ಪ್ರಮುಖ ಸುದ್ದಿ

ಸೋಮವಾರ ಮೈಲಾರಪ್ಪ ಸಗರ ಅವರ ಸಾಕ್ಷ್ಯ ಚಿತ್ರ ಬಿಡುಗಡೆ

ಅಪ್ರತಿಮ ರೈತ ಹೋರಾಟಗಾರನ ಸಾಕ್ಷ್ಯ ಚಿತ್ರ ಬಿಡುಗಡೆ

ಯಾದಗಿರಿ, ಶಹಾಪುರಃ ರೈತ ಹೋರಾಟಗಾರ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಮೈಲಾರಪ್ಪ ಸಗರ ಅವರ ಸಾಕ್ಷ್ಯ ಚಿತ್ರದ ಸಿ.ಡಿ. ಬಿಡುಗಡೆ ಸಮಾರಂಭವನ್ನು ಸಗರದ ಕಲಾನಿಕೇತನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ನವೆಂಬರ್ 19ರ ಸೋಮವಾರ ಸಂಜೆ 6 ಗಂಟೆಗೆ ಸಗರದ ಚಾವಡಿ ಕಟ್ಟೆಯ ಹತ್ತಿರ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಸವರಾಜ ಸಿನ್ನೂರ ಪ್ರಕಟಣೆಗೆ ತಿಳಿಸಿದ್ದಾರೆ.

ಸಮಾರಂಭವನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದು, ಮಾಜಿ ಶಾಸಕ ಗುರು ಪಾಟೀಲ ಶಿರವಾಳ ಜ್ಯೋತಿ ಬೆಳಗಿಸುವರು. ಗ್ರಾಮದ ಹಿರಿಯ ಮುಖಂಡ ಹಾಗೂ ಮಾಜಿ ಜಿಪಂ ಸದಸ್ಯ ಬಸನಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸುವರು.

ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಸಾಕ್ಷ್ಯ ಚಿತ್ರದ ಸಿ.ಡಿ. ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ|| ಚಂದ್ರಶೇಖರ ಸುಬೇದಾರ, ಶರಣಪ್ಪ ಸಲಾದಪುರ, ಸಾಹಿತಿಗಳಾದ ಸಿದ್ಧರಾಮ ಹೊನ್ಕಲ್, ಲಿಂಗಣ್ಣ ಪಡಶೆಟ್ಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಭೀಮರಾಯ ಸೇರಿ, ನಿಂಗಣ್ಣ ವಮ್ಮಾ, ಮಾನಪ್ಪ ವಠಾರ, ಸೈಯದ್ ರಫೀಕ್, ವಜೀರ್, ಮಂಜು ಬಿರೆದಾರ ಹಾಗೂ ಇತರರು ಭಾಗವಹಿಸಲಿದ್ದಾರೆ.

ನಂತರ ಜರುಗುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬಸಯ್ಯ ತೇಲ್ಕೂರ, ಜಾನಪದ ಸಂಗೀತ ಹಾಗೂ ವಿಜಯಲಕ್ಷ್ಮೀ ಕೆಂಗನಾಳ ಅವರಿಂದ ಸುಗಮ ಸಂಗೀತ ಮತ್ತು ಪಾರ್ವತಿ ಕಡೂರ ಅವರಿಂದ ವಚನ ಗಾಯನ ನಡೆಯಲಿದೆ. ವಿಶೇಷವಾಗಿ ಕಾರ್ಯಕ್ರಮದಲ್ಲಿ ಮೈಲಾರಪ್ಪನವರ ಮಗ ಬಿಎಸ್‍ಎಫ್ ಯೋಧ ದುರ್ಗಪ್ಪ ನಾಯಕ ಅವರು ಭಾಗವಹಿಸಲಿದ್ದಾರೆ. ಕಾರಣ ಸಾರ್ವಜನಿಕರು ಕಲಾ ಆರಾಧಕರು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button