GST ಕೌನ್ಸಿಲ್ ಸಭೆಃ ಯಾವುದರ GST ಇಳಿಕೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ
GST Council Meeting - Information on Which is cheap
GST ಕೌನ್ಸಿಲ್ ಸಭೆಃ ಯಾವುದು ಅಗ್ಗ ಯಾವುದು ದುಬಾರಿ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ
GST Council Meeting – Which is cheap and expensive on information
ವಿವಿ ಡೆಸ್ಕ್ಃ ಕೇಂದ್ರದ ಬಿಜೆಪಿ ಸರ್ಕಾರ ಕೆಲವು ಸರಕುಗಳ ಮೇಲಿನ ಜಿಎಸ್ಟಿ ಇಳಿಸಲು ನಿರ್ಧರಿಸಿದ್ದು,ಇತರೆ ವಸ್ತುಗಳ ಮೇಲೆ ಜಿಎಸ್ ಟಿ ವಿನಾಯಿತಿ ನೀಡಿದ್ದು, ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಣಯ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
GST ಕೌನ್ಸಿಲ್ ಸಭೆಯಲ್ಲಿ ನಾಲ್ಕು ವಸ್ತುಗಳ ಮೇಲಿನ ಸರಕು ಮತ್ತು ಸೇನಾ ತೆರಿಗೆಯನ್ನು ಕಡಿಮೆ ಮಾಡುವ ಕುರಿತು ನಿರ್ಧರಿಸಿದೆ. ಫಿಶ್ ಸೆಲ್ಯುಬುಲ್ ಪೇಸ್ಟ್, ಎಲ್ಡಿ ಸ್ಲ್ಯಾಗ್, ಬೇಯಿಸದ ಮತ್ತು ಹುರಿಯದ ತಿಂಡಿ ಉಂಡೆಗಳ ಮೇಲಿನ ಜಿಎಸ್ ಟಿಯನ್ನು ಶೇ.18 ರಿಂದ ಶೇ.5 ಕ್ಕೆ ಇಳಿಸಲಾಗಿದೆ. ಅಲ್ಲದೆ ಸಿನಿಮಾ ಟಾಕೀಸ್ ಗಳಲ್ಲಿ ಮಾರಾಟ ಮಾಡುವ ಆಹಾರ ಮತ್ತು ಪಾನೀಯಗಳ ಮೇಲೆ ವಿಧಿಸಿದ್ದ GST ಯನ್ನು ಶೇ. 18 ರಿಂದ ಶೇ.5 ಕ್ಕೆ ಇಳಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ಮತ್ತು ವಿಶೇಷವಾಗಿ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಔಷಧಿಗಳು ಸೇರಿದಂತಡ ಅಪರೂಪದ ಖಾಯಿಲೆಗಳಿಗೆ ಬಳಸುವ ಔಷಧಗಳ ಮೇಲಿನ ಜಿಎಸ್ ಟಿ ವಿನಾಯತಿ ನೀಡಿರುವುದಾಗಿ ಸಚಿವೆ ಘೋಷಿಸಿದ್ದಾರೆ.
GST ಕೌನ್ಸಿಲ್ ಸಭೆಯಲ್ಲಿ ಕೇಂದ್ರ ಸರ್ಕಾರವು ನಾಲ್ಕು ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನ ಕಡಿಮೆ ಮಾಡಲು ನಿರ್ಧರಿಸಿದೆ. ಅವುಗಳೆಂದ್ರೆ, ಫಿಶ್ ಸೆಲ್ಯುಬುಲ್ ಪೇಸ್ಟ್, ಎಲ್ಡಿ ಸ್ಲ್ಯಾಗ್, ಬೇಯಿಸದ ಮತ್ತು ಹುರಿಯದ ತಿಂಡಿ ಉಂಡೆಗಳ ಮೇಲಿನ ಜಿಎಸ್ಟಿಯನ್ನ ಶೇಕಡಾ 18 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ.
ಇನ್ನು ಅನುಕರಣೆ ಝರಿ ದಾರದ ಮೇಲಿನ ಜಿಎಸ್ಟಿಯನ್ನ ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದೆ. ಹಾಗೂ ಸಿನಿಮಾ ಹಾಲ್’ಗಳಲ್ಲಿ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್ಟಿಯನ್ನ ಶೇ.18ರಿಂದ ಶೇ.5ಕ್ಕೆ ಇಳಿಸಲಾಗಿದೆ.
ಮೂರು ವಸ್ತುಗಳ ಮೇಲೆ GST ದರಗಳನ್ನು ವಿನಾಯಿತಿ ನೀಡಲಾಗಿದೆ.
ಇನ್ನು ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಗಳು ಮತ್ತು ವಿಶೇಷ ಔಷಧಗಳ ಮೇಲೆ ಜಿಎಸ್ಟಿ ವಿನಾಯಿತಿ ನೀಡುವುದಾಗಿ ಘೋಷಿಸಲಾಗಿದೆ.
ಖಾಸಗಿ ವ್ಯಕ್ತಿಗಳು ಒದಗಿಸುವ ಉಪಗ್ರಹ ಉಡಾವಣೆ ಸೇವೆಗಳಿಗೆ ರೈತರಿಂದ ಸಹಕಾರಿ ಸಂಘಗಳಿಗೆ ಕಚ್ಚಾ ಹತ್ತಿಗೆ ತೆರಿಗೆ ಇರುತ್ತದೆ ಎಂದು ಜಿಎಸ್ಟಿ ಕೌನ್ಸಿಲ್ ಸ್ಪಷ್ಟಪಡಿಸಿದೆ.
ಇನ್ನು GST ಕೌನ್ಸಿಲ್ MUV ಗಳ ಮೇಲೆ 22 ಶೇಕಡಾ ಸೆಸ್ ದರವನ್ನ ಅನುಮೋದಿಸಿದೆ. ಆದ್ರೆ, ಇದರಲ್ಲಿ ಸೆಡಾನ್’ಗಳು ಇರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಗೇಮಿಂಗ್, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳ ಮೇಲೆ ಶೇಕಡಾ 28 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನ (GST) ಘೋಷಿಸಿದೆ. ಆನ್ಲೈನ್ ಗೇಮಿಂಗ್, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳ ಮೇಲೆ 28 ಪ್ರತಿಶತ ಜಿಎಸ್ಟಿ ವಿಧಿಸಲು ಬಹಳ ಹಿಂದೆಯೇ ಸಚಿವರ ಗುಂಪು ಜಿಎಸ್ಟಿ ಕೌನ್ಸಿಲ್ಗೆ ಶಿಫಾರಸು ಮಾಡಿತ್ತು.
ಈ ಬಗ್ಗೆ ಜಿಎಸ್ಟಿ ಕೌನ್ಸಿಲ್ನಲ್ಲಿ ಹಲವು ಬಾರಿ ಚರ್ಚೆಯಾಗಿದೆ. ಅಂತಿಮವಾಗಿ, GST ಕೌನ್ಸಿಲ್ ಗೇಮಿಂಗ್, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳನ್ನ 28 ಪ್ರತಿಶತ GST ಸ್ಲ್ಯಾಬ್ ಅಡಿಯಲ್ಲಿ ತರಲು ನಿರ್ಧರಿಸಿತು. ಜಿಎಸ್ಟಿ ಕೌನ್ಸಿಲ್ ಆನ್ಲೈನ್ ಗೇಮಿಂಗ್ನ ಸಂಪೂರ್ಣ ಮುಖಬೆಲೆಯ ಮೇಲೆ ಶೇಕಡಾ 28ರಷ್ಟು ತೆರಿಗೆ ದರವನ್ನ ವಿಧಿಸಲು ನಿರ್ಧರಿಸಿದೆ, ಇನ್ನೀದು ಕೌಶಲ್ಯ ಮತ್ತು ಚಾನ್ಸ್ ಗೇಮಿಂಗ್ ನಡುವೆ ವ್ಯತ್ಯಾಸವನ್ನ ಹೊಂದಿಲ್ಲ.
ಪೂರ್ಣ ಮುಖಬೆಲೆಯ ಮೇಲೆ 28 ಪ್ರತಿಶತ GST ಆನ್ಲೈನ್ ಗೇಮಿಂಗ್ಗೆ ಮಾತ್ರವಲ್ಲದೆ ಕ್ಯಾಸಿನೊಗಳು ಮತ್ತು ಕುದುರೆ ರೇಸಿಂಗ್ಗಳಿಗೂ ಅನ್ವಯಿಸುತ್ತದೆ. ಈ ಹಿಂದೆ, ಆನ್ಲೈನ್ ಗೇಮಿಂಗ್, ಕ್ಯಾಸಿನೊ ಮತ್ತು ರೇಸ್ಕೋರ್ಸ್ಗಳನ್ನು ಶೇಕಡಾ 28 ರಷ್ಟು ಜಿಎಸ್ಟಿ ಸ್ಲ್ಯಾಬ್ನ ಅಡಿಯಲ್ಲಿ ತರುವ ವಿಷಯದ ಕುರಿತು ಸಚಿವರ ಗುಂಪು ಹಲವಾರು ಬಾರಿ ಚರ್ಚಿಸಿತ್ತು.
GST ಕೌನ್ಸಿಲ್ಗೆ ಶಿಫಾರಸು ಮಾಡಲಾಗಿದೆ. ಈ ಬಗ್ಗೆ ವರದಿಯನ್ನೂ ಸಲ್ಲಿಸಲಾಗಿದೆ. ಆನ್ಲೈನ್ ಗೇಮಿಂಗ್ ಉದ್ಯಮದಿಂದ ಇವುಗಳನ್ನ 18 ಪ್ರತಿಶತ ಜಿಎಸ್ಟಿ ಸ್ಲ್ಯಾಬ್ನಲ್ಲಿ ಇರಿಸಲು ಬೇಡಿಕೆಗಳಿವೆ.
ಹಲವು ವಸ್ತುಗಳು ಈಗಾಗಲೇ 28 ಪ್ರತಿಶತ ಜಿಎಸ್ಟಿ ವ್ಯಾಪ್ತಿಗೆ ಒಳಪಟ್ಟಿವೆ. ಸಿನ್ ಗೂಡ್ಸ್ ಎಂದರೆ ಪಾತಕಿ ಸರಕುಗಳನ್ನ ಹೆಚ್ಚಿನ ಜಿಎಸ್ ಟಿ ಸ್ಲ್ಯಾಬ್’ಗೆ ಸೇರಿಸಲಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ.
ಪಾನ್ ಮಸಾಲ, ಕೆಫೀನ್ ಯುಕ್ತ ಪಾನೀಯಗಳು, ಕಾರ್ಬೊನೇಟೆಡ್ ಪಾನೀಯಗಳು, ತಂಬಾಕು, ಸಿಗರೇಟ್, ತಂಬಾಕು ಉತ್ಪನ್ನಗಳು, ಟೈರ್, ಎಸಿಗಳು, ಪಾತ್ರೆ ತೊಳೆಯುವ ಯಂತ್ರಗಳು, ಧೂಮಪಾನದ ಪೈಪ್ಗಳು ಎಲ್ಲವೂ 28 ಪ್ರತಿಶತ ಜಿಎಸ್ಟಿ ಸ್ಲ್ಯಾಬ್ನಲ್ಲಿವೆ.