕ್ತಿಕ ತೇಜೋವಧೆಗೆ ಕೆಲವರು ಹುನ್ನಾರ ನಡೆಸಿರಬಹುದಾದ ಸಾಧ್ಯತೆ ಇದೆ. ಈ ದಿನ ಉತ್ತಮ ಒಡನಾಟಗಳನ್ನು ಹೊಂದುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಅಗತ್ಯ ಕೆಲಸಗಳಲ್ಲಿ ಪಾಲ್ಗೊಂಡು ಕ್ರಿಯಾಶೀಲರಾಗಿ ಸಂಪೂರ್ಣ ಕೆಲಸವನ್ನು ಮಾಡಿ ಮುಗಿಸುವ ಇರಾದೆ ಬೆಳೆಸಿಕೊಳ್ಳಿ. ವ್ಯವಹಾರಿಕ ಕ್ಷೇತ್ರದಲ್ಲಿ ಜಯ ಸಂಪಾದನೆ ಆಗಲಿದೆ. ಮನೆಯಲ್ಲಿ ಶುಭ ಸಮಾರಂಭದ ಚರ್ಚೆಗಳು ನಡೆಯಲಿದೆ. ಭೂಮಿಗೆ ಸಂಬಂಧಪಟ್ಟಂತಹ ವ್ಯಾಜ್ಯಗಳು ಎದುರಾಗಬಹುದು. ಅಪಾತ್ರರಿಗೆ ಒಳಿತು ಮಾಡಲು ಹೋಗಿ ಸಿಲುಕಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಪಡೆದಿರುವ ಸಾಲವನ್ನು ತೀರಿಸುವ ಯೋಚನೆ ಮಾಡಿ. ಆದಷ್ಟು ಪ್ರಗತಿದಾಯಕ ಯೋಚನೆ ಅಗತ್ಯ ಹಾಗೂ ತಾಳ್ಮೆ ನಿಮ್ಮಲ್ಲಿ ಬಹುಮುಖ್ಯವಾಗಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನಂಬಿಕಸ್ಥರು ನೀವು ಸಮಸ್ಯೆಯಲ್ಲಿ ಇದ್ದಾಗ ನಿಮ್ಮ ಹಿಂದೆ ಬರೆದೆ ಕುಂಟು ನೆಪ ಹೇಳಿ ಸಾಗುವರು. ಈ ದಿನ ಜೀವನದ ದೊಡ್ಡ ಪಾಠವನ್ನು ಕಲಿಯಲಿದ್ದೀರಿ. ಕೆಲಸದಲ್ಲಿ ಆದಷ್ಟು ತಾಂತ್ರಿಕವಾಗಿ ಮುಂದುವರೆಯುವ ಯೋಜನೆಗಳನ್ನು ರೂಪಿಸಿ. ಹೊಸ ವ್ಯವಹಾರವೂ ನಿಮಗೆ ಲಾಭಾಂಶ ತಂದುಕೊಡಲಿದೆ. ಚರ್ಚೆಗಳಲ್ಲಿ ನಿಮ್ಮ ನಿರೂಪಣೆ ಉತ್ತಮವಾಗಿರುತ್ತದೆ. ಉನ್ನತ ಸ್ಥಾನ ಅಪೇಕ್ಷೆಯ ಕನಸು ನನಸಾಗುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ತುಲಾ ರಾಶಿ
ಕಲೆಯಲ್ಲಿ ಆಸಕ್ತಿ ಮೂಡಲಿದೆ, ನಿಮ್ಮ ಪ್ರತಿಭೆಗಳನ್ನು ಗುರುತಿಸುವ ಹಾಗೂ ಅವಕಾಶಗಳನ್ನು ನೀಡುವ ಸಾಧ್ಯತೆ ಕಾಣಬಹುದು. ಕೆಲವರು ನಿಮ್ಮ ವ್ಯವಹಾರದಲ್ಲಿ ನಂಬಿಕೆದ್ರೋಹ ಮಾಡಬಹುದು ಎಚ್ಚರವಿರಲಿ. ಗೃಹಪಯೋಗಿ ವಸ್ತುಗಳ ಖರೀದಿ ಮಾಡುವ ಸಾಧ್ಯತೆ ಕಾಣಬಹುದು. ಹಣಕಾಸಿನ ವಿಷಯದಲ್ಲಿ ನೀವು ಕೆಲವು ನಿಲುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯೊಡನೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆ ರೂಪಿಸಲಿದ್ದೀರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಮನಸ್ಸಿನಲ್ಲಿ ಹೆಚ್ಚಾಗಿ ವೈಯಕ್ತಿಕ ಸಮಸ್ಯೆಗಳನ್ನು ಅನುಭವಿಸುತ್ತಾ ಕೊರಗಬೇಡಿ, ಆತ್ಮೀಯರೊಡನೆ ಚರ್ಚಿಸಿ ಪರಿಹಾರ ಕಾಣಿರಿ. ಕೆಲಸದ ವಿಷಯದಲ್ಲಿ ನಿರಾಸಕ್ತಿ ಹೆಚ್ಚಾಗಬಹುದು ಆದಷ್ಟು ಕಲ್ಪನೆಯಿಂದ ವಾಸ್ತವದ ಪ್ರಯಾಣ ಮಾಡುವುದು ಸೂಕ್ತ. ತೆರಿಗೆ, ವಿಮೆ, ಭೂ ಸಂಬಂಧಿತ ಪಾವತಿಗಳಿಗೆ ಆದಷ್ಟು ಗಮನ ನೀಡಿ. ಋಣಾತ್ಮಕ ವ್ಯಕ್ತಿತ್ವವಿರುವ ಜನರ ಸಹವಾಸವನ್ನು ಬಿಟ್ಟುಬಿಡಿ. ಮಕ್ಕಳ ಉದ್ಯೋಗಕ್ಕಾಗಿ ಪರಿಶ್ರಮ ಪಡಲಿದ್ದೀರಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕೌಟುಂಬಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು ನೀವು ಕುಟುಂಬದ ಸದಸ್ಯರನ್ನು ಪ್ರೇಮದಿಂದ ಕಾಣುವುದು ಸೂಕ್ತ. ಅನಿರೀಕ್ಷಿತವಾಗಿ ಪ್ರಯಾಣ ಬೆಳೆಸಬೇಕಾದ ಸಂದರ್ಭ ಬರಲಿದೆ. ವೃತ್ತಿಜೀವನದಲ್ಲಿ ಒತ್ತಡ ಭರಿತವಾದ ಸನ್ನಿವೇಶವನ್ನು ಎದುರಿಸಲಿದ್ದೀರಿ. ಲೆಕ್ಕಪತ್ರಗಳನ್ನು ಆದಷ್ಟು ಸೂಕ್ತವಾಗಿ ಅಧ್ಯಯನ ನಡೆಸಿ. ನಿಮ್ಮ ಕೆಲಸದ ಪಟುತ್ವ ತುಂಬಾ ಉತ್ತಮವಾಗಿ ಮೂಡಿ ಬರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಕರ ರಾಶಿ
ಮಧ್ಯವರ್ತಿಗಳು ನಿಮ್ಮ ಯೋಜನೆಗಳಿಗೆ ಸಮಸ್ಯೆ ನೀಡಬಹುದು ಎಚ್ಚರವಿರಲಿ. ರಾಜಿ ಸಂಧಾನ ಕಾರ್ಯಗಳಿಂದ ನಿಮ್ಮ ಬಗ್ಗೆ ಕೆಲವರಲ್ಲಿ ಅಪಸ್ವರ ಮೂಡಬಹುದಾದ ಸಾಧ್ಯತೆ ಇದೆ ಆದಷ್ಟು ಇಂದು ಈ ವಿಚಾರಗಳನ್ನು ತಡೆಗಟ್ಟಿ. ಹೊರಗಿನ ವಿಷಯಗಳನ್ನು ಮನೆತನಕ ತರುವುದು ಬೇಡ. ಶ್ರಮದಾಯಕ ವಿಚಾರಗಳಿಂದ ಮಹತ್ವದ ಕೆಲಸವನ್ನು ಮಾಡಲಿದ್ದೀರಿ. ಆರ್ಥಿಕ ಸದೃಡ ಗೊಳಿಸುವ ಜವಾಬ್ದಾರಿ ತೆಗೆದುಕೊಳ್ಳಿ. ದೈವ ಮಂದಿರಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಜೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ಇನ್ನೊಬ್ಬರೊಡನೆ ತುಲನೆ ಮಾಡಿಕೊಳ್ಳುವ ಸ್ವಭಾವ ತೆಗೆದುಹಾಕಿ. ನಿಮ್ಮ ದಿನ ಆತ್ಮಬಲವನ್ನು ವೃದ್ಧಿಸಿಕೊಂಡು ಕಾರ್ಯದಲ್ಲಿ ಪಾಲ್ಗೊಳ್ಳಿ. ಸಂಗಾತಿಯ ಚುಚ್ಚು ಮಾತುಗಳು ನಿಮಗೆ ಸಿಟ್ಟು ತರಿಸಬಹುದು ತಾಳ್ಮೆ ಅಗತ್ಯವಾಗಿದೆ. ಯೋಗಧ್ಯಾನ ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹರಿಸಿಕೊಳ್ಳುವುದು ಕ್ಷೇಮ. ಮಧ್ಯವರ್ತಿ ಕೆಲಸಗಾರರಿಗೆ ಅತ್ಯುತ್ತಮವಾಗಿದ್ದು ಹೆಚ್ಚಿನ ಲಾಭಾಂಶದ ದಿಕ್ಸೂಚಿ ಕಾಣಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಮಾಡುವ ಕೆಲಸದಲ್ಲಿ ಅಂತಿಮ ಘಟ್ಟದವರೆಗೂ ಸಹ ಕ್ರಿಯಾಶೀಲತೆ ತುಂಬಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಅಷ್ಟೇನೂ ಸಾಧಕವಾಗಿ ಕಂಡುಬರುವುದಿಲ್ಲ. ಹಿರಿಯರೊಡನೆ ಮನಸ್ತಾಪ ವಾಗುವ ಸಾಧ್ಯತೆ ಇದೆ. ಪ್ರಯಾಣ ಗಳಿಂದ ದೇಹದಲ್ಲಿ ಆಯಾಸ ಹೆಚ್ಚಾಗುತ್ತದೆ. ಮೋಸದ ಹೂಡಿಕೆಗಳಿಂದ ದೂರವಿರಿ. ಸಾಲ ತೆಗೆದುಕೊಳ್ಳುವ ಅಥವಾ ಕೊಡುವ ವಿಚಾರಕ್ಕೆ ಕೈಹಾಕಬೇಡಿ. ಮಕ್ಕಳಿಂದ ನಿಮ್ಮಲ್ಲಿ ಮೂಡುವ ಬೇಸರ ಮಾಯವಾಗುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button