ಕಾವ್ಯ

ಆತ್ಮವಿಶ್ವಾಸ-ಸೂಕ್ಷ್ಮಅಹಂಕಾರ ಮುದನೂರ್ ಕವಿತೆ

ಆತ್ಮವಿಶ್ವಾಸ-ಸೂಕ್ಷ್ಮಅಹಂಕಾರ

ಸರ್ವರಿಗೂ ಸಹಾಯ
ಮಾಡುವ ನಿಸ್ವಾರ್ಥಿಯ
ಸ್ನೇಹಜೀವಿ ನಾನು.

ಸ್ವತಃ ಕಷ್ಟ ಎದುರಿಸಬೇಕಾದ
ಪ್ರಸಂಗ ಬಂದಾಗ
ಜೊತೆಗೆ ಇದ್ದವರು
ಸಹಾಯ ಪಡೆದವರು
ಯಾರು ನಿಲ್ಲಲಿಲ್ಲ.

ಆಗ ಜೊತೆಗಿದದ್ದು
ಆತ್ಮ ವಿಶ್ವಾಸ
ಒಂದೇ..

ಅದುವೆ ಬದುಕಿನಲ್ಲಿ
ಸೂಕ್ಷ್ಮ ಅಹಂಕಾರವನ್ನುಂಟು
ಮಾಡಿರಬಹುದಾ..

ಮಲ್ಲಿಕಾರ್ಜುನ ಮುದನೂರ.

Related Articles

7 Comments

  1. ಮುದನೂರ ಮುಖಾರವಿಂದದಲ್ಲಿ ಮುಗುಳ್ನಗೆ ಫಳಫಳಿಸುತ್ತಿರುತ್ತದೆಯೇ ಹೊರತು ಲವಲೇಶದಷ್ಟೂ ಅಹಮಿಕೆ ಇಲ್ಲ. ಇನ್ನು ಅಹಂ ಎಂಬುದು ಹಿತಮಿತವಾಗಿ ನಮ್ಮೊಳಗೆ ಇದ್ದೇ ಇರುತ್ತದೆ, ಇರಬೇಕು ಕೂಡ. ಸಣ್ಣದೊಂದು ಅಹಮಿಕೆ ಸ್ವಪ್ರಯತ್ನದಿಂದಲೇ ಮೇಲೆ ಬರಬೇಕೆಂಬ ಛಲವನ್ನು ನಮ್ಮೊಳಗೆ ಜೀವಂತವಾಗಿಡುತ್ತದೆ.

  2. Your comment..ಅಹಂಕಾರ ಅಲ್ಲ ಅನುಭವದ ಆತ್ಮವಿಶ್ವಾಸ

Leave a Reply

Your email address will not be published. Required fields are marked *

Back to top button