ಪ್ರಮುಖ ಸುದ್ದಿ
MP ಚುನಾವಣೆವರೆಗೆ ಕೈ ಗ್ಯಾರಂಟಿ ಆ ಮೇಲೆ ಕಾಂಗ್ರೆಸ್ ವಾರಂಟಿ ಖತಂ – ಯತ್ನಾಳ ಹೇಳಿಕೆ
ಸುಳ್ಳು ಗ್ಯಾರಂಟಿಗಳ ವಾರಂಟಿ ಖತಂ.?
MP ಚುನಾವಣೆವರೆಗೆ ಕೈ ಗ್ಯಾರಂಟಿ ಆ ಮೇಲೆ ಕಾಂಗ್ರೆಸ್ ವಾರಂಟಿ ಖತಂ – ಯತ್ನಾಳ ಹೇಳಿಕೆ
ಕೈ ಗೂಂಡಾಗಿರಿ, ದೌರ್ಜನ್ಯ, ಹಸಿರೀಕರಣ ನಡೆಯಲ್ಲ
ವಿವಿ ಡೆಸ್ಕ್ಃ ಕಾಂಗ್ರೆಸ್ ಗ್ಯಾರಂಟಿ ಲೋಕಸಭೆ ಚುನಾವಣೆವರೆಗೆ ಮಾತ್ರ ಆ ನಂತರ ಇವರ ವಾರಂಟಿ ಮುಗಿಯುತ್ತೆ ಎಂದು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಲೇವಡಿ ಮಾಡಿದರು.
ಬೆಂಗಳೂರಿನ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೈ ಗೂಂಡಾಗಿರಿ, ದೌರ್ಜನ್ಯ ಎಷ್ಟು ದಿನ ನಡೆಯುತ್ತದೆ. ಇವರು ನೀಡಿದ ಐದು ಗ್ಯಾರಂಟಿಗಳು ಈಗಾಗಲೇ ಜಾರಿಯಾಗದೆ ಸುಳ್ಳು ಗ್ಯಾರಂಟಿ ಎಂಬುದು ಗೊತ್ತಾಗಿದೆ.
ಸರ್ಕಾರ ಬೀಳೋದು ನಿಶ್ಚಿತ, ಮಹಾರಾಷ್ಟ್ರ ದಲ್ಲಿ ಶಿವಸೇನೆ ಸರ್ಕಾರ ಕಥೆ ಏನಾತಿತು ಎಂದು ಪ್ರಶ್ನಿಸಿದ ಅವರು, 135 ಸ್ಥಾನ ಅಲ್ಲ 200 ಸ್ಥಾನ ಇದ್ರೂ ಏನ್ಮಾಡಕ್ಕಾಗಲ್ಲ ಎಂದು ಹರಿಹಾಯ್ದರು.